Home ಕ್ರೈಂ ನ್ಯೂಸ್ ವಂದೇ ಮಾತರಂ ಪ್ರೊಟೋಕಾಲ್ ವಿವಾದ: 1937ರ 2-ಚರಣ ನಿಯಮಕ್ಕೇ ಬದ್ಧ ಎಂದ ಕಾಂಗ್ರೆಸ್ CWC: ಮೊಂಡುತನ ಪ್ರದರ್ಶನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ವಂದೇ ಮಾತರಂ ಪ್ರೊಟೋಕಾಲ್ ವಿವಾದ: 1937ರ 2-ಚರಣ ನಿಯಮಕ್ಕೇ ಬದ್ಧ ಎಂದ ಕಾಂಗ್ರೆಸ್ CWC: ಮೊಂಡುತನ ಪ್ರದರ್ಶನ!

Share
ವಂದೇ ಮಾತರಂ
Share

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ರಾಷ್ಟ್ರಗೀತೆ ‘ವಂದೇ ಮಾತರಂ’ ಕುರಿತು ತನ್ನ 1937ರ ನಿರ್ಧಾರಕ್ಕೇ ಬದ್ಧವಾಗಿರುವುದಾಗಿ ಪುನರುಚ್ಚರಿಸಿದೆ. ಪಕ್ಷದ ಕಾರ್ಯಕ್ರಮಗಳಲ್ಲಿ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಕೆ.ಸಿ. ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.

ವಿವಾದದ ಹಿನ್ನೆಲೆ: ಸ್ವಾತಂತ್ರ್ಯ ದಿನಾಚರಣೆ ಹಾಗೂ ಗೋವಾದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವಾಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರು ಗೀತೆಗೆ ಅವಮಾನ ಮಾಡಿದ್ದಾರೆ ಹಾಗೂ ಅಪೂರ್ಣ ಆವೃತ್ತಿ ಹಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿ ದೂರು ದಾಖಲಿಸಿದ್ದರು.

1937ರ ಇತಿಹಾಸ: ರವೀಂದ್ರನಾಥ ಟಾಗೋರ್ ಅವರ ಸಲಹೆಯಂತೆ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್ ಸೇರಿದಂತೆ ಪ್ರಮುಖ ನಾಯಕರಿದ್ದ 1937ರ ಸಿಡಬ್ಲ್ಯೂಸಿ ಸಭೆಯಲ್ಲಿ ಸರ್ವಧರ್ಮೀಯರನ್ನು ತಲುಪುವ ನಿಟ್ಟಿನಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಲಾಗಿತ್ತು.

ಕೇಂದ್ರದ ಹೊಸ ನಿಯಮ: ಕೇಂದ್ರ ಗೃಹ ಸಚಿವಾಲಯವು ಸರ್ಕಾರಿ ಕಾರ್ಯಕ್ರಮಗಳಲ್ಲಿ 6 ಚರಣಗಳ (3 ನಿಮಿಷ 10 ಸೆಕೆಂಡ್) ವಂದೇ ಮಾತರಂ ಗೀತೆಯನ್ನು ಕಡ್ಡಾಯಗೊಳಿಸಿ ಹೊಸ ಮಾರ್ಗಸೂಚಿ ಹೊರಡಿಸಿರುವುದರ ಮಧ್ಯೆಯೇ ಈ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ.

Share

Leave a comment

Leave a Reply

Your email address will not be published. Required fields are marked *

Related Articles