ಶಿವಮೊಗ್ಗ/ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿದ್ದು, ಭದ್ರಾ ಡ್ಯಾಂಗೆ ಹರಿದುಬರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಆಗಸ್ಟ್ 09ರ ಬೆಳಿಗ್ಗೆ 6:00 ಗಂಟೆಯ ಅಧಿಕೃತ ವರದಿಯಂತೆ ಜಲಾಶಯಕ್ಕೆ 14,446 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ನೀರಿನ ಮಟ್ಟ 169’10” (169 ಅಡಿ 10 ಇಂಚು) ಗೆ ಏರಿಕೆಯಾಗಿದೆ.
ಇಂದಿನ ಜಲಾಶಯದ ಪ್ರಮುಖ ವಿವರಗಳು:
ಗರಿಷ್ಠ ಮಟ್ಟ (FRL): 186.00 ಅಡಿ (71.535 TMC)
ಇಂದಿನ ನೀರಿನ ಮಟ್ಟ: 169.10 ಅಡಿ (52.713 TMC)
ಇಂದಿನ ಒಳಹರಿವು (Inflow): 14,446 ಕ್ಯೂಸೆಕ್
ಇಂದಿನ ಹೊರಹರಿವು (Outflow): 198 ಕ್ಯೂಸೆಕ್ (ರಿವರ್ ಸ್ಲೂಯಿಸ್: 100 ಕ್ಯೂಸೆಕ್, ಆವೀಕರಣ: 98 ಕ್ಯೂಸೆಕ್)
ಕಾಲುವೆಗಳ ನೀರು (RBC/LBC): 0 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 183.02 ಅಡಿ (68.008 TMC) ಇತ್ತು. ಈ ಬಾರಿ ಜಲಾಶಯವು 170 ಅಡಿಯ ಸಮೀಪಕ್ಕೆ ತಲುಪಿದ್ದು, ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ ಅಚ್ಚುಕಟ್ಟು ಭಾಗದ ರೈತರಿಗೆ ಮುಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು ದೊರೆಯುವ ಭರವಸೆ ಮೂಡಿದೆ.





Leave a comment