ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’ ಒಕ್ಕೂಟ ನಡೆಸಿದ ಪ್ರತಿಭಟನಾ ಮೆರವಣಿಗೆ ದೆಹಲಿಯಲ್ಲಿ ತೀವ್ರ ಹೈಡ್ರಾಮಾಗೆ ಸಾಕ್ಷಿಯಾಯಿತು.
ಪೋಲಿಸರು ಮಾರ್ಗ ಮಧ್ಯೆ ತಡೆದಾಗ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಆಕಾಶವಾಣಿ ಭವನದ ಆವರಣ ಪ್ರವೇಶಿಸಿ ಅಲ್ಲಿಯೇ ಧರಣಿ ಕುಳಿತರು. “ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಭೇಟಿಯಾಗುವವರೆಗೂ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು. ಹಲವು ಗಂಟೆಗಳ ಕಾಲ ನಡೆದ ಪ್ರತಿಭಟನೆಯ ನಂತರ ಪೊಲೀಸರು ಇಡೀ ಆವರಣವನ್ನು ತೆರವುಗೊಳಿಸಿ ನಾಯಕರನ್ನು ಬಸ್‌ಗಳಲ್ಲಿ ಕರೆದೊಯ್ದರು.
- Akashvani Bhawan
- Delhi news live
- Delhi Police
- Election Commission of India
- Gyanesh Kumar
- INDIA Bloc Protest
- Priyanka Gandhi Vadra
- Rahul Gandhi
- Save Democracy March
- SIR Irregularities
- ಆಕಾಶವಾಣಿ ಭವನ
- ಇಂಡಿಯಾ ಒಕ್ಕೂಟ ಪ್ರತಿಭಟನೆ
- ಎಸ್ಐಆರ್ ಅಕ್ರಮ
- ಚುನಾವಣಾ ಆಯೋಗ
- ಜ್ಞಾನೇಶ್ ಕುಮಾರ್
- ದೆಹಲಿ ಪೊಲೀಸ್
- ನವದೆಹಲಿ ಸುದ್ದಿ
- ಪ್ರಜಾಪ್ರಭುತ್ವ ರಕ್ಷಿಸಿ
- ಪ್ರಿಯಾಂಕಾ ಗಾಂಧಿ
- ರಾಹುಲ್ ಗಾಂಧಿ





Leave a comment