Home ಕ್ರೈಂ ನ್ಯೂಸ್ ಪ್ರಜ್ವಲ್ ರೇವಣ್ಣಗೆ ರಿಲೀಫ್: ಅಸಭ್ಯ ವೀಡಿಯೊ ಪ್ರಕರಣದಲ್ಲಿ ಡೀಫಾಲ್ಟ್ ಬೇಲ್ ಕೋರಲು ಹೈಕೋರ್ಟ್ ಅನುಮತಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರಜ್ವಲ್ ರೇವಣ್ಣಗೆ ರಿಲೀಫ್: ಅಸಭ್ಯ ವೀಡಿಯೊ ಪ್ರಕರಣದಲ್ಲಿ ಡೀಫಾಲ್ಟ್ ಬೇಲ್ ಕೋರಲು ಹೈಕೋರ್ಟ್ ಅನುಮತಿ!

Share
ಪ್ರಜ್ವಲ್ ರೇವಣ್ಣ
Share

ಬೆಂಗಳೂರು: ಅಪರಾಧ ತನಿಖಾ ದಳವುನಿಗದಿತ ಅವಧಿಯೊಳಗೆ ಚಾರ್ಜ್‌ಶೀಟ್ ಸಲ್ಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಶಾಸನಬದ್ಧ ಜಾಮೀನು ಕೋರಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ತೀರ್ಪು ನೀಡಿದೆ.

ಆದರೆ, ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕಾರಣ, ಈ ಜಾಮೀನು ಅರ್ಜಿಯಿಂದ ಅವರು ಸದ್ಯಕ್ಕೆ ಜೈಲಿನಿಂದ ಹೊರಬರುವುದು ಅಸಾಧ್ಯವೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. 2024 ರ ಲೋಕಸಭಾ ಚುನಾವಣೆಯ ಮುನ್ನ ಅಸಭ್ಯ ವೀಡಿಯೊಗಳು ವೈರಲ್ ಆದ ಬಳಿಕ ಪ್ರಜ್ವಲ್ ರೇವಣ್ಣ ವಿವಿಧ ಕ್ರಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಡೀಫಾಲ್ಟ್ ಬೇಲ್ ಹಕ್ಕು: ತನಿಖಾ ಸಂಸ್ಥೆಯು ನಿಗದಿತ ಗಡುವಿನೊಳಗೆ ದೋಷಾರೋಪಣಾ ಪಟ್ಟಿ ಸಲ್ಲಿಸದ ಕಾರಣ, ಕಾನೂನು ಪ್ರಕಾರ ಡಿಫಾಲ್ಟ್ ಬೇಲ್ ಕೋರಲು ಅರ್ಹರಾಗಿದ್ದಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಜೀವಾವಧಿ ಶಿಕ್ಷೆ ಮುಂದುವರಿಕೆ: 47 ವರ್ಷದ ಮನೆಗೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು 2025ರ ಆಗಸ್ಟ್ 2 ರಂದು ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 11 ಲಕ್ಷ ರೂ. ದಂಡ ವಿಧಿಸಿತ್ತು. ಈ ಶಿಕ್ಷೆ ರದ್ದುಗೊಳಿಸಲು ಹೈಕೋರ್ಟ್ ಈ ಹಿಂದೆ ನಿರಾಕರಿಸಿತ್ತು.

ಪ್ರಕರಣದ ಹಿನ್ನೆಲೆ: 2024ರ ಲೋಕಸಭಾ ಚುನಾವಣೆಗೂ ಮುನ್ನ ಪೆನ್‌ಡ್ರೈವ್ ಮೂಲಕ ಅಸಭ್ಯ ವೀಡಿಯೊಗಳು ಬೆಳಕಿಗೆ ಬಂದಿದ್ದು, ಸಿಐಡಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Share

Recent Posts

Recent Comments

No comments to show.
Related Articles