Home ಕ್ರೈಂ ನ್ಯೂಸ್ ರಾಹುಲ್ ಗಾಂಧಿ ಧರಣಿ ‘ಪೊಲಿಟಿಕಲ್ ಡ್ರಾಮಾ’, ವಿಪಕ್ಷ ನಾಯಕನ ಧೋರಣೆಗೆ ತನಿಖೆಯೇ ಉತ್ತರ’: ಸ್ಮೃತಿ ಇರಾನಿ ಬಾಂಬ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರಾಹುಲ್ ಗಾಂಧಿ ಧರಣಿ ‘ಪೊಲಿಟಿಕಲ್ ಡ್ರಾಮಾ’, ವಿಪಕ್ಷ ನಾಯಕನ ಧೋರಣೆಗೆ ತನಿಖೆಯೇ ಉತ್ತರ’: ಸ್ಮೃತಿ ಇರಾನಿ ಬಾಂಬ್!

Share
ರಾಹುಲ್ ಗಾಂಧಿ
Share

ನವದೆಹಲಿ: ವಿಪಕ್ಷ ನಾಯಕ ರಾಹುಲ್ ಗಾಂಧಿ ಧರಣಿ ಕೇವಲ ಪೊಲಿಟಿಕಲ್ ಡ್ರಾಮಾ ಎಂದು ಬಿಜೆಪಿ ನಾಯಕಿ ಸ್ಮುೃತಿ ಇರಾನ್ ಬಾಂಬ್ ಸಿಡಿಸಿದ್ದಾರೆ. 

ಎನ್ ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ್ದಾರೆ.

ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ ವೇಳೆ ಗಾಯಗೊಂಡ ವಿದ್ಯಾರ್ಥಿಗೆ ಬೆಂಬಲವಾಗಿ ಪೊಲೀಸ್ ಠಾಣೆ ಮುಂದೆ ರಾಹುಲ್ ಗಾಂಧಿ ನಡೆಸುತ್ತಿರುವ ಧರಣಿಯನ್ನು “ರಾಜಕೀಯ ಪ್ರದರ್ಶನ (Posturing)” ಎಂದು ಕರೆದಿರುವ ಅವರು, ಇದು ಯುವಜನರ ಅಥವಾ ವಿದ್ಯಾರ್ಥಿಗಳ ಪರವಾದ ನೈಜ ಹೋರಾಟವಲ್ಲ ಎಂದು ದೂರಿದ್ದಾರೆ.

ಕಳೆದ ತಿಂಗಳು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೆಲೆಟ್ ಗನ್‌ಗೆ ಗಾಯಗೊಂಡ ವಿದ್ಯಾರ್ಥಿಯೊಬ್ಬನಿಗೆ ಎಫ್‌ಐಆರ್ ದಾಖಲಿಸಲು ಆಗ್ರಹಿಸಿ ರಾಹುಲ್ ಧರಣಿ ಕುಳಿತಿದ್ದಾರೆ. ಈ ಬಗ್ಗೆ ಮಾತನಾಡಿದ ಸ್ಮೃತಿ ಇರಾನಿ, “ಸಂವೇದನಾಶೀಲ ವಿಷಯಗಳಲ್ಲೂ ರಾಹುಲ್ ಗಾಂಧಿ ಗಂಭೀರತೆ ತೋರುತ್ತಿಲ್ಲ. ಪೊಲೀಸ್ ಠಾಣೆಯಲ್ಲೇ ಚಾಕೊಲೇಟ್ ತೂರಿ, ನಗುತ್ತಾ ಕಾಲ ಕಳೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ,” ಎಂದಿದ್ದಾರೆ.

ಅಲ್ಲದೆ, ತನಿಖೆ ನಡೆಯುತ್ತಿರುವಾಗಲೇ ಭದ್ರತಾ ಪಡೆಗಳು ಮತ್ತು ಅರೆಸೇನಾ ಪಡೆಗಳ ವಿರುದ್ಧ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಹಾಗೂ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *