ಬೆಂಗಳೂರು: ದೇಶದ ಪ್ರತಿಷ್ಠಿತ ಬ್ಯಾಂಕಿಂಗ್ ಸಂಸ್ಥೆಯಾದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) 2026-27ನೇ ಸಾಲಿನ ‘ಸ್ಟೂಡೆಂಟ್ ಇಂಟರ್ನ್ಶಿಪ್ ಸ್ಕೀಮ್’ (SIS) ಅಡಿಯಲ್ಲಿ ಖಾಲಿ ಇರುವ ಒಟ್ಟು 39 ವಿದ್ಯಾರ್ಥಿ ಇಂಟರ್ನ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ನಲ್ಲಿ ಕೆಲಸದ ಅನುಭವ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಜೂನ್ 16, 2026 ರೊಳಗೆ ಅಧಿಕೃತ ಗೂಗಲ್ ಫಾರ್ಮ್ ಲಿಂಕ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರಗಳು:
ಸಂಸ್ಥೆಯ ಹೆಸರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD)
ಹುದ್ದೆಯ ಹೆಸರು: ಸ್ಟೂಡೆಂಟ್ ಇಂಟರ್ನ್ (Student Intern)
ಒಟ್ಟು ಹುದ್ದೆಗಳು: 39
ಕೆಲಸದ ಸ್ಥಳ: ದೇಶಾದ್ಯಂತ (ಪ್ರಾದೇಶಿಕ ಕಚೇರಿಗಳು ಮತ್ತು ಮುಂಬೈ ಪ್ರಧಾನ ಕಚೇರಿ)
ಇಂಟರ್ನ್ಶಿಪ್ ಅವಧಿ: ಕನಿಷ್ಠ 8 ವಾರಗಳಿಂದ ಗರಿಷ್ಠ 12 ವಾರಗಳು (2 ರಿಂದ 3 ತಿಂಗಳು)
ಮಾಸಿಕ ಭತ್ಯೆ (Stipend):
ಆಯ್ಕೆಯಾಗುವ ಇಂಟರ್ನ್ಗಳಿಗೆ ಪ್ರತಿ ತಿಂಗಳು 20,000 ರೂ. ಸ್ಟೈಪೆಂಡ್ ನೀಡಲಾಗುತ್ತದೆ. ಇದರೊಂದಿಗೆ ಕ್ಷೇತ್ರ ಭೇಟಿ (Field Visit) ಸಂದರ್ಭದಲ್ಲಿ ದಿನಕ್ಕೆ 1,500 ರೂ. ವರೆಗೆ ಪ್ರತ್ಯೇಕ ಭತ್ಯೆ ಹಾಗೂ ಪ್ರಯಾಣ ಭತ್ಯೆಯನ್ನೂ ನೀಡಲಾಗುವುದು.
ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಿಂದ ಈ ಕೆಳಗಿನ ಕೋರ್ಸ್ಗಳನ್ನು ಮಾಡುತ್ತಿರಬೇಕು:
ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳು, ಅಗ್ರಿ-ಬಿಸಿನೆಸ್, ಎಕನಾಮಿಕ್ಸ್, ಸೋಷಿಯಲ್ ಸೈನ್ಸ್ ಅಥವಾ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಪೋಸ್ಟ್ ಗ್ರಾಜುಯೇಷನ್ (PG Degree/PGDM) ಮಾಡುತ್ತಿದ್ದು, ಪ್ರಸ್ತುತ 1ನೇ ವರ್ಷ ಮುಗಿಸಿರಬೇಕು/ಮುಗಿಸುತ್ತಿರಬೇಕು.
ಅಥವಾ 5 ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು 4ನೇ ವರ್ಷವನ್ನು ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ನಿವಾಸಿಯಾಗಿರಬೇಕು ಅಥವಾ ಅದೇ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು.
ಆಯ್ಕೆ ಪ್ರಕ್ರಿಯೆ:
ಈ ಇಂಟರ್ನ್ಶಿಪ್ಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ಅಭ್ಯರ್ಥಿಗಳ 10ನೇ ತರಗತಿ, ಪಿಯುಸಿ (12th) ಮತ್ತು ಪದವಿ (Graduation) ಅಂಕಗಳ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ.
ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳಿಗೆ ನೇರ ಸಂದರ್ಶನ (Interview) ನಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 10-06-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-06-2026
ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ಪ್ರಕಟಣೆ: 17-06-2026
ಸಂದರ್ಶನ ಮತ್ತು ಫಲಿತಾಂಶ ಪ್ರಕಟಣೆ (ತಾತ್ಕಾಲಿಕ): 22-06-2026
ಅರ್ಜಿ ಸಲ್ಲಿಸುವುದು ಹೇಗೆ?:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳು ನಾಬಾರ್ಡ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಅಲ್ಲಿ ನೀಡಲಾಗಿರುವ ಅಧಿಕೃತ ಗೂಗಲ್ ಫಾರ್ಮ್ ಲಿಂಕ್ ಮೂಲಕ ತಮ್ಮ ವಿವರಗಳನ್ನು ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವ ಮುನ್ನ ಕಾಲೇಜಿನಿಂದ ಪಡೆದ ಬೋನಫೈಡ್ ಸರ್ಟಿಫಿಕೇಟ್ (Bonafide Certificate), ರೆಸ್ಯೂಮ್ ಮತ್ತು ಅಂಕಪಟ್ಟಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
ಅಧಿಕೃತ ವೆಬ್ಸೈಟ್: nabard.org
- 20000 Stipend Jobs
- Bank Jobs 2026
- central government jobs for students
- Government Internship 2026
- NABARD Online Application Link
- NABARD Recruitment 2026
- NABARD SIS 2026
- NABARD Student Internship Scheme 2026
- Post Graduate Internships India
- Student Intern Vacancy
- ಉಚಿತ ಅರ್ಜಿ ಉದ್ಯೋಗ ಮಾಹಿತಿ
- ಕರ್ನಾಟಕ ಉದ್ಯೋಗ ಸುದ್ದಿ
- ಕೇಂದ್ರ ಸರ್ಕಾರಿ ಉದ್ಯೋಗಗಳು
- ನಾಬಾರ್ಡ್ ನೇಮಕಾತಿ 2026
- ಪರೀಕ್ಷೆಯಿಲ್ಲದ ಉದ್ಯೋಗಗಳು
- ಪಿಜಿ ವಿದ್ಯಾರ್ಥಿಗಳಿಗೆ ಕೆಲಸ
- ಬ್ಯಾಂಕ್ ಇಂಟರ್ನ್ಶಿಪ್
- ಮಾಸಿಕ ಸ್ಟೈಪೆಂಡ್ ಇಂಟರ್ನ್ಶಿಪ್
- ವಿದ್ಯಾರ್ಥಿ ಇಂಟರ್ನ್ಶಿಪ್ ಯೋಜನೆ





Leave a comment