ದಾವಣಗೆರೆ: ಪಾಕಿಸ್ತಾನ ಮೂಲದ ಇನ್ ಸ್ಟಾಗ್ರಾಂ ಫಾಲೋ ಮಾಡುತ್ತಿದ್ದ ದಾವಣಗೆರೆಯ ಯುವಕ, ತುಮಕೂರಿನ ವ್ಯಕ್ತಿ ಸೇರಿದಂತೆ ಇತರರನ್ನು ರಾಜ್ಯ ಗುಪ್ತಚರ ಇಲಾಖೆಯು ಬಂಧಿಸಿ ವಿಚಾರಣೆ ನಡೆಸಿದೆ.
ಬೆಂಗಳೂರು ಮೂಲದ ಮೂವರು, ತುಮಕೂರಿನ ಓರ್ವ ಮತ್ತು ದಾವಣಗೆರೆಯ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಯುವಕನೊಬ್ಬ ಪಾಕಿಸ್ತಾನದ ಇನ್ ಸ್ಟಾಗ್ರಾಂ ಫಾಲೋ ಮಾಡುತ್ತಿದ್ದರು. ಭಾರತದ ವಿರುದ್ಧದ ದ್ವೇಷಕಾರಿ ಸಂದೇಶ, ಭಾಷಣ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಸಹಮತ ವ್ಯಕ್ತಪಡಿಸುತ್ತಿದ್ದರು. ಭಾಷಣ, ಪೋಸ್ಟರ್ ಗಳಿಗೆ ಓಕೆ ಎನ್ನುವ ಥಂಬ್ಸ್, ಎಸ್ ಎಂಬ ಮೆಸೇಜ್ ಅನ್ನು ಈ ಐವರು ದೇಶದ್ರೋಹಿಗಳು ಕಳುಹಿಸಿದ್ದು ಬೆಳಕಿಗೆ ಬಂದಿದೆ.
ದಾವಣಗೆರೆಯ ಯುವಕ ಯಾರು?
ದಾವಣಗೆರೆಯ ಆಜಾದ್ ನಗರದ 22 ವರ್ಷದ ಜಮೀರ್ ಖಾನ್ ಬಂಧಿತ ಆರೋಪಿ. ತುಮಕೂರಿನ ಅಲ್ಲಾಭಕ್ಷಿ ಬಂಧಿತ ಆರೋಪಿಗಳು. ಬೆಂಗಳೂರಿನ ಕೆಲವರನ್ನು ಕಳೆದ ಮೂರು ದಿನಗಳ ಹಿಂದೆಯೇ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮಾತ್ರವಲ್ಲ, ಆರೋಪಿಗಳ ಮೊಬೈಲ್ ಅನ್ನು ಪರಿಶೀಲನೆ ನಡೆಸಿದ್ದಾರೆ.
ರಾಣಾ ಹುಸೇನ್ ಇನ್ ಸ್ಟಾಗ್ರಾಂ ಫಾಲೋವರ್ಸ್:
ಇನ್ನು ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾದ ರಾಣಾ ಹುಸೇನ್ ಗೆ ಸೇರಿದ್ದ ಇನ್ ಸ್ಟಾಗ್ರಾಂ ಫಾಲೋ ಮಾಡುತ್ತಿದ್ದ ಜಮೀರ್ ಖಾನ್, ಅಲ್ಲಾಭಕ್ಷಿ ಸೇರಿದಂತೆ ಮೂವರು ಭಾರತದ ವಿರುದ್ಧದ ಪ್ರಚೋದನಕಾರಿ ಸಂದೇಶಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಮಾತ್ರವಲ್ಲ, ಭಯೋತ್ಪಾದಕ ಸಂಘಟನೆಗಳ ಜೊತೆ ಸಕ್ರಿಯ ನಿಕಟ ಸಂಪರ್ಕ ಹೊಂದಿದ್ದರೋ, ಉಗ್ರರಿಗೆ ಹಣದ ಸಹಾಯ ಮಾಡುತ್ತಿದ್ದವರ ಜೊತೆ ಸಂಪರ್ಕದಲ್ಲಿದ್ದಾರೋ ಎಂಬ ಕುರಿತಂತೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಈ ಆಯಾಮದಲ್ಲಿಯೂ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಭಾರತದ ವಿರುದ್ಧದ ಪಾಕಿಸ್ತಾನ ಕುತಂತ್ರಗಳು ಇಂದು ನಿನ್ನೆಯದಲ್ಲ. ಆದರೆ ಪಾಕಿಸ್ತಾನ ಮೂಲದ ಇನ್ ಸ್ಟಾಗ್ರಾಂ ಫಾಲೋ ಮಾಡುತ್ತಿದ್ದ ಹಾಗೂ ಭಾರತದ ವಿರುದ್ಧದ ಸಂದೇಶಗಳಿಗೆ ಸಹಮತ ವ್ಯಕ್ತಪಡಿಸುತ್ತಿದ್ದ ಈ ದುರುಳರ ವಿರುದ್ಧ ದೇಶದ್ರೋಹಿ ಕೇಸ್ ದಾಖಲಿಸಲಾಗಿದೆ. ವಿಚಾರಣೆ ನಡೆಸಿ ಕೆಲವರನ್ನು ಬಿಟ್ಟು ಕಳುಹಿಸಲಾಗಿದ್ದರೂ, ಇವರ ಚಲನವಲನಗಳ ಬಗ್ಗೆ ನಿಗಾ ಇಡಲಾಗಿದೆ. ಭಯೋತ್ಪಾದಕ ಸಂಘಟನೆಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದರ ಬಗ್ಗೆ ಸ್ಪಷ್ಟ ದಾಖಲೆ ಇಲ್ಲ. ದೇಶದ್ರೋಹಿ ಚಟುವಟಿಕೆ ಎಂದು ಪರಿಗಣಿಸಲಾಗಿದ್ದು, ಇವರ ವಿರುದ್ಧ ದೇಶದ್ರೋಹಿ ಕೇಸ್ ದಾಖಲಿಸಲಾಗಿದೆ. ತನಿಖೆ ಇನ್ನೂ ಮುಂದುವರಿಸಿದೆ. ತನಿಖಾ ಹಂತದಲ್ಲಿ ಇರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ರಾಜ್ಯ ಗುಪ್ತಚರ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು “ಸುದ್ದಿಕ್ಷಣ ಡಿಜಿಟಲ್ ನ್ಯೂಸ್ ಮೀಡಿಯಾ”ಕ್ಕೆ ಮಾಹಿತಿ ನೀಡಿದ್ದಾರೆ.
- Anti India social media post
- Davanagere youth arrested
- Karnataka Intelligence arrest
- Pakistan Instagram follow case
- Rana Hussain Instagram followers
- Sedition case Karnataka
- Zameer Khan Davanagere
- ಉಗ್ರರ ಸಂಪರ್ಕ ತನಿಖೆ
- ಕರ್ನಾಟಕ ಕ್ರೈಮ್ ನ್ಯೂಸ್
- ಜಮೀರ್ ಖಾನ್ ದಾವಣಗೆರೆ
- ದಾವಣಗೆರೆ ಯುವಕ ಬಂಧನ
- ದೇಶದ್ರೋಹದ ಕೇಸ್
- ಪಾಕಿಸ್ತಾನ ಇನ್ಸ್ಟಾಗ್ರಾಮ್ ಲಿಂಕ್
- ರಾಜ್ಯ ಗುಪ್ತಚರ ಇಲಾಖೆ





Leave a comment