SUDDIKSHANA KANNADA NEWS/ DAVANAGERE/ DATE:11-01-2025
ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಬಂಧನವಾಗಿದೆ. ಪ್ರಕರಣ ನಡೆದು ಎರಡು ವಾರ ಕಳೆದ ಬಳಿಕ ಆರೋಪಿಯನ್ನು ಬಂಧಿಸುವ ಮೂಲಕ ಸಾಕ್ಷ್ಯ ನಾಶಕ್ಕೆ ಸರ್ಕಾರವೇ ಅವಕಾಶ ಒದಗಿಸಿಕೊಟ್ಟಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತ ರಾಜು ಕಪನೂರು ಒಬ್ಬ ಗ್ಯಾಂಗ್ ಮಾಸ್ಟರ್ ಅಷ್ಟೇ, ಸಚಿವ ಪ್ರಿಯಾಂಕ್ ಖರ್ಗೆ ಇದರ ರಿಂಗ್ ಮಾಸ್ಟರ್. ಮರಿ ಖರ್ಗೆಯನ್ನು ಬಂಧಿಸುವ ಧಮ್ ಕಾಂಗ್ರೆಸ್ ಸರ್ಕಾರಕ್ಕೆ ಇದೆಯಾ? ಎಂದು ಪ್ರಶ್ನಿಸಿದೆ.
ಡೆತ್ನೋಟ್ನಲ್ಲಿ ಪ್ರಿಯಾಂಕ್ ಖರ್ಗೆಯ ಹೆಸರೂ ಉಲ್ಲೇಖವಾಗಿರುವುದರಿಂದ ಮೃತನಿಗೆ ನ್ಯಾಯ ಒದಗಿಸಬೇಕಾದರೆ ಸಚಿವ ಖರ್ಗೆಯ ಬಂಧನದ ಅಗತ್ಯತೆಯಿದೆ. ಮಾನ್ಯ ಸಿದ್ದರಾಮಯ್ಯ ಅವರೇ, ರಿಂಗ್ ಮಾಸ್ಟರ್ ಪ್ರಿಯಾಂಕ್ ಖರ್ಗೆಯ ಬಂಧನವೆಂದು? ಎಂದು ಪ್ರಶ್ನಿಸಿದೆ.