Home ದಾವಣಗೆರೆ ದಾವಣಗೆರೆ ದಕ್ಷಿಣ ಆಡಿಯೋ ಲೀಕ್ ಎಫೆಕ್ಟ್: ಹೈಕಮಾಂಡ್ ಅಂಗಳದಲ್ಲಿ ವರ್ಕ್ ಆಗದ ‘ಧರ್ಮಗುರುಗಳ’ ಅಸ್ತ್ರ, ಮಂತ್ರಿ ಪದವಿ ಕೈತಪ್ಪುವ ಭೀತಿ ಜಮೀರ್ ಅಹ್ಮದ್ ಸೈಲೆಂಟ್!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ದಾವಣಗೆರೆ ದಕ್ಷಿಣ ಆಡಿಯೋ ಲೀಕ್ ಎಫೆಕ್ಟ್: ಹೈಕಮಾಂಡ್ ಅಂಗಳದಲ್ಲಿ ವರ್ಕ್ ಆಗದ ‘ಧರ್ಮಗುರುಗಳ’ ಅಸ್ತ್ರ, ಮಂತ್ರಿ ಪದವಿ ಕೈತಪ್ಪುವ ಭೀತಿ ಜಮೀರ್ ಅಹ್ಮದ್ ಸೈಲೆಂಟ್!

Share
ದಾವಣಗೆರೆ
Share

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಹೈಕಮಾಂಡ್ ಮಟ್ಟದಲ್ಲಿ ತೀವ್ರಗೊಂಡ ಬೆನ್ನಲ್ಲೇ, ಮಾಜಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಜಮೀರ್, ದೆಹಲಿಯಿಂದ ಬರಿಗೈಯಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದು, ಸಚಿವ ಪಟ್ಟ ಕೈತಪ್ಪುವ ಭೀತಿಯಲ್ಲಿದ್ದಾರೆ.

ದಾವಣಗೆರೆ ದಕ್ಷಿಣ ಆಡಿಯೋ ಲೀಕ್ ಎಫೆಕ್ಟ್!

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಡೆದ ಉಪಚುನಾವಣೆ ವೇಳೆ ಜಮೀರ್ ಅಹ್ಮದ್ ಖಾನ್ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ ಒಂದಷ್ಟು ದಿನಗಳ ಹಿಂದೆ ವೈರಲ್ ಆಗಿತ್ತು. ಈ ಆಡಿಯೋ ಲೀಕ್ ಬಹಿರಂಗಗೊಳ್ಳುತ್ತಿದ್ದಂತೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿದ್ದು, ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲೂ ಈ ವಿಷಯ ಗಂಭೀರ ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆಯೇ ಜಮೀರ್‌ಗೆ ಸಂಪುಟದಲ್ಲಿ ಸ್ಥಾನ ಸಿಗದಂತೆ ಮಾಡಲು ಮುಖ್ಯ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಮಾಧ್ಯಮಗಳ ಮುಂದೆ ಮೌನಕ್ಕೆ ಶರಣು

ಯಾವಾಗಲೂ ಕ್ಯಾಮೆರಾಗಳ ಮುಂದೆ ನಗುನಗುತ್ತಾ, ಮಾಧ್ಯಮಗಳಿಗೆ ಖಾರವಾಗಿ ಹಾಗೂ ಸಕ್ರಿಯವಾಗಿ ಪ್ರತಿಕ್ರಿಯೆ ನೀಡುತ್ತಿದ್ದ ಜಮೀರ್, ದೆಹಲಿಯಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸಂಪೂರ್ಣ ಮೌನಕ್ಕೆ ಶರಣಾಗಿದ್ದರು. ಯಾವುದೇ ಪ್ರಶ್ನೆಗಳಿಗೂ ಉತ್ತರಿಸದೆ, ಮಾಧ್ಯಮ ಪ್ರತಿನಿಧಿಗಳನ್ನು ದಾಟಿ ತೆರಳಿದ್ದು ಅವರ ಬೆಂಬಲಿಗರು ಹಾಗೂ ರಾಜಕೀಯ ವಿಶ್ಲೇಷಕರಲ್ಲಿ ತೀವ್ರ ಚಿಂತೆಯನ್ನುಂಟು ಮಾಡಿದೆ.

ಹೈಕಮಾಂಡ್ ಅಂಗಳದಲ್ಲಿ ವರ್ಕ್ ಆಗದ ‘ಧರ್ಮಗುರುಗಳ’ ಅಸ್ತ್ರ

ಸಚಿವ ಸ್ಥಾನ ದಕ್ಕಿಸಿಕೊಳ್ಳಲು ಮುಸ್ಲಿಂ ಧರ್ಮಗುರುಗಳ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಲು ಪ್ರಯತ್ನ ನಡೆದಿದೆ ಎನ್ನಲಾಗಿದೆಯಾದರೂ, ಕಾಂಗ್ರೆಸ್ ವರಿಷ್ಠರು ಇದಕ್ಕೆ ಸೊಪ್ಪು ಹಾಕಿಲ್ಲ. ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಎದುರಿಸುತ್ತಿರುವ ನಾಯಕರಿಗೆ ಮಣೆ ಹಾಕದಿರಲು ಹೈಕಮಾಂಡ್ ಸ್ಪಷ್ಟ ನಿರ್ಧಾರ ತಳೆದಿದೆ ಎನ್ನಲಾಗಿದ್ದು, ಮುಂದಿನ ನಡೆ ಏನೆಂದು ತಿಳಿಯದೆ ಜಮೀರ್ ಕಂಗಾಲಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles