Home ದಾವಣಗೆರೆ ಬಿಲ್ ಬಾಕಿಯಿಂದಾಗಿ ನಿರ್ಮಾಣ ಹಂತದ ಹಳೇ‌ ಕುಂದುವಾಡ ಬ್ರಿಡ್ಜ್ ಕಾಮಗಾರಿ ಸ್ಥಗಿತ: ಮೂರು ತಿಂಗಳಲ್ಲಿ ಕಾಮಗಾರಿ‌ ಪೂರ್ಣಗೊಳಿಸದಿದ್ದರೆ ಹೆದ್ದಾರಿ ಬಂದ್ ಎಚ್ಚರಿಕೆ..!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ಬಿಲ್ ಬಾಕಿಯಿಂದಾಗಿ ನಿರ್ಮಾಣ ಹಂತದ ಹಳೇ‌ ಕುಂದುವಾಡ ಬ್ರಿಡ್ಜ್ ಕಾಮಗಾರಿ ಸ್ಥಗಿತ: ಮೂರು ತಿಂಗಳಲ್ಲಿ ಕಾಮಗಾರಿ‌ ಪೂರ್ಣಗೊಳಿಸದಿದ್ದರೆ ಹೆದ್ದಾರಿ ಬಂದ್ ಎಚ್ಚರಿಕೆ..!

Share
ಬಾಕಿ
Share

ದಾವಣಗೆರೆ: ನಗರ ಸಮೀಪದ ಹಳೇ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಬ್ರಿಡ್ಜ್ ಕಾಮಗಾರಿಯನ್ನ ಹಲವು ನೆಪ ಹೇಳಿ ನಿಲ್ಲಿಸಲಾಗಿದ್ದು, ಈ‌ ಕೂಡಲೇ ಕಾಮಗಾರಿ ಶುರು ಮಾಡಿ ಮೂರು ತಿಂಗಳಲ್ಲಿ ಬ್ರಿಡ್ಜ್ ಕಾಮಗಾರಿ ಮುಗಿಸದಿದ್ದರೆ ಹೆದ್ದಾರಿ ಬಂದ್ ಮಾಡುವುದಾಗಿ ಗ್ರಾಮಸ್ಥರು ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಬ್ರಿಡ್ಜ್ ಕಾಮಗಾರಿಗೆ ಬಾಕಿ ಅನುದಾನ‌ ಬಿಡುಗಡೆಯಾಗಿಲ್ಲ ಎಂದು ನೆಪವೊಡ್ಡಿ ಕೆಲಸ ನಿಲ್ಲಿಸಿದ್ದು, ಈ ಕೂಡಲೇ ಕಾಮಗಾರಿ‌ ಪ್ರಾರಂಭಿಸಬೇಕು ಎಂದು ಇಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ. ಗಂಗಾಧರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ದಾವಣಗೆರೆ ನಗರದ ಹಳೇ ಕುಂದುವಾಡ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರಿಡ್ಜ್ ನಿರ್ಮಿಸಲಾಗುತ್ತಿದೆ, ಕಳೆದ ಎರಡುವರೆ ತಿಂಗಳಿನಿಂದ ಹಳೇಯ ಎರಡು ಬ್ರಿಡ್ಜ್ ಗಳನ್ನ ಒಡೆದು, ಹೊಸ ಬ್ರಿಡ್ಜ್ ಗೆ ಕಬ್ಬಿಣ್ಣ ಹಾಕಿ ಆಮೆಗತಿಯಲ್ಲಿ ಕೆಲಸ ಮಾಡಲಾಗಿದೆ, ಅನುದಾನ ಬಿಡುಗಡೆಯಾಗಿಲ್ಲ, ಬಿಲ್‌ಬಾಕಿ ಇದೆ, ಕೆಲಸಗಾರರು ಸಿಗ್ತಿಲ್ಲ, ಪ್ಲಾನ್ ಬದಲಾಗಿದೆ ಎಂದು ವಿವಿಧ ಕಾರಣಗಳನ್ನ ಹೇಳಿ ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗ್ತಿದೆ, ಬೇಸಿಗೆ ರಜೆ ಅವಧಿ ಒಳಗಾಗಿ ಬ್ರಿಡ್ಜ್ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿ ಕೆಲಸವನ್ನೆ ಶುರು ಮಾಡಿಲ್ಲ ಎಂದು ಆರೋಪಿಸಿದರು. 

ಹಳೇ ಎರಡು ನಿರ್ಲಿಪ್ತ ಬ್ರಿಡ್ಜ್ ಹೊಡೆದು ಹಾಕಿ ಎಲ್ಲೆಂದರಲ್ಲಿ ಗುಂಡಿ ಅಗೆದು ಬಿಡಲಾಗಿದೆ, ಕಬ್ಬಿಣ ಹಾಕಿ ಕೆಲಸ ನಿಲ್ಲಿಸಲಾಗಿದೆ, ಕಾಮಗಾರಿ ಹಿನ್ನಲೆ ಸರ್ವಿಸ್ ರಸ್ತೆಗೆ ಹೆದ್ದಾರಿ ಡೈವೋರ್ಷನ್ ಮಾಡಲಾಗಿದ್ದು, ರೈತರಿಗೆ, ಇಲ್ಲಿನ ಸಾರ್ವಜನಿಕರಿಗೆ ತುಂಬಾ ತೊಂದರೆಗಳು ಉಂಟಾಗುತ್ತಿವೆ, ಪ್ರತಿನಿತ್ಯ ಹಲವು ಅಪಘಾತಗಳು ಸಂಭವಿಸುತ್ತಲೇ ಇವೆ. ಹೆಚ್ಚಿನ ಅವಘಡ ಆಗುವ ಮುನ್ನ ಈ ಕೂಡಲೇ ಬ್ರಿಡ್ಜ್ ಕಾಮಗಾರಿ ಶುರು ಮಾಡಬೇಕು, ಎರಡ್ಮೂರು ತಿಂಗಳುಗಳ‌ ಒಳಗಾಗಿ ಕಾಮಗಾರಿ ಪೂರ್ಣ ಮಾಡಬೇಕು ಹಾಗೂ ಬ್ರಿಡ್ಜ್ ಎತ್ತರ ಐದುವರೆ ಮೀಟರ್ ಗೆ ಹೆಚ್ಚಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.

ಸರ್ಕಾರಿ ಪ್ರಾಥಾಮಿಕ, ಪ್ರೌಢಶಾಲೆ, ಕಾಲೇಜು ವಿಭಾಗ ಮುಖ್ಯ ಶಿಕ್ಷಕರು ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿ, ಬ್ರಿಡ್ಜ್ ನಿರ್ಮಾಣ ಅರ್ಧಕ್ಕೆ‌ ನಿಂತಿರುವುದರಿಂದ ಶಾಲೆಯಲ್ಲಿ ಈ ಭಾರೀ ಮಕ್ಕಳ‌ ನೋಂದಣಿ‌ ಕಡಿಮೆ ಆಗಿದೆ, ಬ್ರಿಡ್ಜ್ ಇಲ್ಲದ ಕಾರಣ ಸುತ್ತುವರೆದು ಶಾಲೆಗೆ ಬರಬೇಕಾದ ಸ್ಥಿತಿ ಎದುರಾಗಿದೆ, ಹೀಗಾಗಿ ಪೋಷಕರು ಹೆದರಿ ಹತ್ತಿರ ಇರುವ ಖಾಸಗಿ ಶಾಲೆಗಳಿಗೆ ಮಕ್ಕಳನ್ನ ಸೇರಿಸಿದ್ದಾರೆ, ರಸ್ತೆ ದಾಟಲು ಶಾಲಾ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿದೆ, ಹಳೇ ಬ್ರಿಡ್ ಗಳನ್ನ ಸಹ ಹೊಡೆದು ಹಾಕಿರುವುದರಿಂದ ಶಾಲಾ ಮಕ್ಕಳು ಸಂಚರಿಸಲು ಹರಸಾಹಸ ಪಡುವಂತಾಗಿದೆ, ಸ್ವಲ್ಪ ಯಾಮಾರಿದರು, ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ, ಈ‌ ಹಿನ್ನಲೆ ಬ್ರಿಡ್ಜ್ ಕೆಲಸ ಶುರು ಮಾಡಿಸಿ ಬೇಗನೇ ಕಾಮಗಾರಿ ಮುಗಿಸಿ ಸಂಚಾರ ಮುಕ್ತ ಮಾಡಬೇಕು ಎಂದು ಶಿಕ್ಷಕರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಮುಖಂಡರಾದ ಬಸವರಾಜ್ ಅಕ್ಕಿ, ಸಂಪತ್ ಕುಮಾರ್, ಗೋಪಾಲಪ್ಪ, ಹನುಮಂತಪ್ಪ, ಸಣ್ಣಿಂಗಪ್ಪ, ಮುಖ್ಯ ಶಿಕ್ಷಕ ರವಿಕುಮಾರ್, ಸಿ. ಮಾರುತೇಶ್, ಮಧುನಾಗರಾಜ್‌, ಯಶವಂತ್, ರಾಜೂ ಕರೂರು ಸೇರಿದಂತೆ ಮತ್ತಿತರರಿದ್ದರು.

Share

Leave a comment

Leave a Reply

Your email address will not be published. Required fields are marked *