ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್1 ರಲ್ಲಿ ಬ್ಯೂಸಿ ಆಗಿದ್ದಾರೆ, ಕುಂದಾಪುರದ ಕೆರಾಡಿಗೆ ಬಂದಿದ್ದ ತೆಲುಗು ನಟ ರಾಣಾ ದಗ್ಗುಬಾಟಿಗೆ ರಿಷಬ್ ಶೆಟ್ಟಿ ಕನ್ನಡ ಕಲಿಸಿದಲ್ಲದೇ ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರ ಡೈಲಾಗ್ ಹೇಳಿಕೊಟ್ಟಿದ್ದಾರೆ.
ಒಟಿಟಿ ಲೀ ಪ್ರಸಾರವಾಗುವ ಈ ಶೋ ಗೆ “ದಿ ರಾಣಾ ದಗ್ಗುಬಾಟಿ ಶೋ” ಎಂಬ ಶೀರ್ಷಿಕೆಯನ್ನ ಇಟ್ಟಿದ್ದಾರೆ, ರಿಷಬ್ ಶೆಟ್ಟಿಯನ್ನು ಸಂದರ್ಶನ ಮಾಡಲು ಕುಂದಾಪುರದ ಕೆರಾಡಿಗೆ ರಾಣಾ ಭೇಟಿಕೊಟ್ಟಿದ್ದು ವಿಶೇಷವಾಗಿತ್ತು.ಸಿನಿಮಾ ಮಾಡಬೇಕೆಂದರೆ ನಗರಕ್ಕೆ ಬರಬೇಕು ಎಂಬುದನ್ನು ಅವರು ಸುಳ್ಳು ಮಾಡಿ ಕುಂದಾಪುರದಲ್ಲಿ ಕಾಂತಾರ ಚಾಪ್ಟರ್ 1 ಶೂಟಿಂಗ್ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ಕೆರಾಡಿಯ ಸರ್ಕಾರಿ ಶಾಲೆಗೆ ತೆರಳಿ ಕನ್ನಡವನ್ನು ಕಲಿಯುವ ಪ್ರಯತ್ನ ಮಾಡಿದರು.ನಂತರ ಡಾ.ರಾಜ್ ಕುಮಾರ್ ನಟನೆ ಬಭ್ರುವಾಹನ ಸಿನಿಮಾದ “ಹೇಳು ಪಾರ್ಥ” ಡೈಲಾಗ್ ಅನ್ನು ರಿಷಬ್ ಹೇಳಿಕೊಟ್ಟಿದ್ದಾರೆ. ಇದು ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದ್ದು ಕನ್ನಡ ಕಲಿಯುವ ಆಸಕ್ತಿ ತೋರಿದ ರಾಣಾ ಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.