ದಾವಣಗೆರೆ: ಸಾರ್ವಜನಿಕರಲ್ಲಿ ಭದ್ರತಾ ಭಾವನೆ ಮೂಡಿಸುವ ಹಾಗೂ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್. ಟಿ. ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಹಾಗೂ ಉಪ ವಿಭಾಗೀಯ ಡಿವೈಎಸ್ಪಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಸಿಬ್ಬಂದಿಗಳು ಕಾಲ್ನಡಿಗೆ ಗಸ್ತು ನಡೆಸಿದ್ದಾರೆ.
ರಸ್ತೆಗಳು, ಪಾರ್ಕ್ಗಳು, ಬಸ್ ನಿಲ್ದಾಣಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದ ಪೊಲೀಸ್ ತಂಡಗಳು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ತಕ್ಷಣದ ಸೂಕ್ತ ಕ್ರಮದ ಭರವಸೆ ನೀಡಿದರು.
ಜಾಗೃತಿ ಅಭಿಯಾನದ ಪ್ರಮುಖಾಂಶಗಳು:
ಅಪರಾಧ ತಡೆ ಹಾಗೂ ಸಿಸಿಟಿವಿ: ಮನೆ ಹಾಗೂ ಸರಗಳ್ಳತನ ತಡೆಯುವ ಮುಂಜಾಗ್ರತಾ ಕ್ರಮಗಳು ಮತ್ತು ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಯಿತು.
ಸೈಬರ್ ಸುರಕ್ಷತೆ & ತುರ್ತು ಸೇವೆ: ಸೈಬರ್ ಅಪರಾಧಗಳ ತಡೆ, ಸಂಚಾರ ನಿಯಮಗಳ ಕಡ್ಡಾಯ ಪಾಲನೆ ಹಾಗೂ ತುರ್ತು ಸಂದರ್ಭದಲ್ಲಿ 112 ಸಹಾಯವಾಣಿ ಬಳಸಲು ಸೂಚಿಸಲಾಯಿತು.
ಮಾದಕ ದ್ರವ್ಯ ಮುಕ್ತ ಅಭಿಯಾನ: ಡ್ರಗ್ಸ್ ಬಳಕೆ, ಮಾರಾಟ ಮತ್ತು ಸಾಗಾಟದ ದುಷ್ಪರಿಣಾಮಗಳ ಕುರಿತು ಎಚ್ಚರಿಸಿದ ಪೊಲೀಸರು, ‘Drug Free Karnataka App’ ಮೂಲಕ ರಹಸ್ಯ ಮಾಹಿತಿ ನೀಡಲು ಸಾರ್ವಜನಿಕರಿಗೆ ಕರೆ ನೀಡಿದರು.
ಮಹಿಳೆಯರು & ಹಿರಿಯ ನಾಗರಿಕರ ಸುರಕ್ಷತೆ: ಮಹಿಳಾ ಮತ್ತು ಮಕ್ಕಳ ಭದ್ರತೆಗಾಗಿ ಜಾರಿಯಲ್ಲಿರುವ ‘ಅಕ್ಕ ಪಡೆ’ ಹಾಗೂ ಒಂಟಿ ಹಿರಿಯ ನಾಗರಿಕರ ಸುರಕ್ಷತೆಗಾಗಿ ಇರುವ ‘ಆಸರೆ’ ಕಾರ್ಯಕ್ರಮಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಅರಿವು ಮೂಡಿಸಲಾಯಿತು.
“ಪೋಲೀಸ್ ಎಂದರೆ ಭಯವಲ್ಲ, ಸಾರ್ವಜನಿಕರ ಭರವಸೆ” ಎಂಬ ಭಾವನೆ ಮೂಡಿಸುವ ನಿಟ್ಟಿನಲ್ಲಿ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- Aasare Scheme Senior Citizens
- Akka Pade Karnataka
- Cyber Crime Awareness.
- District Police Awareness
- Drug Free Karnataka App
- Emergency Helpline 112
- Foot Patroling
- Janasnehi Police
- Parameshwar Hegde ASP
- Shekhar HT IPS
- ಅಕ್ಕ ಪಡೆ
- ಆಸರೆ ಕಾರ್ಯಕ್ರಮ
- ಕಾಲ್ನಡಿಗೆ ಗಸ್ತು
- ಜನಸ್ನೇಹಿ ಪೊಲೀಸ್
- ಜಿಲ್ಲಾ ಪೊಲೀಸ್
- ಡ್ರಗ್ ಫ್ರೀ ಕರ್ನಾಟಕ ಆಪ್
- ತುರ್ತು ಸಹಾಯವಾಣಿ 112
- ದಾವಣಗೆರೆ ಪೊಲೀಸ್
- ಪರಮೇಶ್ವರ ಹೆಗಡೆ
- ಶೇಖರ್ ಹೆಚ್ ಟಿ IPS
- ಸೈಬರ್ ಕ್ರೈಂ ಜಾಗೃತಿ





Leave a comment