SUDDIKSHANA KANNADA NEWS/ DAVANAGERE/ DATE:17-11-2024
ದಾವಣಗೆರೆ: ಗಾಂಧಿನಗರ, ಭಾಷಾನಗರ ಸೇರಿದಂತೆ ಎಲ್ಲೆಲ್ಲಿ ಮನೆಗಳಿಗೆ ಮಳೆಯ ನೀರಿಂದ ತೊಂದರೆ ಆಗುವುದೊ ಅಲ್ಲಲ್ಲಿ ಮಳೆ ನೀರು ತಡೆಗಟ್ಟುವ ಕಾರ್ಯಗಳನ್ನು ಮಾಡಿ, ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜನ್ ಅವರು ಅಧಿಕಾರಿಗಳಿಗೆ ಹೇಳಿದರು.
ನಗರದ ದೇವರಾಜ್ ಅರಸು ಬಡಾವಣೆಯಲ್ಲಿರುವ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪಾಧಿಕಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳನ್ನು ಅಭಿವೃದ್ಧಿ ಹೆಚ್ಚು ಒತ್ತನ್ನು ನೀಡುವಂತೆ ಸೂಚಿಸಿದ ಸಚಿವರು ಕಳಪೆ ಕಾಮಗಾರಿಯಿಂದ ಕುಂದವಾಡ ಕೆರೆ ಅಭಿವೃದ್ಧಿ ವಂಚಿತವಾಗಿದೆ. ಬಾತಿ ಕೆರೆಯ ಕಾಮಗಾರಿಯನ್ನು ಕುಂದವಾಡ ಕೆರೆ ಕಾಮಗಾರಿಯಂತೆ ಮಾಡದಿರಿ, ಕೆರೆಗೆ ಹೈಟೆಕ್ ಸ್ಪರ್ಶ ನೀಡಿ ಪ್ರವಾಸಿ ತಾಣವನ್ನಾಗಿಸಿ, ಅಲ್ಲದೆ ಪ್ರಾಧಿಕಾರ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಯ ಕಡೆ ಗಮನ ಹರಿಸಿ ಎಂದರು.
ಗಾಂಧಿನಗರ ಸಾರ್ವಜನಿಕರ ರುದ್ರಭೂಮಿಯು ಅವ್ಯವಸ್ಥೆಯಿಂದ ಕೂಡಿದೆ ಎಂದು ಸದಸ್ಯರೊಬ್ಬರು ದೂರಿದ ಹಿನ್ನೆಲೆಯಲ್ಲಿ ಸಚಿವರು ಮಳೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಬೇಕು. ಎಸ್.ಎಸ್.ಎಂ ನಗರದಲ್ಲಿನ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಮಾಡಬೇಕು. ದಾವಣಗೆರೆ ಹಾಗೂ ಹರಿಹರ ನಗರದಲ್ಲಿನ ಉದ್ಯಾನಗಳನ್ನು ಅಭಿವೃದ್ಧಿತ್ತ ಕೊಂಡೊಯ್ಯಬೇಕು ಎಂದು ಹೇಳಿದರು.
ಸಭೆಯ ನಂತರ ಸಚಿವರು ವಿವಿಧ ಬಡಾವಣೆಗಳಿಂದ ಆಗಮಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಗಂಗಾಧರ ಸ್ವಾಮಿ, ಎಂ.ಎಲ್.ಸಿ ಅಬ್ದುಲ್ ಜಬ್ಬಾರ್, ದೂಡಾ ಅಧ್ಯಕ್ಷ ದಿನೇಶ್.ಕೆ.ಶೆಟ್ಟಿ, ದೂಡಾ ಆಯುಕ್ತರಾದ ಹುಲ್ಲುಮನಿ ತಿಪ್ಪಣ್ಣ, ಪಾಲಿಕೆ ಆಯುಕ್ತರಾದ ರೇಣುಕಾ, ಹರಿಹರ ನಗರಸಭೆ ಆಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಅಧಿಕಾರಿಗಳು ಹಾಗೂ ದೂಡಾ ಸದಸ್ಯರು ಹಾಜರಿದ್ದರು.