SUDDIKSHANA KANNADA NEWS/ DAVANAGERE/ DATE:20-12-2024
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಆಕ್ಷೇಪಾರ್ಹ ಮತ್ತು ಅಶ್ಲೀಲ ಪದ ಬಳಕೆ ಮಾಡಿರುವ ಕುರಿತಂತೆ ಸಿ. ಟಿ. ರವಿ ವಿರುದ್ಧದ ಸಾಕ್ಷ್ಯ ಸಿಕ್ಕಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಕುರಿತ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಕುರಿತಂತೆ ನಮಗೆ ಆಡಿಯೋ ಕೇಳಿಸಿಲ್ಲ. ಈ ಪದ ಬಳಕೆ ಮಾಡಿದ ವಿಡಿಯೋದಲ್ಲಿ
ಆಡಿಯೋ ಕೇಳಿಸಿಲ್ಲ ಎಂದು ಹೇಳಿದರು.
ನಮಗೆ ಸಿ. ಟಿ. ರವಿ ವಿರುದ್ಧದ ಯಾವುದೇ ಮಾಹಿತಿ ಸಿಕ್ಕಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಪರ ಯತೀಂದ್ರ ಸಿದ್ದರಾಮಯ್ಯ, ಉಮಾಶ್ರೀ, ಬಲ್ಕಿಶ್ ಬಾನು ಸೇರಿದಂತೆ ನಾಲ್ವರು ನಾವು ಕೇಳಿಸಿಕೊಂಡಿದ್ದೇವೆ ಎಂದರು. ಸಿ. ಟಿ. ರವಿ ಕರೆದು ಕೇಳಿದೆ. ನಾನು ಈ ರೀತಿ ಹೇಳಿಕೆ ನೀಡಿಲ್ಲ. ಪ್ರೆಸ್ಟೇಟ್ ಎಂದಿದ್ದು. ಆದ್ರೆ, ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಿ. ಟಿ. ರವಿ ಸಮರ್ಥನೆ ನೀಡಿದರು ಎಂದು ಮಾಹಿತಿ ನೀಡಿದರು.
ಲಕ್ಷ್ಮೀ ಹೆಬ್ಬಾಳ್ಕರ್, ಸಿ. ಟಿ. ರವಿ ನಡುವೆ ಗಲಾಟೆ ನಡೆದಿದೆ ಎಂಬ ಮಾಹಿತಿ ಸಿಕ್ಕಿತು. ಕಾರ್ಯದರ್ಶಿ ಮತ್ತು ಸಿಬ್ಬಂದಿ ಕುಳಿತೆವು. ಲಕ್ಷ್ಮೀ ಹೆಬ್ಬಾಳ್ಕರ್ ಬಂದು ದೂರು ಕೊಟ್ಟರು. ಸಿ. ಟಿ. ರವಿ ಕೆಟ್ಟದಾದ ಪದ ಬಳಕೆ ಮಾಡಿದ್ದಾರೆ. ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ದೂರಿದ್ದರು. ಎರಡೂ ಕಡೆಯ ಶಾಸಕರು ಬಂದರು. ಸಿ. ಟಿ. ರವಿ ಕರೆದೆ. ಹೇಳಿಕೆ ಕೇಳಿದೆ. ನಾನು ಆ ಪದ ಬಳಕೆ ಮಾಡಿಲ್ಲ, ಹತಾಶೆ ಎಂದದ್ದು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದು ಸಿಟಿ ರವಿ ಹೇಳಿದ್ರು. ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚು ಹೆಚ್ಚು ಕೂರಿಸಲಿಲ್ಲ ಎಂದು ಬಸವರಾಜ್ ಹೊರಟ್ಟಿ ತಿಳಿಸಿದರು.