Home ಕ್ರೈಂ ನ್ಯೂಸ್ ಪತಿಯನ್ನೇ ಹತ್ಯೆಗೈದು ಸಾಭಾವಿಕ ಸಾವು ಎಂದಿದ್ದ ಬ್ಯೂಟಿಷಿಯನ್: ಪ್ರಿಯಕರನ ಜೊತೆ ಸೇರಿ ಸ್ಕೆಚ್, ಲಾಕ್ ಮಾಡಿದ್ದು ಚಾಟಿಂಗ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪತಿಯನ್ನೇ ಹತ್ಯೆಗೈದು ಸಾಭಾವಿಕ ಸಾವು ಎಂದಿದ್ದ ಬ್ಯೂಟಿಷಿಯನ್: ಪ್ರಿಯಕರನ ಜೊತೆ ಸೇರಿ ಸ್ಕೆಚ್, ಲಾಕ್ ಮಾಡಿದ್ದು ಚಾಟಿಂಗ್!

Share
ಪತಿ
Share

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಲೋಹಿಯಾ ನಗರದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ವ್ಯಕ್ತಿಯೊಬ್ಬನ ನಿಗೂಢ ಸಾವು ಇದೀಗ ಭೀಕರ ಕೊಲೆ ಎಂಬುದು ಬಯಲಾಗಿದೆ. ಪತಿಯನ್ನು ಪ್ರಿಯಕರನ ಜೊತೆ ಸೇರಿ ಹತ್ಯೆಗೈದು, ಅದು ಹೃದಯಾಘಾತದಿಂದ ಸಂಭವಿಸಿದ ಸಾಭಾವಿಕ ಸಾವು ಎಂದು ಬಿಂಬಿಸಿದ್ದ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತನ ಮೊಬೈಲ್ ಫೋನ್‌ನಲ್ಲಿ ಸಿಕ್ಕ ಒಂದು ರಹಸ್ಯ ವಾಟ್ಸಪ್ ಸಂಭಾಷಣೆ ಈ ಇಡೀ ಕೊಲೆ ರಹಸ್ಯವನ್ನು ಬಯಲಿಗೆಳೆದಿದೆ.

ಘಟನೆಯ ವಿವರ:

ಮೃತ ವ್ಯಕ್ತಿಯನ್ನು 30 ವರ್ಷದ ತಾಲಿಬ್ ಎಂದು ಗುರುತಿಸಲಾಗಿದೆ. ಇವರು 27 ವರ್ಷದ ಬ್ಯೂಟಿಷಿಯನ್ ಇಲ್ಮಾ ಅವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಸೆಪ್ಟೆಂಬರ್ 28ರಂದು ತಾಲಿಬ್ ಕೆಲಸದಿಂದ ಮನೆಗೆ ಹಿಂತಿರುಗಿದ ನಂತರ ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಇಲ್ಮಾ ತನ್ನ ಸಹೋದರ ಅಕ್ರಂ ಮತ್ತು ಕುಟುಂಬಸ್ಥರಿಗೆ ತಿಳಿಸಿದ್ದಳು. ಕುಟುಂಬದವರು ಇದನ್ನು ಸಾಭಾವಿಕ ಸಾವು ಎಂದು ನಂಬಿ, ಮೃತನ ದೇಹವನ್ನು ಮುಜಫ್ಫರ್‌ನಗರದಲ್ಲಿರುವ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಮೊಬೈಲ್ ಚಾಟ್‌ನಿಂದ ಬಯಲಾದ ಸತ್ಯ:

ಅಂತ್ಯಸಂಸ್ಕಾರದ ನಂತರ ತಾಲಿಬ್ ಸಾವಿನ ಕುರಿತು ಕುಟುಂಬಸ್ಥರಿಗೆ ಅನುಮಾನ ವ್ಯಕ್ತವಾಯಿತು. ಅಕ್ಟೋಬರ್ 1ರಂದು ಮನೆಗೆ ಬಂದ ತಾಲಿಬ್ ಸೋದರಸಂಬಂಧಿ ರಾಯಿಸ್, ಇಲ್ಮಾ ಬಟ್ಟೆಗಳ ಅಡಿಯಲ್ಲಿ ಬೀರಡೆಯಲ್ಲಿ ಅಡಗಿಸಿಟ್ಟಿದ್ದ ತಾಲಿಬ್ ಅವರ ಮೊಬೈಲ್ ಫೋನ್ ಅನ್ನು ಪತ್ತೆ ಮಾಡಿದರು. ಆ ಫೋನ್‌ನಲ್ಲಿ ತಾಲಿಬ್ ಹಾಗೂ ಅಮಾನ್ ಎಂಬ ಯುವಕನ ನಡುವಿನ ಸಂಭಾಷಣೆ ಸಿಕ್ಕಿದ್ದು, ಅದರಲ್ಲಿ ‘ನನ್ನ ಪತ್ನಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸು’ ಎಂದು ತಾಲಿಬ್ ಅಮಾನ್‌ಗೆ ಎಚ್ಚರಿಕೆ ನೀಡಿದ್ದನು.

ಈ ಆಧಾರದ ಮೇಲೆ ಕುಟುಂಬಸ್ಥರು ಇಲ್ಮಾಳನ್ನು ಕಟ್ಟುನಿಟ್ಟಾಗಿ ವಿಚಾರಣೆಗೊಳಪಡಿಸಿದಾಗ, ಆಕೆ ಪತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಉಸಿರುಗಟ್ಟಿಸಿ ಕೊಲೆ:

ವಿಚಾರಣೆ ವೇಳೆ ಇಲ್ಮಾ, “ಪತಿ ತಾಲಿಬ್ ದಿನವೂ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದ. ಸೆಪ್ಟೆಂಬರ್ 28ರಂದು ಕೂಡ ಆತ ಹೊಡೆದಾಗ, ಕೋಪದಿಂದ ನನ್ನ ಪ್ರಿಯಕರ ಅಮಾನ್‌ಗೆ ಕರೆ ಮಾಡಿದೆ. ಅಮಾನ್ ತನ್ನ ಸ್ನೇಹಿತನೊಂದಿಗೆ ಮನೆಗೆ ಬಂದನು. ಮೂವರೂ ಸೇರಿ ತಾಲಿಬ್‌ಗೆ ಥಳಿಸಿದೆವು, ನಂತರ ಅಮಾನ್ ನನ್ನ ಚುನ್ನಿಯಿಂದ ತಾಲಿಬ್ ಕೊರಳಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ. ನಂತರ ಇದನ್ನು ಹೃದಯಾಘಾತ ಎಂದು ಬಿಂಬಿಸಲು ಹೇಳಿ, ನನ್ನನ್ನು ಮದುವೆಯಾಗುವುದಾಗಿ ಅಮಾನ್ ಭರವಸೆ ನೀಡಿದ್ದ” ಎಂದು ಹೇಳಿದ್ದಾಳೆ.

ಪೋಸ್ಟ್‌ಮಾರ್ಟಮ್‌ಗೆ ಶವ ಹೊರತೆಗೆಯಲು ಆದೇಶ:

ಘಟನೆ ಸಂಬಂಧ ಕೊತ್ವಾಲಿ ಪೊಲೀಸ್ ಅಧಿಕಾರಿ ಸಂಗ್ರಾಮ್  ಸಿಂಗ್ ಅವರು ಮಾತನಾಡಿ, “ಪ್ರಕರಣದ ತನಿಖೆಗಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು, ಮಂಗಳವಾರ ಹೂತುಹಾಕಲಾದ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು” ಎಂದು ತಿಳಿಸಿದ್ದಾರೆ. ಪ್ರಸ್ತುತ ಇಲ್ಮಾಳನ್ನು ಪೊಲೀಸರ ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ಪೋಸ್ಟ್‌ಮಾರ್ಟಮ್ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles