Home ದಾವಣಗೆರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಕೆ ಆದ ಬೆನ್ನಲ್ಲೇ ರಿಲ್ಯಾಕ್ಸ್ ಮೂಡ್ ನಲ್ಲಿ ಬಿ. ಎಲ್. ಸಂತೋಷ್!
ದಾವಣಗೆರೆನವದೆಹಲಿಬೆಂಗಳೂರು

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಕೆ ಆದ ಬೆನ್ನಲ್ಲೇ ರಿಲ್ಯಾಕ್ಸ್ ಮೂಡ್ ನಲ್ಲಿ ಬಿ. ಎಲ್. ಸಂತೋಷ್!

Share
ಬಿ. ಎಲ್. ಸಂತೋಷ್
Share

ವಿಶಾಖಪಟ್ನಂ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಬೆನ್ನಲ್ಲೇ ಬಿ. ಎಲ್. ಸಂತೋಷ್ ಅವರು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. 

ನಿನ್ನೆಯಷ್ಟೇ ಕೇಂದ್ರ ಬಿಜೆಪಿಯು ತನ್ನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಕರ್ನಾಟಕದವರೇ ಆದ ಬಿ. ಎಲ್. ಸಂತೋಷ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿತ್ತು.

ಇದೇ ಖುಷಿಯಲ್ಲಿರುವ ಬಿ. ಎಲ್. ಸಂತೋಷ್ ಅವರು, ಬ್ಯುಸಿ ದಿನಚರಿಯ ಆರಂಭಕ್ಕೂ ಮುನ್ನ ವಿಶಾಖಪಟ್ನಂನ ಆರ್‌ಕೆ (ರಾಮಕೃಷ್ಣ) ಬೀಚ್‌ನಲ್ಲಿ ಮುಂಜಾನೆಯ ನಡಿಗೆ ಮೂಲಕ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.

ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಒಂದು ಅದ್ಭುತ ಅನುಭವ ನೀಡುತ್ತಿದೆ. ಮೋಡ ಕವಿದ ವಾತಾವರಣದ ನಡುವೆಯೂ ತೇಲಿಬಂದ ಸೂರ್ಯೋದಯದ ಕಿರಣಗಳು ಕಡಲತೀರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದವು ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿದಿನ ಬೆಳಿಗ್ಗೆ ನೂರಾರು ನಡಿಗೆದಾರರು, ಯೋಗಾಭ್ಯಾಸಿಗಳು, ತೀರದಲ್ಲಿರುವ ಸಣ್ಣ ದೇವಸ್ಥಾನಗಳಿಗೆ ನಮಸ್ಕರಿಸುವ ಭಕ್ತರು ಹಾಗೂ ತಾಜಾ ಜ್ಯೂಸ್-ಸಲಾಡ್ ಮಾರಾಟಗಾರರು ಇಲ್ಲಿ ಕಂಡುಬರುತ್ತಾರೆ. ಸಮಾಜದ ವಿವಿಧ ವರ್ಗದ ಜನರನ್ನು ಒಂದೇ ಸೂರಿನಡಿ ತರುವ ಈ ಕಡಲತೀರವು, ಹೆಮ್ಮೆಯ ವಿಶಾಖಪಟ್ನಂ ನಗರದ ಜೀವಂತ ಪ್ರತಿಬಿಂಬದಂತೆ ಕಂಗೊಳಿಸುತ್ತಿದೆ ಎಂದು ಬಣ್ಣಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *