ಬೆಂಗಳೂರು: ದೇಶದ ಬೇರೆ ನಗರಗಳಲ್ಲೂ ರಸ್ತೆಗುಂಡಿಗಳಿವೆ. ನಮ್ಮಲ್ಲಿ ಇದಕ್ಕೆ ಪರಿಹಾರ ನೀಡಲು ವೈಟ್ ಟಾಪಿಂಗ್ ರಸ್ತೆ ಮಾಡುತ್ತಿದ್ದೇವೆ. 60% ರಸ್ತೆಗಳು ವೈಟ್ ಟಾಪಿಂಗ್ ಮಾಡಲಾಗಿದೆ. ನಮ್ಮ ನಗರದಲ್ಲಿ 1.35 ಕೋಟಿ ವಾಹನಗಳಿವೆ. 1.40 ಕೋಟಿ ಜನಸಂಖ್ಯೆ ಇದೆ. ಸಂಚಾರ ದಟ್ಟಣೆ ವಿಚಾರದಲ್ಲಿ ನಮ್ಮ ರಸ್ತೆಗಳು ಈಗಿನ ವಾಹನ ದಟ್ಟಣೆಗೆ ನಿಭಾಯಿಸಲು ಆಗುತ್ತಿಲ್ಲ ಎಂದು ಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಆದಾಯ ಬಂದಷ್ಟು ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಸಹಾಯವಾಗಲಿದೆ. ಬೆಂಗಳೂರು ಜೊತೆಗೆ ಗ್ರಾಮೀಣ ಭಾಗಗಳ ಅಭಿವೃದ್ಧಿ ನಮ್ಮ ಆದ್ಯತೆ. ಈ ಸಮಸ್ಯೆ ನಿವಾರಣೆಗೆ 47 ಕಿ.ಮೀ ಟನಲ್ ರಸ್ತೆ, 115 ಕಿ. ಮೀ ಎಲಿವೆಟೆಡ್ ಕಾರಿಡಾರ್ ನಿರ್ಮಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಟೆಂಡರ್ ಪ್ರಕ್ರಿಯೆ ಮುಗಿದಿದೆ. ದೇಶದ ಬಿಜೆಪಿ ರಾಜ್ಯಗಳಲ್ಲೂ ಈ ಯೋಜನೆ ಮಾಡಲಾಗುತ್ತಿದೆ. ಆದರೆ ಬಿಜೆಪಿ ಸಂಸದ ಈ ವಿಚಾರದಲ್ಲಿ ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೇಕೆದಾಟು ಯೋಜನೆಯಲ್ಲಿ ಶೇಖರಣೆಯಾಗುವ 95% ನೀರು ತಮಿಳುನಾಡಿಗೆ ಹರಿಯುತ್ತದೆ. ಬೆಂಗಳೂರಿಗೆ ಮಾತ್ರ ಕುಡಿಯುವ ನೀರು ಪೂರೈಸಲಾಗುವುದು. ನೀರಾವರಿಗೆ ಒಂದು ಹನಿ ನೀರನ್ನು ಬಳಸುವುದಿಲ್ಲ. ತಮಿಳುನಾಡಿಗೆ ಇದು ಹೆಚ್ಚು ಪ್ರಯೋಜನವಾಗಲಿದೆ. ನಮ್ಮ ನೆಲದಲ್ಲಿ ನಮ್ಮ ಯೋಜನೆಗೆ ಯಾರ ಅಪ್ಪಣೆ ಬೇಕಿಲ್ಲ ಎಂದು ಕೋರ್ಟ್ ಹೇಳಿದೆ. ನಾವು ತಮಿಳುನಾಡಿನ ಪಾಲಿನ 177 ಟಿಎಂಸಿ ಹರಿಸಲು ನಾವು ಬದ್ಧ ಎಂದು ತಿಳಿಸಿದರು.
ತುಂಗಭದ್ರಾ ವಿಚಾರದಲ್ಲಿ ಕೇಂದ್ರ ಸಚಿವ ಸಿ ಆರ್ ಪಾಟೀಲ್ ಅವರ ನೇತೃತ್ವದಲ್ಲಿ ಮೂರು ರಾಜ್ಯಗಳ ಸಿಎಂ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ನ್ಯಾಯಾಲಯಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯುವುದಿಲ್ಲ. ಕೂತು ಚರ್ಚೆ ಮಾಡಿದರೆ ಪರಿಹಾರ ಸಿಗುತ್ತದೆ. ಇದು ನಮ್ಮ ಆದ್ಯತೆ ಎಂದು ಸಿಎಂ ತಿಳಿಸಿದರು.
- Bengaluru News
- Bengaluru Traffic
- Cauvery Water Dispute
- DK Shivakumar
- Elevated Corridor Bengaluru
- Karnataka Infrastructure
- Mekedatu Project
- Tungabhadra River Issue
- Tunnel Road Project
- White Topping Roads Bengaluru
- ಎಲಿವೇಟೆಡ್ ಕಾರಿಡಾರ್
- ಕರ್ನಾಟಕ ಸರ್ಕಾರ
- ಕಾವೇರಿ ನೀರು ಹಂಚಿಕೆ
- ಟನಲ್ ರಸ್ತೆ
- ಡಿ. ಕೆ. ಶಿವಕುಮಾರ್
- ತುಂಗಭದ್ರಾ ಜಲಾಶಯ
- ಬೆಂಗಳೂರು ರಸ್ತೆಗಳು
- ಬೆಂಗಳೂರು ಸಂಚಾರ ದಟ್ಟಣೆ
- ಮೇಕೆದಾಟು ಯೋಜನೆ
- ವೈಟ್ ಟಾಪಿಂಗ್





Leave a comment