SUDDIKSHANA KANNADA NEWS/ DAVANAGERE/ DATE:14-12-2024
ನವದೆಹಲಿ: ಭಾರತದ ಸಂವಿಧಾನ ಬದಲಿಸಬೇಕೆಂದು ಆಗಿನ ಪ್ರಧಾನಿ ಜವಾಹರ ಲಾಲ್ ನೆಹರೂ ಮುಂದಾಗಿದ್ರು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಫೋಟಕ ಆರೋಪ ಮಾಡಿದರು.
ಸಂಸತ್ ನಲ್ಲಿ ಮಾತನಾಡಿದ ಅವರು, ಸಂವಿಧಾನದ ಶಿಕಾರಿಯ ರಕ್ತ ಕಾಂಗ್ರೆಸ್ ಗೆ ಅಂಟಿದೆ. ಕಾಂಗ್ರೆಸ್ ನಿಂದ ಕಾಲ ಕಾಲಕ್ಕೆ ಸಂವಿಧಾನಕ್ಕೆ ಶಿಕಾರಿ ನಡೆದಿದೆ. ಒಂದೇ ಕುಟುಂಬದಿಂದ ಸಂವಿಧಾನಕ್ಕೆ ಹಾನಿ ಆಗಿದೆ. 1970ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಏನೆಲ್ಲಾ ಮಾಡಿದ್ದಾರೆ ಎಂಬುದು ಗೊತ್ತಿಲ್ಲವಾ? ಇಂದಿರಾಗಾಂಧಿ ಸುಪ್ರೀಂ ತೀರ್ಪು ಬದಲಿಸಲು ಪ್ರಯತ್ನಿಸಿದ್ದರು. ಇಂಥ ಪ್ರಧಾನಿ ಬಗ್ಗೆ ಕೊಂಡಾಡುತ್ತಾರೆ ಎಂದು ಹೇಳಿದರು.
ಲೋಕಸಭೆಯಲ್ಲಿ ನಮೋ ಅಬ್ಬರದ ಭಾಷಣಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸದಸ್ಯರು ಸೈಲೆಂಟ್ ಆದರು. ಇಂದಿರಾ ಗಾಂಧಿ ಸುಪ್ರೀಂಕೋರ್ಟ್ ಶಕ್ತಿ ಕಡಿಮೆ ಮಾಡಲು ಯತ್ನಿಸಿದ್ದು ಸುಳ್ಳಾ ಎಂದು ಪ್ರಶ್ನಿಸಿದರು.