Home ದಾವಣಗೆರೆ ಹುಡುಗರು ಬೈದರೆ ತಪ್ಪಿಲ್ಲ, ಹುಡುಗಿಯರು ಬೈದರೆ ಸಾಂಸ್ಕೃತಿಕ ಆಘಾತ ಎಂದಿರುವುದು ನರೇಂದ್ರ ಮೋದಿ ಪಿತೃಪ್ರಧಾನ ಮನಸ್ಥಿತಿ: ರಾಹುಲ್ ಗಾಂಧಿ ವಾಗ್ದಾಳಿ!
ದಾವಣಗೆರೆನವದೆಹಲಿಬೆಂಗಳೂರು

ಹುಡುಗರು ಬೈದರೆ ತಪ್ಪಿಲ್ಲ, ಹುಡುಗಿಯರು ಬೈದರೆ ಸಾಂಸ್ಕೃತಿಕ ಆಘಾತ ಎಂದಿರುವುದು ನರೇಂದ್ರ ಮೋದಿ ಪಿತೃಪ್ರಧಾನ ಮನಸ್ಥಿತಿ: ರಾಹುಲ್ ಗಾಂಧಿ ವಾಗ್ದಾಳಿ!

Share
ರಾಹುಲ್ ಗಾಂಧಿ
Share

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪುಣೆಯಲ್ಲಿ ನಡೆದ ಚಾಟ್ರೋಂ ಕೀ ಗೂಂಜ್’ (Chhatron Ki Goonj) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಹೆಣ್ಣುಮಕ್ಕಳು ಬೈಗುಳ ಬಳಸಿದ್ದನ್ನು ಪ್ರಧಾನಿ ಮೋದಿ ‘ಸಾಂಸ್ಕೃತಿಕ ಆಘಾತ’ ಎಂದು ಬಣ್ಣಿಸಿದ್ದಕ್ಕೆ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ಹುಡುಗರು ಬೈದರೆ ಯಾವುದೇ ಸಮಸ್ಯೆಯಿಲ್ಲ, ಆದರೆ ಹುಡುಗಿಯರು ಬೈದರೆ ಮಾತ್ರ ಅದು ಸಾಂಸ್ಕೃತಿಕ ಆಘಾತವಾಗುತ್ತದೆ ಎಂಬುದು ಸಮಾಜದ ಪಿತೃಪ್ರಧಾನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಇದೇ ವೇಳೆ ‘ಮನುಸ್ಮೃತಿ’ ಹಾಗೂ ಪ್ರಾಚೀನ ಚಿಂತನೆಗಳ ವಿರುದ್ಧ ಕಿಡಿಕಾಡಿದ ಅವರು, ಮಹಿಳೆಯರು ತಮ್ಮ ಸ್ವಂತ ಸ್ವಾಯತ್ತತೆ ಹೊಂದಿದ್ದಾರೆ ಹೊರತು ತಂದೆ, ಪತಿ ಅಥವಾ ಮಗನ ಅಧೀನದಲ್ಲಲ್ಲ ಎಂದು ಪ್ರತಿಪಾದಿಸಿದ್ದಾರೆ. ದೇಶದ ಹೆಣ್ಣುಮಕ್ಕಳು ಧೈರ್ಯವಾಗಿ ನಿಂತು ಪಿತೃಪ್ರಧಾನ ವ್ಯವಸ್ಥೆಯನ್ನು ಮಟ್ಟಹಾಕುವಂತೆ (Smash Patriarchy) ಅವರು ಕರೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles