SUDDIKSHANA KANNADA NEWS/ DAVANAGERE/ DATE:19-12-2024
ದಾವಣಗೆರೆ: ಅಂಬೇಡ್ಕರ್ ಅಭಿವೃದ್ದಿ ನಿಗಮದ ವತಿಯಿಂದ ಸ್ವಯಂ ಉದ್ಯೋಗ ಯೋಜನೆ,(ಕುರಿ ಸಾಕಾಣಿಕೆ) ಸ್ವಾವಲಂಭಿ ಸಾರಥಿ ಯೋಜನೆ (ಪುಡ್ ಕಾರ್ಟ್ ಉದ್ದೇಶಕ್ಕೆ) ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನವಾಗಿರುತ್ತದೆ. ಈಗಾಗಲೇ ಅರ್ಜಿಗಳನ್ನು ಸಲ್ಲಿಸಿರುವ ಅರ್ಜಿದಾರರು ಉದ್ದೇಶವನ್ನು ಬದಲಾವಣೆ ಮಾಡಲು ಇಚ್ಚಿಸಿದಲ್ಲಿ http:swdcorp.karnataka.gov.in/ADCL Portal ನಲ್ಲಿ ಮಾಡಿಕೊಳ್ಳಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮ, ನಂ.337/16ಎ-16 ಗಣೇಶ್ ಲೇ ಔಟ್ 1ನೇ ಕ್ರಾಸ್, ಪಿ.ಬಿ.ರಸ್ತೆ, ದಾವಣಗೆರೆ. ಸಂಪರ್ಕಿಸಲು ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ.