Home ಕ್ರೈಂ ನ್ಯೂಸ್ ಪ್ರೇಯಸಿ ಜೊತೆಗೂಡಿ ಮದುವೆಯಾದ ಮೂರೇ ತಿಂಗಳಿಗೆ ಪತ್ನಿಯನ್ನೇ ಶೂಟ್ ಮಾಡಿ ಕೊಂದ ಪತಿ: ನೇಪಾಳಕ್ಕೆ ಓಡಿಹೋಗಿದ್ದ ಜೋಡಿ ಕೊನೆಗೂ ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರೇಯಸಿ ಜೊತೆಗೂಡಿ ಮದುವೆಯಾದ ಮೂರೇ ತಿಂಗಳಿಗೆ ಪತ್ನಿಯನ್ನೇ ಶೂಟ್ ಮಾಡಿ ಕೊಂದ ಪತಿ: ನೇಪಾಳಕ್ಕೆ ಓಡಿಹೋಗಿದ್ದ ಜೋಡಿ ಕೊನೆಗೂ ಅರೆಸ್ಟ್!

Share
ಮದುವೆ
Share

ಗುರುಗ್ರಾಮ್: ಹರಿಯಾಣದ ಗುರುಗ್ರಾಮ್‌ನ ಮಾನೇಸರ್‌ನಲ್ಲಿ ಮದುವೆಯಾದ ಕೇವಲ ಮೂರೇ ತಿಂಗಳಿಗೆ ಪ್ರೇಯಸಿ ಜೊತೆ ಸೇರಿ ಪತ್ನಿಯನ್ನೇ ಪತಿಯೊಬ್ಬ ಗುಂಡಿಕ್ಕಿ ಕೊಂದಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.

ಕೊಲೆ ಮಾಡಿದ ಬಳಿಕ ನೇಪಾಳಕ್ಕೆ ಪರಾರಿಯಾಗಿದ್ದ ಆರೋಪಿ ಪತಿ ಹಾಗೂ ಆತನ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಂಕಿತ್ (25) ಮತ್ತು ಆತನ ಪ್ರೇಯಸಿ ರಜನಿ ದೇವಿ (38) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ಅಂಕಿತ್ ಮತ್ತು ರಜನಿ ದೇವಿ ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಆದರೆ ಕಳೆದ ಫೆಬ್ರವರಿಯಲ್ಲಿ ಅಂಕಿತ್‌ಗೆ ಬೇರೆ ಯುವತಿಯೊಂದಿಗೆ ಮದುವೆಯಾಗಿತ್ತು. ತಮ್ಮ ಸಂಬಂಧವನ್ನು ಮುಂದುವರಿಸಲು ಅಡ್ಡಿಯಾಗಿದ್ದ ಪತ್ನಿಯನ್ನು ಮುಗಿಸಲು ಇವರಿಬ್ಬರು ರಜನಿಯ ಬಾಡಿಗೆ ರೂಮಿನಲ್ಲಿ ಸ್ಕೆಚ್ ಹಾಕಿದ್ದರು.

ಕೊಲೆಗಾಗಿ ಎರಡು ತಿಂಗಳು ಮುಂಚಿತವಾಗಿಯೇ ಉತ್ತರ ಪ್ರದೇಶದಿಂದ ಗನ್ ಖರೀದಿಸಲಾಗಿತ್ತು. ಮೇ 21 ರಂದು ಅಂಕಿತ್ ತನ್ನ ಪತ್ನಿಯನ್ನು ಪ್ರೇಯಸಿಯ ರೂಮಿಗೆ ಕರೆದೊಯ್ದು, ಇಬ್ಬರೂ ಸೇರಿ ಆಕೆಯನ್ನು ಶೂಟ್ ಮಾಡಿ ಕೊಂದಿದ್ದಾರೆ.

ಮೇ 22 ರಂದು ಯುವತಿಯ ತಾಯಿ ನೀಡಿದ ನಾಪತ್ತೆ ದೂರಿನ ಮೇರೆಗೆ ತನಿಖೆ ನಡೆಸಿದ ಮಾನೇಸರ್ ಪೊಲೀಸರು, ರಜನಿಯ ರೂಮಿನಲ್ಲಿ ಯುವತಿಯ ಶವವನ್ನು ಪತ್ತೆ ಹಚ್ಚಿದ್ದರು. ಕೊಲೆ ಮಾಡಿದ ಬಳಿಕ ಉತ್ತರಾಖಂಡದ ಹರಿದ್ವಾರದ ಮೂಲಕ ನೇಪಾಳಕ್ಕೆ ಓಡಿಹೋಗಿದ್ದ ಹಂತಕ ಜೋಡಿ, ಜೂನ್ 30 ರಂದು ಭಾರತಕ್ಕೆ ಮರಳಿದಾಗ ಕ್ರೈಮ್ ಬ್ರಾಂಚ್ ಪೊಲೀಸರು ಇವರನ್ನು ಮಾನೇಸರ್‌ನಲ್ಲಿ ಬಂಧಿಸಿ, 5 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles