Home ದಾವಣಗೆರೆ ಕೆಟ್ಟ ಆಲೋಚನೆಗಳೆಲ್ಲವೂ ಕೇವಲ ನಿರಾಶಾವಾದವಲ್ಲ: ಮನಃಶಾಸ್ತ್ರಜ್ಞರ ಅಚ್ಚರಿಯ ಮಾಹಿತಿ.
ದಾವಣಗೆರೆನವದೆಹಲಿಬೆಂಗಳೂರು

ಕೆಟ್ಟ ಆಲೋಚನೆಗಳೆಲ್ಲವೂ ಕೇವಲ ನಿರಾಶಾವಾದವಲ್ಲ: ಮನಃಶಾಸ್ತ್ರಜ್ಞರ ಅಚ್ಚರಿಯ ಮಾಹಿತಿ.

Share
ಮನಃಶಾಸ್ತ್ರಜ್ಞ
Share

ನವದೆಹಲಿ: ಯಾವುದೇ ಮಹತ್ವದ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಅಥವಾ ಪ್ರಯಾಣ ಬೆಳೆಸುವ ಮುನ್ನ ಅಥವಾ ವಿಮಾನ ಹತ್ತುವ ಪೂರ್ವದಲ್ಲೇ ಎಲ್ಲವೂ ತಪ್ಪಿಹೋಗುತ್ತದೆ ಎಂದು ಊಹಿಸಿಕೊಳ್ಳುವ ಅಭ್ಯಾಸ ನಿಮಗಿದೆಯೇ? ಹಾಗಾದರೆ ಇದು ಕೇವಲ ನಕಾರಾತ್ಮಕ ಯೋಚನೆಯಲ್ಲ ಎಂದು ಮನಃಶಾಸ್ತ್ರ ಹೇಳುತ್ತದೆ.

ಹಿಂದೆಂದೂ ಇಲ್ಲದಷ್ಟು ಕೆಟ್ಟ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳುವುದು ಯಾವಾಗಲೂ ಸರಳ ನಿರಾಶಾವಾದ (Pessimism) ಆಗಿರಬೇಕಿಲ್ಲ. ಇದರ ಹಿಂದೆ ‘ರಕ್ಷಣಾತ್ಮಕ ನಿರಾಶಾವಾದ’ (Defensive Pessim pessimism), ಅನಿಶ್ಚಿತತೆಯ ಅಸಹನೆ (Intolerance of Uncertainty), ಬೆದರಿಕೆ ಮುನ್ಸೂಚನೆ (Threat Anticipation) ಮತ್ತು ಆತಂಕದ ಆಲೋಚನೆಗಳು ಅಡಿಕೊಂಡಿರುತ್ತವೆ ಎಂದು ಮನೋವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ರಕ್ಷಣಾತ್ಮಕ ನಿರಾಶಾವಾದ (Defensive Pessimism):

ಮನಃಶಾಸ್ತ್ರಜ್ಞೆ ಜೂಲಿ ನೊರೆಮ್ (Julie Norem) ಅವರ ಪ್ರಕಾರ, ಕೆಲವರು ಮುಂಚಿತವಾಗಿ ನಕಾರಾತ್ಮಕ ಫಲಿತಾಂಶಗಳನ್ನು ಊಹಿಸಿಕೊಳ್ಳುವ ಮೂಲಕ ತಮ್ಮನ್ನು ತಾವು ಮಾನಸಿಕವಾಗಿ ಸಜ್ಜುಗೊಳಿಸಿಕೊಳ್ಳುತ್ತಾರೆ. ಇದು ಸೋಲನ್ನು ಒಪ್ಪಿಕೊಳ್ಳುವುದಲ್ಲ, ಬದಲಿಗೆ ಆಪತ್ತನ್ನು ಎದುರಿಸಲು ಮಾಡುವ ಒಂದು ರೀತಿಯ ಮುನ್ನೆಚ್ಚರಿಕೆ ಅಥವಾ ಪ್ಲಾನಿಂಗ್ ಟೂಲ್ ಆಗಿದೆ.

ಅನಿಶ್ಚಿತತೆಯ ಬಗ್ಗೆ ಅಸಹನೆ (Intolerance of Uncertainty):

ಜೀವನದಲ್ಲಿ ಮುಂದೇನು ನಡೆಯಲಿದೆ ಎಂಬ ಸ್ಪಷ್ಟತೆ ಇಲ್ಲದಿರುವುದು ಕೆಲವರಿಗೆ ತೀವ್ರ ಅಸ್ವಸ್ಥತೆಯನ್ನುಂಟು ಮಾಡುತ್ತದೆ. ಇದರಿಂದ ಮಿದುಳು ಪದೇಪದೆ “ಹಾಗೊಂದು ವೇಳೆ ಹೀಗಾದರೆ?” (What if?) ಎಂಬ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿಕೊಳ್ಳುತ್ತದೆ.

ಮಿದುಳಿನ ರಕ್ಷಣಾ ವ್ಯವಸ್ಥೆ ಮತ್ತು ವಿಕಾಸ (Threat Anticipation):

ಮಾನವನ ಮಿದುಳು ವಿಕಾಸದ ಹಂತದಲ್ಲೇ ಸಂಭಾವ್ಯ ಅಪಾಯಗಳನ್ನು ಮೊದಲೇ ಗ್ರಹಿಸಿ ಎಚ್ಚೆತ್ತುಕೊಳ್ಳುವಂತೆ ರೂಪುಗೊಂಡಿದೆ. ಆಧುನಿಕ ಬದುಕಿನ ಸಣ್ಣಪುಟ್ಟ ಸವಾಲುಗಳಲ್ಲೂ ಮಿದುಳು ಇದೇ ಹಳೆಯ ತಂತ್ರವನ್ನು ಅನ್ವಯಿಸಿ ಮುನ್ನೆಚ್ಚರಿಕೆ ವಹಿಸಲು ಪ್ರಯತ್ನಿಸುತ್ತದೆ.

ಅತಿರೇಕದ ಆಲೋಚನೆ ಮತ್ತು ದುಷ್ಪರಿಣಾಮಗಳು:

ಕೆಟ್ಟ ಯೋಚನೆಗಳು ಸಿದ್ಧತೆಗೆ ಸಹಾಯ ಮಾಡಿದರೆ ಅದು ಉಪಯುಕ್ತ. ಆದರೆ ಅದುವೇ ಅತಿರೇಕಕ್ಕೆ ತಿರುಗಿ ವಿಪರೀತ ನಕಾರಾತ್ಮಕವಾಗಿ ಯೋಚಿಸುವುದನ್ನು ‘ಕ್ಯಾಟಾಸ್ಟ್ರೋಫೈಸಿಂಗ್’ (Catastrophising) ಎನ್ನಲಾಗುತ್ತದೆ. ಇದು ಯಾವುದೇ ಪ್ರಾಯೋಗಿಕ ಪ್ರಯೋಜನವಿಲ್ಲದೆ ಕೇವಲ ಆತಂಕವನ್ನು ಮಾತ್ರ ಹೆಚ್ಚಿಸುತ್ತದೆ.

Share

Leave a comment

Leave a Reply

Your email address will not be published. Required fields are marked *

Related Articles