Home ಕ್ರೈಂ ನ್ಯೂಸ್ ರಾಜಾ ರಘುವಂಶಿ ಹತ್ಯೆ ನೋಡಿ ಫಿಯಾನ್ಸೆಯನ್ನು ಕಂದಕಕ್ಕೆ ತಳ್ಳಿದ್ಲಾ ಸಿಯಾ ಗೋಯಲ್? ‘ಕಾಪಿಕ್ಯಾಟ್’ ಥಿಯರಿ ನಿರಾಕರಿಸಿದ ಪೊಲೀಸರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರಾಜಾ ರಘುವಂಶಿ ಹತ್ಯೆ ನೋಡಿ ಫಿಯಾನ್ಸೆಯನ್ನು ಕಂದಕಕ್ಕೆ ತಳ್ಳಿದ್ಲಾ ಸಿಯಾ ಗೋಯಲ್? ‘ಕಾಪಿಕ್ಯಾಟ್’ ಥಿಯರಿ ನಿರಾಕರಿಸಿದ ಪೊಲೀಸರು!

Share
ಹತ್ಯೆ
Share

ಪುಣೆ: ಮಹಾರಾಷ್ಟ್ರದ ಪುಣೆಯ ಲೋಹಗಢ ಕೋಟೆಯಲ್ಲಿ ಭಾವಿ ಪತಿ ಕೇತನ್ ಅಗರ್ವಾಲ್‌ನನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ, ಆರೋಪಿ ಸಿಯಾ ಗೋಯಲ್ 2025ರಲ್ಲಿ ಮೇಘಾಲಯದಲ್ಲಿ ನಡೆದಿದ್ದ ಪ್ರಸಿದ್ಧ ‘ರಾಜಾ ರಘುವಂಶಿ’ ಕೊಲೆ ಪ್ರಕರಣವನ್ನು ನೋಡಿ ಪ್ರೇರಿತಗೊಂಡು ಈ ಹತ್ಯೆ ಮಾಡಿದ್ದಾಳೆ ಎನ್ನುವ “ಕಾಪಿಕ್ಯಾಟ್ ಮರ್ಡರ್” (Copycat Murder) ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಪುಣೆ ಪೊಲೀಸರು ಈ ಎಲ್ಲ ವರದಿಗಳನ್ನು ಅಧಿಕೃತವಾಗಿ ನಿರಾಕರಿಸಿದ್ದಾರೆ.

ಏನಿದು ಕಾಪಿಕ್ಯಾಟ್ ವಿವಾದ?

2025ರಲ್ಲಿ ಮೇಘಾಲಯಕ್ಕೆ ಹನಿಮೂನ್‌ಗೆ ಹೋಗಿದ್ದ ವೇಳೆ ಸೋನಮ್ ರಘುವಂಶಿ ಎಂಬಾಕೆ ತನ್ನ ಪತಿ ರಾಜಾ ರಘುವಂಶಿಯನ್ನು ಬೆಟ್ಟದಿಂದ ತಳ್ಳಿ ಕೊಂದಿದ್ದ ಆರೋಪ ಕೇಳಿಬಂದಿತ್ತು. ಸದ್ಯ ಲೋಹಗಢ ಕೋಟೆಯಲ್ಲೂ ಸಿಯಾ ಗೋಯಲ್ ತನ್ನ ಪ್ರೇಮಿ ಚೇತನ್ ಚೌಧರಿ ಜೊತೆ ಸೇರಿ ಭಾವಿ ಪತಿ ಕೇತನ್‌ನನ್ನು ಜೂನ್ 18 ರಂದು ಕಂದಕಕ್ಕೆ ತಳ್ಳಿ ಕೊಂದಿದ್ದಾಳೆ. ಎರಡೂ ಪ್ರಕರಣಗಳಲ್ಲಿ ನಂಬಿದವರೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆಟ್ಟದಿಂದ ತಳ್ಳಿ ಕೊಲೆ ಮಾಡಿರುವುದರಿಂದ, ಸಿಯಾ ಗೋಯಲ್ ಆ ಹಳೆಯ ಕೇಸ್‌ನಿಂದ ಐಡಿಯಾ ಪಡೆದಿದ್ದಾಳೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೆ ಸಿಯಾಳ ಬ್ರೌಸಿಂಗ್ ಹಿಸ್ಟರಿಯಲ್ಲಿ ಆ ಕೇಸ್‌ನ ಸರ್ಚ್ ಲಿಂಕ್‌ಗಳು ಪತ್ತೆಯಾಗಿದ್ದವು ಎನ್ನಲಾಗಿತ್ತು.

ಪೊಲೀಸರು ಹೇಳುವುದೇನು?

ಮಾಧ್ಯಮಗಳ ವರದಿಯನ್ನು ಸ್ಪಷ್ಟಪಡಿಸಿರುವ ಪುಣೆ ಪೊಲೀಸರು, ಇದು ಯಾವುದೇ ಕಾಪಿಕ್ಯಾಟ್ ಕೊಲೆಯಲ್ಲ ಎಂದು ಹೇಳಿದ್ದಾರೆ. ಆದರೆ, ಆರೋಪಿಗಳಾದ ಸಿಯಾ ಮತ್ತು ಚೇತನ್ ಈ ಕೊಲೆಗಾಗಿ ಅತ್ಯಂತ ವ್ಯವಸ್ಥಿತವಾಗಿ ಸ್ಕೆಚ್ ಹಾಕಿದ್ದರು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

  • ಕೊಲೆಗೆ ಸಿಗ್ನಲ್ ಫಿಕ್ಸ್ ಮಾಡಿದ್ದರು: ಲೋಹಗಢ ಕೋಟೆಗೆ ಮೊದಲೇ ಬಂದು ಜಾಗ ಗುರುತಿಸಿದ್ದ ಆರೋಪಿಗಳು, ಕೊಲೆ ಮಾಡಲು ರಿಹರ್ಸಲ್ ಕೂಡ ಮಾಡಿದ್ದರು. ಕೋಟೆಯ ತುದಿಯಲ್ಲಿ ಸಿಯಾ ಗೋಯಲ್ ಕೆಳಗೆ ಕುಳಿತುಕೊಳ್ಳುವುದೇ ಸಿಗ್ನಲ್ ಆಗಿತ್ತು. ಅವಳು ಕೂರುತ್ತಿದ್ದಂತೆ ಪ್ರೇಮಿ ಚೇತನ್, ಕೇತನ್‌ನನ್ನು ಕಂದಕಕ್ಕೆ ತಳ್ಳಿದ್ದ ಎನ್ನಲಾಗಿದೆ.

  • ಡಿಲೀಟ್ ಆದ ಚಾಟ್ಸ್ ತನಿಖೆ: ಸದ್ಯ ಪೊಲೀಸರು ಆರೋಪಿಗಳ ಮೊಬೈಲ್ ಕರೆಗಳು, ಡಿಲೀಟ್ ಮಾಡಲಾದ ಕೋಡೆಡ್ ಮೆಸೇಜ್‌ಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಕೊಲೆಯ ಹಿಂದಿನ ದಿನ ಇಬ್ಬರೂ ಪುಣೆಯ ಕೆಫೆಯೊಂದರಲ್ಲಿ ಭೇಟಿಯಾಗಿ ಫೈನಲ್ ಪ್ಲಾನ್ ಮಾಡಿದ್ದರು.

ಬಲವಂತದ ಮದುವೆಗೆ ಹೆದರಿ ಕೊಲೆ!

ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಕೊಲೆಯ ಹಿಂದೆ ಯಾವುದೇ ಸಿನಿಮಾ ಅಥವಾ ಹಳೇ ಕೇಸ್‌ಗಳ ಪ್ರೇರಣೆಗಿಂತ ಹೆಚ್ಚಾಗಿ ವೈಯಕ್ತಿಕ ಸಂಬಂಧಗಳು ಮತ್ತು ಕುಟುಂಬದ ಒತ್ತಡ ಕಾರಣವಾಗಿದೆ. ಕುಟುಂಬಸ್ಥರು ಬಲವಂತವಾಗಿ ನಿಶ್ಚಿತಾರ್ಥ ಮಾಡಿಸಿದ್ದರಿಂದ, ಈ ಮದುವೆಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದೆ ಇಬ್ಬರೂ ಪ್ರೇಮಿಗಳು ಈ ಭೀಕರ ಹತ್ಯೆಗೆ ಕೈಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles