Home ದಾವಣಗೆರೆ ಧರ್ಮಸ್ಥಳಕ್ಕೆ 1041 ಅಕ್ಕಿ ಪ್ಯಾಕೆಟ್ ಸಮರ್ಪಣೆ: ಜಯಪ್ರಕಾಶ್ ಮಾಗಿ ಕುಟುಂಬದ ಕಾರ್ಯಕ್ಕೆ ಡಾ. ವೀರೇಂದ್ರ ಹೆಗ್ಗಡೆ ಮೆಚ್ಚುಗೆ
ದಾವಣಗೆರೆನವದೆಹಲಿಬೆಂಗಳೂರು

ಧರ್ಮಸ್ಥಳಕ್ಕೆ 1041 ಅಕ್ಕಿ ಪ್ಯಾಕೆಟ್ ಸಮರ್ಪಣೆ: ಜಯಪ್ರಕಾಶ್ ಮಾಗಿ ಕುಟುಂಬದ ಕಾರ್ಯಕ್ಕೆ ಡಾ. ವೀರೇಂದ್ರ ಹೆಗ್ಗಡೆ ಮೆಚ್ಚುಗೆ

Share
ಧರ್ಮಸ್ಥಳ
Share

ದಾವಣಗೆರೆ: ನಗರದ ದಿ|| ಶ್ರೀಮತಿ ಬಸಮ್ಮ ಹಾಗೂ ವೀರಬಸಪ್ಪ ಮಾಗಿ ಕುಟುಂಬಸ್ಥರು ತಮ್ಮ ಬಂಧು-ಮಿತ್ರರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳ ಅನ್ನದಾಸೋಹ ಸೇವೆಗಾಗಿ ಮಾಗಿ ಕುಟುಂಬ ಮತ್ತು ಅವರ ಮಿತ್ರವೃಂದದ ವತಿಯಿಂದ ಭಕ್ತಿಯಿಂದ 1,041 ಪ್ಯಾಕೆಟ್ ಅಕ್ಕಿಯನ್ನು ಅನ್ನಪೂರ್ಣೇಶ್ವರಿ ಸನ್ನಿಧಿಗೆ ಸಮರ್ಪಿಸಲಾಯಿತು.

ಕೊಡುಗೆಯ ವಿವರ:

ಮಾಗಿ ಕುಟುಂಬದಿಂದ: ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷರಾದ ಎಂ.ವಿ. ಜಯಪ್ರಕಾಶ್ ಮಾಗಿ – ದಾನೇಶ್ವರಿ ದಂಪತಿ ಹಾಗೂ ಕೈಲಾಶ್‌ಬಾಬು ಮಾಗಿ – ರೂಪಾ ದಂಪತಿಯಿಂದ 461 ಪ್ಯಾಕೆಟ್ ಅಕ್ಕಿ, ಮಾಗಿ ಕುಟುಂಬದ ಸ್ನೇಹಿತರು ಮತ್ತು
ಬಂಧುಬಳಗದವರಿಂದ ಸಂಗ್ರಹಿಸಿದ 580 ಪ್ಯಾಕೆಟ್ ಅಕ್ಕಿಯೂ ಸೇರಿದಂತೆ ಒಟ್ಟು 1041 ಅಕ್ಕಿ ಪ್ಯಾಕೆಟ್ ಗಳನ್ನು ಸಮರ್ಪಿಸಲಾಯಿತು.

ಈ ವೇಳೆ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆ ಅವರು ಜಯಪ್ರಕಾಶ್ ಮಾಗಿ ಕುಟುಂಬ ಮತ್ತು ಸ್ನೇಹಿತರು ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಅನ್ನದಾಸೋಹಕ್ಕೆ 1041 ಅಕ್ಕಿ ಪ್ಯಾಕೆಟ್ ಗಳನ್ನು ಸಮರ್ಪಣೆ
ಮಾಡಿದ್ದು ತುಂಬಾನೇ ಖುಷಿ ಕೊಟ್ಟಿತು. ನಂಬಿದವರನ್ನು ಎಂದಿಗೂ ಶ್ರೀ ಮಂಜುನಾಥ ಸ್ವಾಮಿ ಕೈಬಿಟ್ಟಿಲ್ಲ. ಕಳೆದ ಆರು ವರ್ಷಗಳಿಂದಲೂ ಅನ್ನದಾಸೋಹದಂಥ ಪವಿತ್ರ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಜಯಪ್ರಕಾಶ್ ಮಾಗಿ ಮತ್ತು
ಕುಟುಂಬದವರು ಹಾಗೂ ಸ್ನೇಹಿತರಿಗೆ ಶ್ರೀ ಮಂಜುನಾಥ ಆಯಸ್ಸು, ಆರೋಗ್ಯ, ಐಶ್ವರ್ಯ ಮತ್ತಷ್ಟು ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷರೂ ಆದ ಸೇವಾಕರ್ತ ಎಂ. ವಿ. ಜಯಪ್ರಕಾಶ್ ಮಾಗಿ ಅವರು ಮಾತನಾಡಿ, ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಗೆ ಅಕ್ಕಿ ಸಮರ್ಪಿಸಿದ್ದು ಹಾಗೂ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದು
ತುಂಬಾನೇ ಸಂತಸ ಕೊಟ್ಟಿದೆ. ಅದರಲ್ಲಿಯೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದವು. ಅವರನ್ನು ಭೇಟಿ ಮಾಡಿದ್ದು ಮನಸ್ಸಿದೆ ಸಂತೋಷ ಕೊಟ್ಟಿತು. ಅವರ ಮಾತುಗಳು ನಮಗೆ
ಮತ್ತಷ್ಟು ಸ್ಫೂರ್ತಿ ಕೊಟ್ಟಿತು. ನಡೆದಾಡುವ ದೇವರು ಎಂದೇ ಕರೆಯಲ್ಪಡುವ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಹಾಗೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವು ನಮ್ಮ ಕುಟುಂಬ ಹಾಗೂ ಸ್ನೇಹಿತರ ಮೇಲಿರಲಿ ಎಂಬುದಾಗಿ ಪ್ರಾರ್ಥಿಸುವುದಾಗಿ
ತಿಳಿಸಿದರು.

ವಿಶೇಷ ಪೂಜೆ ಮತ್ತು ಧಾರ್ಮಿಕ ಯಾತ್ರೆಗೆ ಚಾಲನೆ:

ಯಾತ್ರೆ ಆರಂಭಿಸುವ ಮುನ್ನ ದಾವಣಗೆರೆಯ ಹಳೇಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಬಳಿಕ ಲಾರಿಗಳಲ್ಲಿ ಅಕ್ಕಿ ಮತ್ತು 250ಕ್ಕೂ ಹೆಚ್ಚು ಮಂದಿ ಬಸ್ ಗಳು ಹಾಗೂ ಕಾರಿನಲ್ಲಿ ತೆರಳಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದರು.

Share

Leave a comment

Leave a Reply

Your email address will not be published. Required fields are marked *