Home ದಾವಣಗೆರೆ ನನ್ನ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಇಲಾಖೆ ಮುಚ್ಚಬೇಕೇ? ಕೇಂದ್ರ ಸರ್ಕಾರ ಈ ಇಲಾಖೆ ಮುಚ್ಚುವುದೇ?: ಧಾರ್ಮಿಕ ಓಲೈಕೆ ಬಗ್ಗೆ ಡಿ. ಕೆ. ಶಿವಕುಮಾರ್ ಖಡಕ್ ಉತ್ತರ!
ದಾವಣಗೆರೆಬೆಂಗಳೂರು

ನನ್ನ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಇಲಾಖೆ ಮುಚ್ಚಬೇಕೇ? ಕೇಂದ್ರ ಸರ್ಕಾರ ಈ ಇಲಾಖೆ ಮುಚ್ಚುವುದೇ?: ಧಾರ್ಮಿಕ ಓಲೈಕೆ ಬಗ್ಗೆ ಡಿ. ಕೆ. ಶಿವಕುಮಾರ್ ಖಡಕ್ ಉತ್ತರ!

Share
ಸರ್ಕಾರ
Share

ಬೆಂಗಳೂರು: ನಾನು ನನ್ನ ಸರ್ಕಾರದಲ್ಲಿ ಅಲ್ಪಸಂಖ್ಯಾರ ಇಲಾಖೆ ಮುಚ್ಚಬೇಕೇ? ಕೇಂದ್ರ ಸರ್ಕಾರ ಆ ಇಲಾಖೆ ಮುಚ್ಚುವುದೇ? ಎಂದು ಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ 18-20% ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದೇ ನಮ್ಮ ಕರ್ತವ್ಯ. ಅವರೂ ಭಾರತೀಯರು. ನಾವು ಎಲ್ಲಾ ಸಮುದಾಯದವರನ್ನು ಗೌರವಿಸುತ್ತೇವೆ ಎಂದು ತಿಳಿಸಿದರು.

ವಂದೇ ಮಾತರಂ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಸಿದ್ಧಾಂತ ಹಾಗೂ ತೀರ್ಮಾನಕ್ಕೆ ನಾವು ಬದ್ಧ. ಮುಂದಿನ ದಿನಗಳಲ್ಲಿ ಅದನ್ನೇ ಪಾಲಿಸುತ್ತೇವೆ ಎಂದು ತಿಳಿಸಿದರು.

ಎಸ್ಐಆರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಬ್ಬ ಅರ್ಹ ಮತದಾರರ ಮತದಾನದ ಹಕ್ಕು ರಕ್ಷಿಸುವುದು ನಮ್ಮ ಕರ್ತವ್ಯ. ಹೀಗಾಗಿ ಮತದಾನದ ಹಕ್ಕು ರಕ್ಷಣೆಗೆ ನಾವು ನಿವಾಸ ದೃಢಿಕರಣ ಹಾಗೂ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದೇವೆ ಎಂದು ತಿಳಿಸಿದರು.

028ರಲ್ಲಿ ಈಗಿರುವುದಕ್ಕಿಂತ ಹೆಚ್ಚಿನ ಸೀಟು ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. 2029ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ದೇಶದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles