Home ಕ್ರೈಂ ನ್ಯೂಸ್ ಇವ್ರು ಹೆಣ್ಮಕ್ಕಳಾ? ಮೊಬೈಲ್ ಕಳೆದುಹೋದ್ದಿದ್ದೇ ತಪ್ಪಾಯ್ತು: ಕಾಲೇಜು ಹಾಸ್ಟೆಲ್‌ನಲ್ಲಿ ಚಾಟಿ, ಬಕೆಟ್‌ನೊಂದಿಗೆ ಹೊಡೆದಾಡಿದ ವಿದ್ಯಾರ್ಥಿನಿಯರು! 
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಇವ್ರು ಹೆಣ್ಮಕ್ಕಳಾ? ಮೊಬೈಲ್ ಕಳೆದುಹೋದ್ದಿದ್ದೇ ತಪ್ಪಾಯ್ತು: ಕಾಲೇಜು ಹಾಸ್ಟೆಲ್‌ನಲ್ಲಿ ಚಾಟಿ, ಬಕೆಟ್‌ನೊಂದಿಗೆ ಹೊಡೆದಾಡಿದ ವಿದ್ಯಾರ್ಥಿನಿಯರು! 

Share
ಮೊಬೈಲ್
Share

ಕಾಕಿನಾಡ: ಆಂಧ್ರಪ್ರದೇಶದ ಕಾಕಿನಾಡದ ಎಸ್‌ಕೆ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಮೊಬೈಲ್ ಫೋನ್ ಕಳೆದುಹೋದ ವಿಚಾರವಾಗಿ ಉಂಟಾದ ವಿವಾದವು ಸ್ಥಳೀಯ ಹಾಗೂ ಈಶಾನ್ಯ ಭಾರತದ ವಿದ್ಯಾರ್ಥಿಗಳ ನಡುವೆ ದೊಡ್ಡ ಮಟ್ಟದ ಘರ್ಷಣೆಗೆ ದಾರಿ ಮಾಡಿಕೊಟ್ಟಿದೆ.

ಆಗಸ್ಟ್ 21 ರಂದು ಈಶಾನ್ಯ ಭಾರತದ (ಮುಖ್ಯವಾಗಿ ಮಣಿಪುರ ಮೂಲದ) ವಿದ್ಯಾರ್ಥಿನಿಯೊಬ್ಬರ ಮೊಬೈಲ್ ಫೋನ್ ಕಾಣೆಯಾಗಿದೆ. ಈ ವಿಚಾರವಾಗಿ ವಿದ್ಯಾರ್ಥಿನಿಯರ ನಡುವೆ ಆರಂಭವಾದ ಮಾತಿನ ಚಕಮಕಿ, ಬಳಿಕ ಬೀದಿಗಿಳಿದು ಹೊಡೆದಾಡಿಕೊಳ್ಳುವ ವರೆಗೆ ಹೋಗಿದೆ. ಈ ಘಟನೆಯಲ್ಲಿ ಕೆಲವರಿಗೆ ಸಾಧಾರಣ ಗಾಯಗಳಾಗಿವೆ.

ವಿಷಯ ತಿಳಿದು ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಎಂ.ಎನ್. ಹರೇಂಧಿರಾ ಪ್ರಸಾದ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಜಿ. ಬಿಂದು ಮಾಧವ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಘಟನೆಯ ಬಗ್ಗೆ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಈಶಾನ್ಯ ರಾಜ್ಯಗಳ 31 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೇರೆ ವಸತಿ ನಿಲಯಕ್ಕೆ  ಸ್ಥಳಾಂತರಿಸಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles