Home ದಾವಣಗೆರೆ ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟಿದೆ? : ಒಳಹರಿವು ಸ್ವಲ್ಪ ಏರಿಕೆ, 6,331 ಕ್ಯೂಸೆಕ್‌ಗೆ ಏರಿಕೆ!
ದಾವಣಗೆರೆಬೆಂಗಳೂರು

ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟಿದೆ? : ಒಳಹರಿವು ಸ್ವಲ್ಪ ಏರಿಕೆ, 6,331 ಕ್ಯೂಸೆಕ್‌ಗೆ ಏರಿಕೆ!

Share
ಭದ್ರಾ ಜಲಾಶಯ
Share

ಶಿವಮೊಗ್ಗ/ ದಾವಣಗೆರೆ: ಭದ್ರಾ ಜಲಾಶಯದ ಜಲಾನಯನ ಪ್ರದೇಶಗಳಲ್ಲಿ ಮಳೆ ಮುಂದುವರಿದಿದ್ದು, ಜಲಾಶಯಕ್ಕೆ ಒಳಹರಿವು ಸ್ಥಿರವಾಗಿ ಹರಿದುಬರುತ್ತಿದೆ. ಜುಲೈ 22, 2026 ರಂದಿನ ವರದಿಯಂತೆ ಜಲಾಶಯದ ಇಂದಿನ ನೀರಿನ ಮಟ್ಟ ಹಾಗೂ ನೀರಿನ ಹರಿವಿನ ಸಂಪೂರ್ಣ ವಿವರ ಇಲ್ಲಿದೆ.

ಇಂದಿನ ಜಲಾಶಯದ WATER LEVEL (22-07-2026):

  • ಗರಿಷ್ಠ ಮಟ್ಟ: 186 ಅಡಿಗಳು

  • ಇಂದಿನ ನೀರಿನ ಮಟ್ಟ: 150 ಅಡಿ 4 ಇಂಚು

  • ಇಂದಿನ ನೀರಿನ ಸಂಗ್ರಹ (ಸಾಮರ್ಥ್ಯ): 34.563 ಟಿ.ಎಂ.ಸಿ (TMC)

  • ಒಳಹರಿವು (Inflow): 6,331 ಕ್ಯೂಸೆಕ್‌ಗಳು

  • ಒಟ್ಟು ಹೊರಹರಿವು (Outflow): 174 ಕ್ಯೂಸೆಕ್‌ಗಳು

ಹೊರಹರಿವಿನ ಹಂಚಿಕೆ ವಿವರ:

  • ಬಲದಂಡೆ ನಾಲೆ (RBC): 0 ಕ್ಯೂಸೆಕ್‌ಗಳು

  • ಎಡದಂಡೆ ನಾಲೆ (LBC): 50 ಕ್ಯೂಸೆಕ್‌ಗಳು

  • ನದಿ ತಳಭಾಗ/ತಗ್ಗುಗಳು (River Sluice): 50 ಕ್ಯೂಸೆಕ್‌ಗಳು

  • ಆವಿಯಾಗುವಿಕೆ (Evaporation): 74 ಕ್ಯೂಸೆಕ್‌ಗಳು

ಕಳೆದ ವರ್ಷಕ್ಕೆ ಹೋಲಿಕೆ (22-07-2025 ರಲ್ಲಿದ್ದ ಸ್ಥಿತಿ):

ಕಳೆದ ವರ್ಷ ಇದೇ ದಿನಾಂಕಕ್ಕೆ ಹೋಲಿಸಿದರೆ ಜಲಾಶಯದಲ್ಲಿ ನೀರಿನ ಮಟ್ಟ ಹಾಗೂ ಸಂಗ್ರಹ ಉತ್ತಮವಾಗಿತ್ತು:

  • ಕಳೆದ ವರ್ಷದ ನೀರಿನ ಮಟ್ಟ: 179 ಅಡಿ 4 ಇಂಚು

  • ಕಳೆದ ವರ್ಷದ ನೀರಿನ ಸಂಗ್ರಹ: 63.390 ಟಿ.ಎಂ.ಸಿ

  • ಕಳೆದ ವರ್ಷದ ಒಳಹರಿವು: 8,065 ಕ್ಯೂಸೆಕ್‌ಗಳು

  • ಕಳೆದ ವರ್ಷದ ಹೊರಹರಿವು: 6,919 ಕ್ಯೂಸೆಕ್‌ಗಳು

ಕಳೆದ ವರ್ಷಕ್ಕೆ ಹೋಲಿಸಿದರೆ 30 ಅಡಿಗೂ ಕಡಿಮೆ ನೀರು ಸಂಗ್ರಹವಾಗಿದೆ. ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಈ ವರ್ಷ ಭಾರೀ ಕಡಿಮೆಯಾಗಿದೆ. ಈ ಬಾರಿ ಭದ್ರಾ ಡ್ಯಾಂ ಭರ್ತಿಯಾಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ರೈತಾಪಿ ವರ್ಗ ಇದೆ.

ಈಗಾಗಲೇ ಮುಂಗಾರು ಬೆಳೆಗೆ ನೀರಿಲ್ಲ. ಹಿಂಗಾರು ಮಳೆಯೂ ಕೈ ಕೊಟ್ಟರೆ ಎರಡನೇ ಬೆಳೆಗೂ ನೀರು ಸಿಗದ ಭಯ ರೈತರಲ್ಲಿ ಇದ್ದು. ಮಳೆರಾಯ ಕೃಪೆ ತೋರಬೇಕೆಂದು ಪ್ರಾರ್ಥಿಸತೊಡಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *