ದಾವಣಗೆರೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2025-26ನೇ ಸಾಲಿನ ಮೆಟ್ರಿಕ್ ನಂತರದ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ನೀಡಲಾಗುವ ‘ಶುಲ್ಕ ಮರುಪಾವತಿ’ ಸೌಲಭ್ಯದ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 16 ರವರೆಗೆ ವಿಸ್ತರಿಸಲಾಗಿದೆ.
ಪೋಷಕರು ಮತ್ತು ವಿದ್ಯಾರ್ಥಿಗಳ ಮನವಿಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅರ್ಹ ಹಿಂದುಳಿದ ವರ್ಗಗಳ ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬಹುದು.
ವಿದ್ಯಾರ್ಥಿಗಳು https://ssp.postmatric.karnataka.gov.in ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ವಿಳಾಸ https://bcwd.karnataka.gov.in ನ್ನು ರಲ್ಲಿ ಪಡೆಯಬಹುದು.
ಇಲಾಖಾ ಸಹಾಯವಾಣಿ ದೂರವಾಣಿ ಸಂಖ್ಯೆ: 8050770004, ಇ-ಮೇಲ್ ವಿಳಾಸ bcwdhelpline@gmail.com ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ದೂರವಾಣಿ ಸಂಖ್ಯೆ 1902 ಅಥವಾ ಇ-ಮೇಲ್ ವಿಳಾಸ postmatrichelp@karnataka.gov.in ಸಂಪರ್ಕಿಸಬಹುದು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇಣುಕಾದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Backward Classes Welfare Department
- BCWD Karnataka
- DAVANAGERE NEWS
- Education News Karnataka.
- Fee Concession Application Deadline
- Fee Reimbursement Extension
- Post Metric Scholarship
- SSP Portal Karnataka
- ಅಲೆಮಾರಿ ವಿದ್ಯಾರ್ಥಿಗಳ ಸೌಲಭ್ಯ
- ಎಸ್ಎಸ್ಪಿ ಪೋರ್ಟಲ್
- ಕರ್ನಾಟಕ ವಿದ್ಯಾರ್ಥಿವೇತನ 2026
- ದಾವಣಗೆರೆ ಸುದ್ದಿ
- ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
- ರೇಣುಕಾದೇವಿ ದಾವಣಗೆರೆ
- ಶುಲ್ಕ ಮರುಪಾವತಿ ಅರ್ಜಿ ವಿಸ್ತರಣೆ
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ





Leave a comment