Home ದಾವಣಗೆರೆ ಹಲವು ವರ್ಷಗಳ ಬಾಡಿಗೆ ಮನೆಗೆ ಗುಡ್‌ಬೈ: ಸ್ವಂತ ಬಂಗಲೆಗೆ ಶಿಫ್ಟ್ ಆದ ಸಿದ್ದರಾಮಯ್ಯ ಕುಟುಂಬ, ಹೋಮ ಹವನ, ಗೋಪೂಜೆ!
ದಾವಣಗೆರೆನವದೆಹಲಿಬೆಂಗಳೂರು

ಹಲವು ವರ್ಷಗಳ ಬಾಡಿಗೆ ಮನೆಗೆ ಗುಡ್‌ಬೈ: ಸ್ವಂತ ಬಂಗಲೆಗೆ ಶಿಫ್ಟ್ ಆದ ಸಿದ್ದರಾಮಯ್ಯ ಕುಟುಂಬ, ಹೋಮ ಹವನ, ಗೋಪೂಜೆ!

Share
ಸಿದ್ದರಾಮಯ್ಯ
Share

ಮೈಸೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಪಾರ್ವತಿ ಅವರ ಬಹುಕಾಲದ ಕನಸನ್ನು ನನಸು ಮಾಡಿದ್ದಾರೆ. ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ನೂತನ ಸ್ವಂತ ನಿವಾಸಕ್ಕೆ ಸಿದ್ದರಾಮಯ್ಯ ಕುಟುಂಬ ಸಮೇತರಾಗಿ ಸರಳವಾಗಿ ಗೃಹಪ್ರವೇಶ ನೆರವೇರಿಸಿದ್ದಾರೆ.

ಮಾತ್ರವಲ್ಲ, ಆಪ್ತರಿಗಷ್ಟೇ ಪ್ರವೇಶ ಇತ್ತು. ಗೋಪೂಜೆ, ಗಣ ಹೋಮ ಹವನ ಕೂಡ ನೆರವೇರಿಸಲಾಗಿದೆ. ಕೇಸರಿ ಪೇಟ ತೊಡಲು ನಿರಾಕರಿಸಿ, ಕುಂಕಮ ಧಾರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಹಲವು ನಿದರ್ಶನಗಳು ಇವೆ. ಪತ್ನಿ ಪಾರ್ವತಿ ಅವರ ಆಸೆಯಂತೆ ಪೂಜೆ ನೆರವೇರಿಸಲಾಗಿದೆ.

ಹಲವು ದಶಕಗಳಿಂದ ರಾಜಕೀಯ ಜೀವನದಲ್ಲಿದ್ದರೂ ಮೈಸೂರಿನಲ್ಲಿ ಸ್ವಂತ ಮನೆ ಹೊಂದಿರದ ಸಿದ್ದರಾಮಯ್ಯ ಅವರು, ಈವರೆಗೆ ತಮ್ಮ ಆಪ್ತ ಸ್ನೇಹಿತರ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಇದೀಗ ಪತ್ನಿಯ ಆಸೆಯಂತೆ ಸ್ವಂತ ಸೂರು ನಿರ್ಮಿಸಿದ್ದು, ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗೃಹಪ್ರವೇಶ ಕಾರ್ಯಕ್ರಮ ನೆರವೇರಿತು.

ಸಾರ್ವಜನಿಕ ಜೀವನದಲ್ಲಿ ಸದಾ ನಿರತರಾಗಿರುವ ಮುಖ್ಯಮಂತ್ರಿಗಳು ತಮ್ಮ ಕುಟುಂಬದ ವರ್ಷಗಳ ಕನಸನ್ನು ಈಡೇರಿಸಿರುವುದು ಸಾರ್ವಜನಿಕ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles