SUDDIKSHANA KANNADA NEWS/ DAVANAGERE/ DATE:16-01-2025
ಮೈಸೂರು: ಜನವರಿ 12ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೇ ಮೈಸೂರಿನ ನಂಜನಗೂಡಿನಲ್ಲಿ ಹಸುವಿನ ಬಾಲಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.
ಮಚ್ಚಿಂದ ಹಸುವಿನ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಹಸುವಿನ ಕಳ್ಳತನಕ್ಕೆ ಬಂದಿದ್ದು, ಈ ವೇಳೆ ಹಸು ತಪ್ಪಿಸಿಕೊಳ್ಳಲು ಯತ್ನಿಸುವಾಗ ಮಚ್ಚಿನಿಂದ ಹಲ್ಲೆ ನಡೆಸಿರುವ ಸಾಧ್ಯತೆ ಹೆಚ್ಚಿದೆ.
ನಂಜುಂಡೇಶ್ವರನ ಸನ್ನಿಧಿಗೆ ನೂರಾರು ಹಸುಗಳನ್ನು ದಾನವಾಗಿ ಕೊಡಲಾಗುತ್ತದೆ. ಇಂಥ ಹಸುವಿನ ಕಳ್ಳತನಕ್ಕೆ ಈ ಹಿಂದೆ ಪ್ರಯತ್ನ ನಡೆದಿತ್ತು. ನಿನ್ನೆ ರಾತ್ರಿ ದೇವಾಲಯದ ಆವರಣದಲ್ಲಿದ್ದ ಹಸುವಿನ ಬಾಲಕ್ಕೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಈಗಾಗಲೇ ಪಶು ವೈದ್ಯರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಹಸುವಿಗೆ ಚಿಕಿತ್ಸೆ ನೀಡಿದ್ದಾರೆ. ನಂಜನಗೂಡು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸುತ್ತುಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.
ನಂಜುಂಡೇಶ್ವರ ದೇವಸ್ಥಾನದಲ್ಲಿ ಈ ಕೃತ್ಯ ನಡೆದಿರುವುದು ಆತಂಕ ತಂದಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಕಠಿಣ ಶಿಕ್ಷೆ ವಿಧಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.