Home ದಾವಣಗೆರೆ ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ ಎಷ್ಟಿದೆ? 14 ಸಾವಿರ ಕ್ಯೂಸೆಕ್ ದಾಟಿದ ಒಳಹರಿವು, ಭರ್ತಿಯತ್ತ ಜೀವನಾಡಿ!
ದಾವಣಗೆರೆಬೆಂಗಳೂರು

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ ಎಷ್ಟಿದೆ? 14 ಸಾವಿರ ಕ್ಯೂಸೆಕ್ ದಾಟಿದ ಒಳಹರಿವು, ಭರ್ತಿಯತ್ತ ಜೀವನಾಡಿ!

Share
ಭದ್ರಾ ಡ್ಯಾಂ
Share

ಶಿವಮೊಗ್ಗ/ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿದ್ದು, ಭದ್ರಾ ಡ್ಯಾಂಗೆ ಹರಿದುಬರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಆಗಸ್ಟ್ 09ರ ಬೆಳಿಗ್ಗೆ 6:00 ಗಂಟೆಯ ಅಧಿಕೃತ ವರದಿಯಂತೆ ಜಲಾಶಯಕ್ಕೆ 14,446 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ನೀರಿನ ಮಟ್ಟ 169’10” (169 ಅಡಿ 10 ಇಂಚು) ಗೆ ಏರಿಕೆಯಾಗಿದೆ.

ಇಂದಿನ ಜಲಾಶಯದ ಪ್ರಮುಖ ವಿವರಗಳು:

ಗರಿಷ್ಠ ಮಟ್ಟ (FRL): 186.00 ಅಡಿ (71.535 TMC)

ಇಂದಿನ ನೀರಿನ ಮಟ್ಟ: 169.10 ಅಡಿ (52.713 TMC)

ಇಂದಿನ ಒಳಹರಿವು (Inflow): 14,446 ಕ್ಯೂಸೆಕ್

ಇಂದಿನ ಹೊರಹರಿವು (Outflow): 198 ಕ್ಯೂಸೆಕ್ (ರಿವರ್ ಸ್ಲೂಯಿಸ್: 100 ಕ್ಯೂಸೆಕ್, ಆವೀಕರಣ: 98 ಕ್ಯೂಸೆಕ್)

ಕಾಲುವೆಗಳ ನೀರು (RBC/LBC): 0 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 183.02 ಅಡಿ (68.008 TMC) ಇತ್ತು. ಈ ಬಾರಿ ಜಲಾಶಯವು 170 ಅಡಿಯ ಸಮೀಪಕ್ಕೆ ತಲುಪಿದ್ದು, ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ ಅಚ್ಚುಕಟ್ಟು ಭಾಗದ ರೈತರಿಗೆ ಮುಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು ದೊರೆಯುವ ಭರವಸೆ ಮೂಡಿದೆ.

Share

Leave a comment

Leave a Reply

Your email address will not be published. Required fields are marked *

Related Articles