Home ಕ್ರೈಂ ನ್ಯೂಸ್ ಜೀನ್ಸ್ ಧರಿಸುವುದರಿಂದ ಹುಡುಗರ ಮನಸ್ಸು ಹಾಳಾಗುತ್ತದೆ ಎನ್ನುವುದು ತಪ್ಪು ಗ್ರಹಿಕೆ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಜೀನ್ಸ್ ಧರಿಸುವುದರಿಂದ ಹುಡುಗರ ಮನಸ್ಸು ಹಾಳಾಗುತ್ತದೆ ಎನ್ನುವುದು ತಪ್ಪು ಗ್ರಹಿಕೆ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು!

Share
ಜೀನ್ಸ್
Share

ನವದೆಹಲಿ: ಯುವತಿಯರು ಜೀನ್ಸ್ ಅಥವಾ ಪಾಶ್ಚಾತ್ಯ ಉಡುಪು ಧರಿಸುವುದರಿಂದ ಹುಡುಗರ ಮನಸ್ಸು ಹಾಳಾಗುತ್ತದೆ ಎಂದು ಹೇಳುವುದು ಅತ್ಯಂತ ಆತಂಕಕಾರಿ ಮತ್ತು ಒಪ್ಪಿಕೊಳ್ಳಲಾಗದ ಮನಸ್ಥಿತಿಯಾಗಿದೆ ಎಂದು ದೆಹಲಿ ಹೈಕೋರ್ಟ್ ಕಠಿಣವಾಗಿ ಹೇಳಿದೆ. 2013ರಲ್ಲಿ ನೆರೆಹೊರೆಯ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಖುಲಾಸೆಯನ್ನು ರದ್ದುಗೊಳಿಸಿದ ಹೈಕೋರ್ಟ್, ಆತನಿಗೆ ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ.

ಮಹಿಳೆ ಅಥವಾ ಹುಡುಗಿ ಯಾವ ರೀತಿಯ ಉಡುಪು ಧರಿಸಬೇಕು ಎಂಬುದು ಆಕೆಯ ವೈಯಕ್ತಿಕ ಆಯ್ಕೆಯಾಗಿದೆ. ಆಕೆಯ ಬಟ್ಟೆಯ ವಿಚಾರದಲ್ಲಿ ನೆರೆಹೊರೆಯವರಾಗಲಿ, ಸಮಾಜವಾಗಲಿ ಅಥವಾ ನ್ಯಾಯಾಲಯದ ವಕೀಲರಾಗಲಿ ಯಾವುದೇ ರೀತಿಯ ನಿರ್ಬಂಧ ಹೇರುವ ಹಕ್ಕನ್ನು ಹೊಂದಿಲ್ಲ ಎಂದು ನ್ಯಾಯಮೂರ್ತಿ ಚಂದ್ರಶೇಖರನ್ ಸುಧಾ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

2014ರಲ್ಲಿ ವಿಚಾರಣಾ ನ್ಯಾಯಾಲಯವು ಯುವತಿಯ ಉಡುಪು ಮತ್ತು ಆಕೆಯ ನಡತೆಯನ್ನು ಪ್ರಶ್ನಿಸಿ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್, “ಸಮಸ್ಯೆ ಇರುವುದು ಮಹಿಳೆಯರ ಉಡುಪಿನಲ್ಲಿ ಅಲ್ಲ. ಪೋಷಕರು ಮತ್ತು ಸಮಾಜವು ತಮ್ಮ ಮಕ್ಕಳಿಗೆ ನಡವಳಿಕೆಯನ್ನು ನಿಯಂತ್ರಿಸುವುದು, ವೈಯಕ್ತಿಕ ಗಡಿಗಳನ್ನು ಗೌರವಿಸುವುದು ಮತ್ತು ಪ್ರತಿಯೊಬ್ಬರನ್ನು ಗೌರವದಿಂದ ಕಾಣುವುದನ್ನು ಕಲಿಸಬೇಕು” ಎಂದು ಕಿವಿಮಾತು ಹೇಳಿದೆ.

ಆರೋಪಿಯು ಯುವತಿಯನ್ನು ಹಿಂಬಾಲಿಸಿ, ಲೈಂಗಿಕ ಬಣ್ಣ ಬಳಿದ ಮಾತುಗಳನ್ನಾಡಿ, ಅನುಚಿತವಾಗಿ ಸ್ಪರ್ಶಿಸಿದ್ದ ಎಂಬುದು ಸಾಬೀತಾಗಿದ್ದು, ಐಪಿಸಿ ಸೆಕ್ಷನ್ 354A(1)(i) ಅಡಿಯಲ್ಲಿ ಆತನನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ.

Share

Leave a comment

Leave a Reply

Your email address will not be published. Required fields are marked *