ದಾವಣಗೆರೆ: ಮೇ-2026ರ ಮಾಹೆಯಲ್ಲಿ ಎನ್.ಎಫ್.ಎಸ್.ಎ (NFSA) ಯೋಜನೆಯಡಿ ಮೇ ಮತ್ತು ಜೂನ್ ತಿಂಗಳ ಎರಡು ತಿಂಗಳ ಪಡಿತರವನ್ನು ಒಟ್ಟಾಗಿ ವಿತರಿಸಲು ಸರ್ಕಾರ ಆದೇಶಿಸಿದೆ. ದಾವಣಗೆರೆ ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಅಂತ್ಯೋದಯ ಕಾರ್ಡ್: ಪ್ರತಿ ಕಾರ್ಡಿಗೆ 28 ಕೆ.ಜಿ ಅಕ್ಕಿ ಮತ್ತು 42 ಕೆ.ಜಿ ರಾಗಿ ವಿತರಿಸಲಾಗುವುದು. ಆದ್ಯತಾ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 4 ಕೆ.ಜಿ ಅಕ್ಕಿ ಮತ್ತು 6 ಕೆ.ಜಿ ರಾಗಿ ವಿತರಿಸಲಾಗುವುದು. ರಾಜ್ಯ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಮಾತ್ರ
ಉಚಿತವಾಗಿ ನೀಡಲಾಗುವುದು.
ಫಲಾನುಭವಿಗಳು ಮೇ ಮತ್ತು ಜೂನ್ ಮಾಹೆಯ ಪಡಿತರಕ್ಕಾಗಿ ಎರಡು ಬಾರಿ ಬಯೋ ಮೆಟ್ರಿಕ್ ದೃಢೀಕರಣ ನೀಡಬೇಕಾಗುತ್ತದೆ. ಪಡಿತರ ಪಡೆಯುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಪ್ರತಿ ಪಡಿತರ ಚೀಟಿದಾರರು ಬಯೋ ದೃಢೀಕರಣ ನೀಡಿದ ತಕ್ಷಣ ನ್ಯಾಯಬೆಲೆ ಅಂಗಡಿಯಿಂದ ಕಂಪ್ಯೂಟರ್ ರಸೀದಿಯನ್ನು ಪಡೆದು, ಅದರಲ್ಲಿರುವ ಪ್ರಮಾಣದಂತೆ ಆಹಾರಧಾನ್ಯ ಪಡೆಯಬೇಕು. ನ್ಯಾಯಬೆಲೆ ಅಂಗಡಿಕಾರರು ಪಡಿತರ ವಿತರಣೆಯ ನಂತರ ಕಡ್ಡಾಯವಾಗಿ ಪ್ರತ್ಯೇಕ ರಶೀದಿ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ.
ಪ್ರಮುಖ ಅಂಶಗಳು
ಎರಡು ತಿಂಗಳ ಪಡಿತರ: ಮೇ ಮತ್ತು ಜೂನ್ ತಿಂಗಳ ಧಾನ್ಯ ಒಟ್ಟಿಗೆ ಲಭ್ಯ.
ಬಯೋ ಮೆಟ್ರಿಕ್: ಎರಡು ಬಾರಿ ಹೆಬ್ಬೆಟ್ಟಿನ ಗುರುತು ನೀಡಬೇಕು.
ರಸೀದಿ ಕಡ್ಡಾಯ: ಧಾನ್ಯ ಪಡೆಯುವ ಮುನ್ನ ಕಂಪ್ಯೂಟರ್ ರಸೀದಿ ಪಡೆದು ಪ್ರಮಾಣವನ್ನು ಪರಿಶೀಲಿಸಿ.
ಹೆಚ್ಚಿನ ಮಾಹಿತಿಗಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ದಾವಣಗೆರೆ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ 08192-251552 ಅನ್ನು ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರಾದ ಮಧುಸೂಧನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Antyodaya Card Benefits
- BPL Ration Card Updates
- Davanagere Ration Distribution
- Double Month Ration News.
- Food and Civil Supplies Davanagere
- Free Rice and Ragi Scheme
- NFSA Karnataka 2026
- ಅಂತ್ಯೋದಯ ಕಾರ್ಡ್
- ಆಹಾರ ಇಲಾಖೆ ದಾವಣಗೆರೆ
- ಉಚಿತ ಅಕ್ಕಿ ಮತ್ತು ರಾಗಿ
- ದಾವಣಗೆರೆ ಪಡಿತರ ವಿತರಣೆ
- ಬಯೋ ಮೆಟ್ರಿಕ್ ದೃಢೀಕರಣ.
- ಬಿಪಿಎಲ್ ಪಡಿತರ ಚೀಟಿ
- ಮೇ-ಜೂನ್ ಪಡಿತರ 2026





Leave a comment