Home ದಾವಣಗೆರೆ ನಿಮ್ಮ ಆಧಾರ್ ಬಳಸಿ “ಉಗ್ರರಿಗೆ 2.5 ಕೋಟಿ ರೂ. ವರ್ಗಾವಣೆ” ಎಂದು ಬೆದರಿಸಿ ಯುಪಿ ವೈದ್ಯನಿಗೆ ರಾತ್ರಿಯಿಡಿ ಡಿಜಿಟಲ್ ಅರೆಸ್ಟ್! ಮುಂದೇನಾಯ್ತು?
ದಾವಣಗೆರೆನವದೆಹಲಿಬೆಂಗಳೂರು

ನಿಮ್ಮ ಆಧಾರ್ ಬಳಸಿ “ಉಗ್ರರಿಗೆ 2.5 ಕೋಟಿ ರೂ. ವರ್ಗಾವಣೆ” ಎಂದು ಬೆದರಿಸಿ ಯುಪಿ ವೈದ್ಯನಿಗೆ ರಾತ್ರಿಯಿಡಿ ಡಿಜಿಟಲ್ ಅರೆಸ್ಟ್! ಮುಂದೇನಾಯ್ತು?

Share
ಡಿಜಿಟಲ್ ಅರೆಸ್ಟ್
Share

ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬರೇಲಿಯಲ್ಲಿ ಪ್ರಸಿದ್ಧ ವೈದ್ಯರೊಬ್ಬರನ್ನು ಭಯೋತ್ಪಾದನಾ ನಿಗ್ರಹ ದಳದ  ಅಧಿಕಾರಿಗಳೆಂದು ನಟಿಸಿ ಸೈಬರ್ ವಂಚಕರು ಇಡೀ ರಾತ್ರಿ ‘ಡಿಜಿಟಲ್ ಅರೆಸ್ಟ್’  ಮಾಡಿ ಲಕ್ಷಾಂತರ ರೂಪಾಯಿ ಲೂಟಿ ಮಾಡಲು ಯತ್ನಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆದರೆ, ಸಕಾಲಿಕ ಪೊಲೀಸ್ ಹಸ್ತಕ್ಷೇಪದಿಂದ ದೊಡ್ಡ ಮಟ್ಟದ ಹಣದ ವಂಚನೆ ತಪ್ಪಿಸಲಾಗಿದೆ.

ವೈದ್ಯ ಡಾ. ಖುರ್ಷಿದ್ ಮುರಾದ್ ಸಿದ್ದಿಕಿ ಅವರ ಆಧಾರ್ ಕಾರ್ಡ್ ಬಳಸಿ ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದ್ದು, ಆ ಖಾತೆಯಿಂದ ಉಗ್ರ ಸಂಘಟನೆಗಳಿಗೆ 2.5 ಕೋಟಿ ರೂ. ಹಣ ವರ್ಗಾವಣೆಯಾಗಿದೆ ಎಂದು ವಂಚಕರು ಬೆದರಿಕೆ ಹಾಕಿದ್ದರು. ಬಂಧಿತ ಉಗ್ರನ ವಿಚಾರಣೆ ವೇಳೆ ನಿಮ್ಮ ಹೆಸರು ಕೇಳಿಬಂದಿದೆ ಎಂದು ನಂಬಿಸಿ, ವೈದ್ಯರನ್ನು ಒಂದು ಕೊಠಡಿಯಲ್ಲಿ ಯಾರ ಸಂಪರ್ಕಕ್ಕೂ ಸಿಗದಂತೆ ನಿರ್ಬಂಧಿಸಿ ಡಿಜಿಟಲ್ ಬಂಧನದಲ್ಲಿಡಲಾಗಿತ್ತು.

ಡಿಜಿಟಲ್ ಅರೆಸ್ಟ್ ಹೈಡ್ರಾಮಾ: ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ವಾಟ್ಸಾಪ್ ಕರೆ ಮಾಡಿದ ವಂಚಕರು, ತಾವು ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಬೆದರಿಕೆ ಹಾಕಿದ್ದಾರೆ. ಬಂಧನ ಭೀತಿಯಿಂದ ವೈದ್ಯರು ಮನೆಯಲ್ಲೇ ಕೋಣೆ ಕೆಯ್ಕೊಂಡು ಯಾರಿಗೂ ಸಿಗದಂತೆ ಪ್ರತ್ಯೇಕವಾಗಿದ್ದರು.

ಆರ್‌ಟಿಜಿಎಸ್ ಫಾರ್ಮ್ ಭರ್ತಿ ಮಾಡಲು ಯತ್ನ: ಮರುದಿನ ಬ್ಯಾಂಕ್‌ಗಳು ತೆರೆದ ತಕ್ಷಣ ವೈದ್ಯರ ಅಸಲಿ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡಲು ವಂಚಕರು ಸಂಚು ರೂಪಿಸಿದ್ದರು. ಆದರೆ ಹಣ ವರ್ಗಾವಣೆಗಾಗಿ (RTGS Form) ಫಾರ್ಮ್ ಭರ್ತಿ ಮಾಡುವಂತೆ ಸೂಚಿಸಿದಾಗ ವೈದ್ಯರಿಗೆ ಅನುಮಾನ ಮೂಡಿದೆ.

ಪೊಲೀಸರ ಎಂಟ್ರಿಯಿಂದ ಬಚಾವ್: ವೈದ್ಯರ ಅಸಹಜ ವರ್ತನೆ ಕಂಡು ಬಂದ ಹಿನ್ನೆಲೆ ವ್ಯವಸ್ಥಾಪಕರು ಹಾಗೂ ಕುಟುಂಬಸ್ಥರು ಎಚ್ಚೆತ್ತುಕೊಂಡು ತಕ್ಷಣ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರ ಸಮಯೋಚಿತ ಮಧ್ಯಪ್ರವೇಶದಿಂದ ಸೈಬರ್ ವಂಚಕರ ಬಲೆಗೆ ಬೀಳುವುದರಿಂದ ವೈದ್ಯರು ಪಾರಾಗಿದ್ದಾರೆ.

Share

Recent Posts

Recent Comments

No comments to show.
Related Articles