Home ಕ್ರೈಂ ನ್ಯೂಸ್ ಡಿಎಂಕೆ ಸರ್ಕಾರವು ರೂ. 10 ಲಕ್ಷ ಕೋಟಿ ಸಾಲ ಸುಳಿಗೆ ಸಿಲುಕಿಸಿದ ಬಗ್ಗೆ ‘ಶ್ವೇತಪತ್ರ’ ಬಿಡುಗಡೆ: ಸಿಎಂ ಸಿ. ಜೋಸೆಫ್ ವಿಜಯ್ ಘೋಷಣೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುಸಿನಿಮಾ

ಡಿಎಂಕೆ ಸರ್ಕಾರವು ರೂ. 10 ಲಕ್ಷ ಕೋಟಿ ಸಾಲ ಸುಳಿಗೆ ಸಿಲುಕಿಸಿದ ಬಗ್ಗೆ ‘ಶ್ವೇತಪತ್ರ’ ಬಿಡುಗಡೆ: ಸಿಎಂ ಸಿ. ಜೋಸೆಫ್ ವಿಜಯ್ ಘೋಷಣೆ!

Share
ವಿಜಯ್
Share

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರು ಭಾನುವಾರ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ವಿಜಯ್ ಅವರು ತಮ್ಮ ಚುನಾವಣಾ ಪ್ರಣಾಳಿಕೆಯ ಪ್ರಮುಖ ಭರವಸೆಗಳಿಗೆ ಸಹಿ ಹಾಕುವ ಮೂಲಕ ಆಡಳಿತ ಆರಂಭಿಸಿದ್ದಾರೆ.

ವಿಜಯ್ ಅವರ ಮೊದಲ 3 ಪ್ರಮುಖ ನಿರ್ಧಾರಗಳು:

ಉಚಿತ ವಿದ್ಯುತ್:

ಮನೆ ಬಳಕೆಯ ಗ್ರಾಹಕರಿಗೆ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ನೀಡುವ ಕಡತಕ್ಕೆ ಮೊದಲ ಸಹಿ ಹಾಕಿದರು.

ಮಹಿಳಾ ಸುರಕ್ಷತೆ:

ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗಾಗಿ ಪ್ರತ್ಯೇಕ ‘ವಿಶೇಷ ಪಡೆ’ (Special Force) ರಚನೆಗೆ ಅನುಮೋದನೆ ನೀಡಿದ್ದಾರೆ.

ಮಾದಕ ದ್ರವ್ಯ ಮುಕ್ತ ತಮಿಳುನಾಡು:

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮಾದಕ ದ್ರವ್ಯ ವಿರೋಧಿ ಘಟಕ (Anti-Drug Unit) ಸ್ಥಾಪಿಸಲು ಆದೇಶಿಸಿದ್ದಾರೆ.

ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಅವರು, ಹಿಂದಿನ ಡಿಎಂಕೆ ಸರ್ಕಾರವು ರಾಜ್ಯವನ್ನು 10 ಲಕ್ಷ ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿಸಿದೆ ಎಂದು ಆರೋಪಿಸಿದರು. ಈ ಬಗ್ಗೆ ಶೀಘ್ರದಲ್ಲೇ ‘ಶ್ವೇತಪತ್ರ’ ಬಿಡುಗಡೆ ಮಾಡುವುದಾಗಿ ಘೋಷಿಸಿದರು. 234 ಸದಸ್ಯರ ಬಲದ ವಿಧಾನಸಭೆಯಲ್ಲಿ 120 ಸದಸ್ಯರ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *