Home ಕ್ರೈಂ ನ್ಯೂಸ್ ಪೊಲೀಸ್ ಎಂದರೆ ಭಯವಲ್ಲ, ಭರವಸೆ: ಜಿಲ್ಲಾದ್ಯಂತ ಕಾಲ್ನಡಿಗೆ ಗಸ್ತು, ಜಾಗೃತಿ ಅಭಿಯಾನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಪೊಲೀಸ್ ಎಂದರೆ ಭಯವಲ್ಲ, ಭರವಸೆ: ಜಿಲ್ಲಾದ್ಯಂತ ಕಾಲ್ನಡಿಗೆ ಗಸ್ತು, ಜಾಗೃತಿ ಅಭಿಯಾನ!

Share
ಪೊಲೀಸ್
Share

ದಾವಣಗೆರೆ: ಸಾರ್ವಜನಿಕರಲ್ಲಿ ಭದ್ರತಾ ಭಾವನೆ ಮೂಡಿಸುವ ಹಾಗೂ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್. ಟಿ.  ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಹಾಗೂ ಉಪ ವಿಭಾಗೀಯ ಡಿವೈಎಸ್ಪಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಸಿಬ್ಬಂದಿಗಳು ಕಾಲ್ನಡಿಗೆ ಗಸ್ತು ನಡೆಸಿದ್ದಾರೆ.

ರಸ್ತೆಗಳು, ಪಾರ್ಕ್‌ಗಳು, ಬಸ್ ನಿಲ್ದಾಣಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದ ಪೊಲೀಸ್ ತಂಡಗಳು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ತಕ್ಷಣದ ಸೂಕ್ತ ಕ್ರಮದ ಭರವಸೆ ನೀಡಿದರು.

ಜಾಗೃತಿ ಅಭಿಯಾನದ ಪ್ರಮುಖಾಂಶಗಳು:

ಅಪರಾಧ ತಡೆ ಹಾಗೂ ಸಿಸಿಟಿವಿ: ಮನೆ ಹಾಗೂ ಸರಗಳ್ಳತನ ತಡೆಯುವ ಮುಂಜಾಗ್ರತಾ ಕ್ರಮಗಳು ಮತ್ತು ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಯಿತು.

ಸೈಬರ್ ಸುರಕ್ಷತೆ & ತುರ್ತು ಸೇವೆ: ಸೈಬರ್ ಅಪರಾಧಗಳ ತಡೆ, ಸಂಚಾರ ನಿಯಮಗಳ ಕಡ್ಡಾಯ ಪಾಲನೆ ಹಾಗೂ ತುರ್ತು ಸಂದರ್ಭದಲ್ಲಿ 112 ಸಹಾಯವಾಣಿ ಬಳಸಲು ಸೂಚಿಸಲಾಯಿತು.

ಮಾದಕ ದ್ರವ್ಯ ಮುಕ್ತ ಅಭಿಯಾನ: ಡ್ರಗ್ಸ್ ಬಳಕೆ, ಮಾರಾಟ ಮತ್ತು ಸಾಗಾಟದ ದುಷ್ಪರಿಣಾಮಗಳ ಕುರಿತು ಎಚ್ಚರಿಸಿದ ಪೊಲೀಸರು, ‘Drug Free Karnataka App’ ಮೂಲಕ ರಹಸ್ಯ ಮಾಹಿತಿ ನೀಡಲು ಸಾರ್ವಜನಿಕರಿಗೆ ಕರೆ ನೀಡಿದರು.

ಮಹಿಳೆಯರು & ಹಿರಿಯ ನಾಗರಿಕರ ಸುರಕ್ಷತೆ: ಮಹಿಳಾ ಮತ್ತು ಮಕ್ಕಳ ಭದ್ರತೆಗಾಗಿ ಜಾರಿಯಲ್ಲಿರುವ ‘ಅಕ್ಕ ಪಡೆ’ ಹಾಗೂ ಒಂಟಿ ಹಿರಿಯ ನಾಗರಿಕರ ಸುರಕ್ಷತೆಗಾಗಿ ಇರುವ ‘ಆಸರೆ’ ಕಾರ್ಯಕ್ರಮಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಅರಿವು ಮೂಡಿಸಲಾಯಿತು.

“ಪೋಲೀಸ್ ಎಂದರೆ ಭಯವಲ್ಲ, ಸಾರ್ವಜನಿಕರ ಭರವಸೆ” ಎಂಬ ಭಾವನೆ ಮೂಡಿಸುವ ನಿಟ್ಟಿನಲ್ಲಿ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *