Home ದಾವಣಗೆರೆ ದೀಪಾವಳಿ ಮುನ್ನವೇ ಗ್ರಾಹಕರಿಗೆ ಶಾಕ್? ₹1.47 ಲಕ್ಷ ತಲುಪಿದ 10 ಗ್ರಾಂ ಚಿನ್ನದ ದರ! ಬೆಂಗಳೂರು, ದಾವಣಗೆರೆಯಲ್ಲಿ ಇಂದಿನ ರೇಟ್ ಎಷ್ಟು?
ದಾವಣಗೆರೆಬೆಂಗಳೂರುವಾಣಿಜ್ಯ

ದೀಪಾವಳಿ ಮುನ್ನವೇ ಗ್ರಾಹಕರಿಗೆ ಶಾಕ್? ₹1.47 ಲಕ್ಷ ತಲುಪಿದ 10 ಗ್ರಾಂ ಚಿನ್ನದ ದರ! ಬೆಂಗಳೂರು, ದಾವಣಗೆರೆಯಲ್ಲಿ ಇಂದಿನ ರೇಟ್ ಎಷ್ಟು?

Share
ಚಿನ್ನ
Share

ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸೋಮವಾರ (ಜುಲೈ 6, 2026) ಆರಂಭಿಕ ವಹಿವಾಟಿನಲ್ಲಿ ಶೇಕಡಾ 0.06 ರಷ್ಟು ಅತ್ಯಲ್ಪ ಇಳಿಕೆ ಕಂಡಿದೆ. ಆದಾಗ್ಯೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಸಾರ್ವಕಾಲಿಕ ದಾಖಲೆಯ ಮಟ್ಟದ ಆಸುಪಾಸಿನಲ್ಲೇ ಮುಂದುವರಿದಿದೆ. ಸದ್ಯ ಭಾರತದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 1.47 ಲಕ್ಷ ರೂಪಾಯಿ ದಾಖಲಾಗಿದೆ.

ಗುಡ್ ರಿಟರ್ನ್ಸ್ ಲೇಟೆಸ್ಟ್ ಮಾಹಿತಿ ಪ್ರಕಾರ, ದೇಶದಲ್ಲಿ ಇಂದು ಪ್ರತಿ ಗ್ರಾಂ 24 ಕ್ಯಾರೆಟ್ (99.9% ಶುದ್ಧತೆ) ಅಪರಂಜಿ ಚಿನ್ನದ ಬೆಲೆ ₹14,662 ಆಗಿದೆ. ಇನ್ನು ಆಭರಣ ತಯಾರಿಕೆಗೆ ಬಳಸಲಾಗುವ 22 ಕ್ಯಾರೆಟ್ (91.6% ಶುದ್ಧತೆ) ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹13,440 ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹10,997 ರಷ್ಟಿದೆ.

ಜಾಗತಿಕ ಮಾರುಕಟ್ಟೆ ಪ್ರಭಾವ: ಅಮೆರಿಕನ್ ಡಾಲರ್ ಮೌಲ್ಯದಲ್ಲಿನ ಇಳಿಕೆ ಹಾಗೂ ಶಾರ್ಟ್ ಕವರಿಂಗ್ ಪ್ರಕ್ರಿಯೆಯಿಂದಾಗಿ ಕಳೆದ ಒಂದು ತಿಂಗಳ ಕುಸಿತದ ಬಳಿಕ ಚಿನ್ನದ ಬೆಲೆ ಮತ್ತೆ ಚೇತರಿಸಿಕೊಂಡಿದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲೂ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರಕ್ಕೆ ಬಲವಾದ ಬೆಂಬಲ ಸಿಗಲಿದೆ ಎಂದು ಜೆಎಂ ಫೈನಾನ್ಷಿಯಲ್ ಸರ್ವಿಸಸ್‌ನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ (ಪ್ರತಿ ಗ್ರಾಂಗೆ):

  • ಬೆಂಗಳೂರು: 24K – ₹14,662 | 22K – ₹13,440 | 18K – ₹10,997

  • ದಾವಣಗೆರೆ: 24K – ₹14,672 | 22K – ₹13,449 | 18K – ₹11,004

  • ಮಂಗಳೂರು: 24K – ₹14,672 | 22K – ₹13,449 | 18K – ₹11,004

  • ಮೈಸೂರು: 24K – ₹14,672 | 22K – ₹13,449 | 18K – ₹11,004

Share

Leave a comment

Leave a Reply

Your email address will not be published. Required fields are marked *

Related Articles