Home ಕ್ರೈಂ ನ್ಯೂಸ್ ಸ್ವಂತ ಅಕ್ಕನ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ ತಂಗಿಯಿಂದ 20 ಲಕ್ಷ ರೂ.ಗೆ ಬೇಡಿಕೆ: ಭಾವನನ್ನೇ ರಹಸ್ಯವಾಗಿ ಮದುವೆಯಾಗಿ ಸಂಸಾರ ಬೀದಿಗೆ ತಂದ ಶಿಕ್ಷಕಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಸ್ವಂತ ಅಕ್ಕನ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ ತಂಗಿಯಿಂದ 20 ಲಕ್ಷ ರೂ.ಗೆ ಬೇಡಿಕೆ: ಭಾವನನ್ನೇ ರಹಸ್ಯವಾಗಿ ಮದುವೆಯಾಗಿ ಸಂಸಾರ ಬೀದಿಗೆ ತಂದ ಶಿಕ್ಷಕಿ!

Share
ಅಕ್ಕ
Share

ದರ್ಭಾಂಗ (ಬಿಹಾರ): ರಕ್ತ ಸಂಬಂಧಗಳನ್ನೆಲ್ಲ ಗಾಳಿಗೆ ತೂರಿ, ಸ್ವಂತ ಅಕ್ಕನ ಪತಿಯನ್ನೇ ರಹಸ್ಯವಾಗಿ ಮದುವೆಯಾಗಿರುವ ಆಘಾತಕಾರಿ ಹಾಗೂ ವಿಚಿತ್ರ ಘಟನೆಯೊಂದು ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಬಿಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉರ್ದು ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುನೀತಾ ಕುಮಾರಿ ಎಂಬಾಕೆ ಈ ಕೃತ್ಯ ಎಸಗಿದ್ದಾಳೆ ಎಂದು ಸಂತ್ರಸ್ತೆ ಅಕ್ಕ ಆರೋಪಿಸಿದ್ದಾರೆ.

ಸುಖಮಯ ದಾಂಪತ್ಯಕ್ಕೆ ತಂಗಿಯ ಕನ್ನ:

ಸಂತ್ರಸ್ತೆ ಪ್ರೀತಿ ದೇವಿ ಅವರು ನೀಡಿರುವ ಮಾಹಿತಿಯಂತೆ, 2014ರಲ್ಲಿ ಅವರಿಗೆ ವಿಜೇಂದ್ರ ಕುಮಾರ್ ಸಿಂಗ್ ಜೊತೆ ಶಾಸ್ತ್ರೋಕ್ತವಾಗಿ ವಿವಾಹವಾಗಿತ್ತು. ಇಬ್ಬರ ದಾಂಪತ್ಯ ಜೀವನವು ಅತ್ಯಂತ ಸುಖಮಯವಾಗಿ ಸಾಗುತ್ತಿದ್ದು, ದಂಪತಿಗೆ ಚಿಕ್ಕ ಮಕ್ಕಳಿದ್ದಾರೆ. ಆದರೆ, 2025ರ ಜೂನ್ 16ರಂದು ಸುನೀತಾ ಕುಮಾರಿ ತನ್ನ ಭಾವ ವಿಜೇಂದ್ರನಿಗೆ ಆಮಿಷ ಒಡ್ಡಿ, ಅಕ್ಕನಿಗೆ ಯಾವುದೇ ಸುಳಿವು ನೀಡದೆ ರಹಸ್ಯವಾಗಿ ನ್ಯಾಯಾಲಯದಲ್ಲಿ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದಾಳೆ.

₹20 ಲಕ್ಷ ಹಣಕ್ಕೆ ಬೇಡಿಕೆ, ಕಣ್ಣೀರಿಟ್ಟ ಅಕ್ಕ:

ಕಾನೂನುಬದ್ಧವಾಗಿ ವಿಚ್ಛೇದನ ಪಡೆಯದೇ ಪತಿಯನ್ನು ಪುಸಲಾಯಿಸಿ ಮದುವೆಯಾಗಿರುವ ತಂಗಿಯಿಂದಾಗಿ ತಮ್ಮ ಇಡೀ ಸಂಸಾರ ಬೀದಿಗೆ ಬಂದಿದೆ ಎಂದು ಪ್ರೀತಿ ದೇವಿ ಕಣ್ಣೀರಿಟ್ಟಿದ್ದಾರೆ. “ನನ್ನ ಸ್ವಂತ ತಂಗಿಯೇ ನನ್ನ ಬಾಳನ್ನು ಹಾಳುಮಾಡಿದ್ದಾಳೆ” ಎಂದು ಅಳಲು ತೋಡಿಕೊಂಡಿರುವ ಅವರು, ತಂಗಿ ಸುನೀತಾ ತಮಗೆ ₹20 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟು ತೀವ್ರ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎಂದೂ ಗಂಭೀರ ಆರೋಪ ಮಾಡಿದ್ದಾರೆ.

ಇಲಾಖೆಯಿಂದ ಶೋಕಾಸ್ ನೋಟಿಸ್:

ಈ ಕೌಟುಂಬಿಕ ವಂಚನೆ ಹಾಗೂ ಮಾನಸಿಕ ಕಿರುಕುಳದ ಕುರಿತು ಸಂತ್ರಸ್ತೆ ಪ್ರೀತಿ ದೇವಿ ಸಾಕ್ಷ್ಯಾಧಾರಗಳೊಂದಿಗೆ ದರ್ಭಾಂಗ ಜಿಲ್ಲಾ ಶಿಕ್ಷಣಾಧಿಕಾರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿರುವ ಡಿಇಒ ವಿದ್ಯಾ ನಂದ ಠಾಕೂರ್ ಪ್ರತಿಕ್ರಿಯಿಸಿ, “ಆರೋಪ ಎದುರಿಸುತ್ತಿರುವ ಶಿಕ್ಷಕಿಗೆ ಅಧಿಕೃತ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಆಕೆಯಿಂದ ಬರವಣಿಗೆಯ ಸ್ಪಷ್ಟನೆ ಬಂದ ನಂತರ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕಠಿಣ ಇಲಾಖಾ ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದ್ದಾರೆ.

ಸದ್ಯ ಈ ಘಟನೆ ಬಿಹಾರದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Share

Leave a comment

Leave a Reply

Your email address will not be published. Required fields are marked *

Related Articles