ದಾವಣಗೆರೆ: ಜಮೀನು ಮಾರಾಟ ಮಾಡಿ ಓಮಿ ಕಾರಿನಲ್ಲಿ ಹಣ ತರುತ್ತಿದ್ದ ವೇಳೆ ಅಡ್ಡಗಟ್ಟಿ 38 ಲಕ್ಷ ರೂಪಾಯಿ ನಗದನ್ನು ಸುಲಿಗೆ ಮಾಡಿದ್ದ ಪ್ರಕರಣವನ್ನು ಹೊನ್ನಾಳಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಬ್ರೋಕರ್ ಸೇರಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಅಂದಾಜು 30 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಗರಿಬೊಮ್ಮನಹಳ್ಳಿಯ ಮೆಹಬೂಬ್ (34), ದಾವಣಗೆರೆಯ ಹನುಮಂತಪ್ಪ @ ಜಂಗ್ಲಿ (33), ವಿ. ಅಜ್ಜಪ್ಪ @ ಅಜಯ್ (35) ಮತ್ತು ಅನಿಲ್ ಬಿ (27) ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ 6 ಲಕ್ಷ ರೂ. ಮೌಲ್ಯದ 1 ಕಾರು, 70 ಸಾವಿರ ಮೌಲ್ಯದ 3 ಮೊಬೈಲ್ ಹಾಗೂ 23,30,000 ರೂ. ನಗದು ಹಣ ಸೇರಿ ಒಟ್ಟು 30 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಭದ್ರಾವತಿ ತಾಲ್ಲೂಕಿನ ಮಾಲತೇಶ ಎಂಬುವರು ಹಗರಿಬೊಮ್ಮನಹಳ್ಳಿಯಲ್ಲಿ ತಮ್ಮ ಜಮೀನನ್ನು ಮಾರಾಟ ಮಾಡಿದ್ದರು. ಆ ಹಣವನ್ನು ತಮ್ಮ ಸ್ನೇಹಿತನೊಂದಿಗೆ ಓಮಿ ಕಾರಿನಲ್ಲಿ ತರುತ್ತಿದ್ದಾಗ, ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮಾರನಹಳ್ಳಿ ಕಣಿವೆ ಹತ್ತಿರ ) ರಾತ್ರಿ 11:30ರ ಸುಮಾರಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಇವರ ವಾಹನವನ್ನು ಅಡ್ಡಗಟ್ಟಿದ್ದರು.
ಬಳಿಕ ಜೀವಬೆದರಿಕೆ ಹಾಕಿ ಕಾರಿನಲ್ಲಿದ್ದ 38 ಲಕ್ಷ ರೂ. ನಗದು ಹಣವಿದ್ದ ಬ್ಯಾಗ್ ಅನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬ್ರೋಕರ್ ನೇತೃತ್ವದಲ್ಲೇ ನಡೆದಿತ್ತು ಸ್ಕೆಚ್!
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ ಮತ್ತು ಹೆಚ್ಚುವರಿ ಎಸ್ಪಿಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತಾಂತ್ರಿಕ ಸಹಾಯದೊಂದಿಗೆ ತನಿಖೆ ನಡೆಸಿದ ಪೊಲೀಸರು, ಪಿರ್ಯಾದಿದಾರರಿಗೆ ಜಮೀನು ಮಾರಾಟ ಮಾಡಲು ಸಹಕರಿಸಿದ್ದ ಬ್ರೋಕರ್ ಮೆಹಬೂಬ್ (34) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ತಾನೇ ಉಳಿದ ಆರೋಪಿಗಳೊಂದಿಗೆ ಸೇರಿ ಸುಲಿಗೆಗೆ ಸಂಚು ರೂಪಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.
ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದ ಡಿವೈಎಸ್ಪಿಗಳಾದ ಬಸವರಾಜ ಬಿ.ಎಸ್, ರುದ್ರಪ್ಪ ಎಸ್ ಉಜ್ಜನಕೊಪ್ಪ, ಸಿಪಿಐ ಸುನೀಲ್ ಕುಮಾರ್ ಹೆಚ್, ಪಿಎಸ್ಐಗಳಾದ ಹೊಳಬಸಪ್ಪ ಹೋಳಿ, ಪ್ರಭು ಡಿ ಕೆಳಗಿನಮನಿ ಹಾಗೂ ಸಿಬ್ಬಂದಿ ವರ್ಗ ಮತ್ತು ತುಂಗಾ ಶ್ವಾನದಳದ ತಂಡಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
- 30 ಲಕ್ಷ ಸ್ವತ್ತು ವಶ
- 38 Lakh Robbery
- Davanagere crime news
- Honnali Crime
- Honnali Police Arrest
- Karnataka Police success
- Komaranahalli Valley Robbery
- Land Broker Arrested
- Property Seized
- Robbery Case Davanagere
- Theft Case 2026
- ಕೊಮಾರನಹಳ್ಳಿ ಕಣಿವೆ ದರೋಡೆ
- ಜಮೀನು ಹಣ ದರೋಡೆ
- ದಾವಣಗೆರೆ ಕ್ರೈಮ್ ನ್ಯೂಸ್
- ದಾವಣಗೆರೆ ಸುದ್ದಿ
- ನಾಲ್ವರ ಬಂಧನ
- ಮೆಹಬೂಬ್ ಬ್ರೋಕರ್ ಬಂಧನ
- ಸುಲಿಗೆ ಪ್ರಕರಣ
- ಹೊನ್ನಾಳಿ ಕ್ರೈಮ್
- ಹೊನ್ನಾಳಿ ಪೊಲೀಸ್ ಠಾಣೆ





Leave a comment