Home ಕ್ರೈಂ ನ್ಯೂಸ್ ಶಿಯಾ ಸ್ಮಶಾನದಲ್ಲಿ 8 ಲಕ್ಷ ರೂ.ಗೆ ಒಂದು ಸಮಾಧಿ ಮಾರಾಟ? ಖ್ಯಾತ ಧರ್ಮಗುರು ವಿರುದ್ಧ ಗಂಭೀರ ಆರೋಪ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಶಿಯಾ ಸ್ಮಶಾನದಲ್ಲಿ 8 ಲಕ್ಷ ರೂ.ಗೆ ಒಂದು ಸಮಾಧಿ ಮಾರಾಟ? ಖ್ಯಾತ ಧರ್ಮಗುರು ವಿರುದ್ಧ ಗಂಭೀರ ಆರೋಪ!

Share
ಸಮಾಧಿ
Share

ಲಕ್ನೋ: ಉತ್ತರ ಪ್ರದೇಶದ ಲಕ್ನೋದ ಶಿಯಾ ಸಮುದಾಯದಲ್ಲಿ ಧರ್ಮಗುರುಗಳ ನಡುವೆ ಮತ್ತೊಂದು ದೊಡ್ಡ ವಿವಾದ ಭುಗಿಲೆದ್ದಿದೆ.

ನಗರದ ಐತಿಹಾಸಿಕ ಘುಫ್ರಾನ್ ಮೌಬ್ ಇಮಾಂಬಾರಾ ಕಬರಸ್ಥಾನದಲ್ಲಿ (ಸ್ಮಶಾನ) ಒಂದೊಂದು ಸಮಾಧಿಯ ಜಾಗಕ್ಕೆ ಬರೋಬ್ಬರಿ 8 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಶಿಯಾ ಮರ್ಕಾಜಿ ಚಂದ್ ಸಮಿತಿಯ ಅಧ್ಯಕ್ಷ ಮೌಲಾನಾ ಸೈಫ್ ಅಬ್ಬಾಸ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕಬರಸ್ಥಾನದ ಉಸ್ತುವಾರಿ (ಮುತವಲ್ಲಿ) ವಹಿಸಿರುವ ಪ್ರಭಾವಿ ಶಿಯಾ ಮುಖಂಡ ಮೌಲಾನಾ ಕಲ್ಬೆ ಜವ್ವಾದ್ ಅವರ ವಿರುದ್ಧ ಸೈಫ್ ಅಬ್ಬಾಸ್ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಳ್ಳುವ ಮೂಲಕ ಈ ಆರೋಪ ಮಾಡಿದ್ದಾರೆ.

“ಇಮಾಂಬಾರಾದಲ್ಲಿ ಪ್ರತಿ ತಿಂಗಳು ಸರಾಸರಿ 10 ಸಮಾಧಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದರಿಂದ ವರ್ಷಕ್ಕೆ ಸುಮಾರು 9.6 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ. ಆದರೆ, ತಮ್ಮ ಆರೋಪಕ್ಕೆ ಬೆಂಬಲವಾಗಿ ಅವರು ಯಾವುದೇ ದಾಖಲೆಗಳನ್ನು ಬಹಿರಂಗಪಡಿಸಿಲ್ಲ.

ಉತ್ತರ ಪ್ರದೇಶದ ಮಾಜಿ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹ್ಸಿನ್ ರಾಜಾ ಕೂಡ ಈ ಹಿಂದೆ ಲಕ್ನೋದ ಪ್ರಮುಖ ಕಬರಸ್ಥಾನಗಳಲ್ಲಿ 5 ಲಕ್ಷ ರೂಪಾಯಿಗೆ ಸಮಾಧಿ ಜಾಗ ಮಾರಾಟವಾಗುತ್ತಿದೆ ಎಂದು ಆರೋಪಿಸಿದ್ದರು.

ಇತ್ತೀಚೆಗೆ ಲಕ್ನೋದ ಪ್ರಸಿದ್ಧ ‘ತುಂಡೇ ಕಬಾಬಿ’ ಹೋಟೆಲ್ ಹಾಗೂ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಈ ಇಬ್ಬರು ಧರ್ಮಗುರುಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿತ್ತು.

ಈ ನಡುವೆ ಬಂದಿರುವ ನೂತನ ಆರೋಪವು ಶಿಯಾ ಸಮುದಾಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಆರೋಪಗಳ ಕುರಿತು ಮೌಲಾನಾ ಕಲ್ಬೆ ಜವ್ವಾದ್ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

Share

Leave a comment

Leave a Reply

Your email address will not be published. Required fields are marked *

Related Articles