Home ತಮಿಳುನಾಡು ಸಿಎಂ ವಿಜಯ್ ಸಂಪುಟ ಸೇರಿದ 29ರ ಹರೆಯದ ಕೀರ್ತನಾ: ಶಿವಕಾಶಿಯ ಮೊದಲ ಮಹಿಳಾ ಶಾಸಕಿ ಈಗ ಸಚಿವೆ!
Homeದಾವಣಗೆರೆಬೆಂಗಳೂರುಸಿನಿಮಾ

ತಮಿಳುನಾಡು ಸಿಎಂ ವಿಜಯ್ ಸಂಪುಟ ಸೇರಿದ 29ರ ಹರೆಯದ ಕೀರ್ತನಾ: ಶಿವಕಾಶಿಯ ಮೊದಲ ಮಹಿಳಾ ಶಾಸಕಿ ಈಗ ಸಚಿವೆ!

Share
ವಿಜಯ್
Share

ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿರುವ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರದಲ್ಲಿ 29 ವರ್ಷದ ಎಸ್‌ ಕೀರ್ತನಾ ಅವರು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರು ವಿಜಯ್ ಸಂಪುಟದ ಅತ್ಯಂತ ಕಿರಿಯ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿರುದುನಗರ ಜಿಲ್ಲೆಯ ಶಿವಕಾಶಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೀರ್ತನಾ ಅವರು, ಕಾಂಗ್ರೆಸ್ ಅಭ್ಯರ್ಥಿ ಅಶೋಕನ್ ಜಿ ಅವರನ್ನು 11,670 ಮತಗಳ ಅಂತರದಿಂದ ಸೋಲಿಸಿ ಇತಿಹಾಸ ನಿರ್ಮಿಸಿದ್ದಾರೆ. ಕಳೆದ ಏಳು ದಶಕಗಳಿಂದ ಪುರುಷ ಪ್ರಾಬಲ್ಯವಿದ್ದ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಹಿಳಾ ಶಾಸಕಿಯಾಗಿ ಕೀರ್ತನಾ ಆಯ್ಕೆಯಾಗಿದ್ದಾರೆ. ಗಣಿತ ಮತ್ತು ಅಂಕಿಅಂಶದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ರಾಜಕೀಯಕ್ಕೆ ಬರುವ ಮುನ್ನ ಐಪ್ಯಾಕ್ (I-PAC) ನಂತಹ ಸಂಸ್ಥೆಗಳಲ್ಲಿ ರಾಜಕೀಯ ಕಾರ್ಯತಂತ್ರ ರೂಪಿಸುವ ಸಲಹೆಗಾರರಾಗಿ ಕೆಲಸ ಮಾಡಿದ್ದರು.

ಹಿಂದಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಕೀರ್ತನಾ, ವಿಜಯ್ ಅವರ ಸಂದೇಶವನ್ನು ರಾಷ್ಟ್ರಮಟ್ಟಕ್ಕೆ ತಲುಪಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *