Home ಕ್ರೈಂ ನ್ಯೂಸ್ ಮುಂಬೈ ಮೊಹರಂ ಮೆರವಣಿಗೆಯಲ್ಲಿ 1500 ಜನರ ಕೊಲೆಗೆ ಸಂಚು: ಐಡಿಯಾ ಬಂದಿದ್ದೇಗೆ? ಅಂತರರಾಷ್ಟ್ರೀಯ ಲಿಂಕ್ ಸೇರಿ ಸ್ಫೋಟಕ ಮಾಹಿತಿ ಬಹಿರಂಗ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮುಂಬೈ ಮೊಹರಂ ಮೆರವಣಿಗೆಯಲ್ಲಿ 1500 ಜನರ ಕೊಲೆಗೆ ಸಂಚು: ಐಡಿಯಾ ಬಂದಿದ್ದೇಗೆ? ಅಂತರರಾಷ್ಟ್ರೀಯ ಲಿಂಕ್ ಸೇರಿ ಸ್ಫೋಟಕ ಮಾಹಿತಿ ಬಹಿರಂಗ!

Share
ಮುಂಬೈ
Share

ಮುಂಬೈ: ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ಭೀಕರ ಜೈವಿಕ ದಾಳಿ ಅಥವಾ ಸಾಮೂಹಿಕ ಹತ್ಯಾಕಾಂಡ ನಡೆಸಲು ಹೂಡಿದ್ದ ಭಾರಿ ಸಂಚೊಂದನ್ನು ಮುಂಬೈ ಪೊಲೀಸರು ಯಶಸ್ವಿಯಾಗಿ ವಿಫಲಗೊಳಿಸಿದ್ದಾರೆ. ಜನರಿಗೆ ಪೇನ್‌ಕಿಲ್ಲರ್ (ನೋವು ನಿವಾರಕ) ಮಾತ್ರೆಗಳೆಂದು ನಂಬಿಸಿ ತೀವ್ರ ನಿಗಾ ಇಡಬೇಕಾದ ಜಿಂಕ್ ಫಾಸ್ಫೈಡ್ (Zinc Phosphide) ಇಲಿ ವಿಷದ ಕ್ಯಾಪ್ಸುಲ್‌ಗಳನ್ನು ಹಂಚುತ್ತಿದ್ದ ಪುಣೆ ಮೂಲದ ಉದ್ಯಮಿ ಫಯಾಜ್ ಪ್ರೇಮ್‌ಜಿ (39) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇಲಿ ಕಾಟದಿಂದ ಬಂದ ಕ್ರೂರ ಐಡಿಯಾ!

ಬಂಧಿತ ಆರೋಪಿ ಫಯಾಜ್ ಪ್ರೇಮ್‌ಜಿ ಪುಣೆಯ ವಿಮಾನ್ ನಗರದ ಐಷಾರಾಮಿ ಟೌನ್‌ಶಿಪ್ ನಿವಾಸಿಯಾಗಿದ್ದು, ಬಿಬಿಎ ಪದವೀಧರನಾಗಿದ್ದಾನೆ. ಈತನ ಮನೆಯ ಬಳಿ ಇದ್ದ ಭಾರಿ ಇಲಿಗಳ ಕಾಟವನ್ನು ನಿಯಂತ್ರಿಸಲು ಬಳಸುವ ಜಿಂಕ್ ಫಾಸ್ಫೈಡ್ ಪುಡಿಯನ್ನೇ ಈತ ಮನುಷ್ಯರ ಕೊಲೆಗೆ ಬಳಸಲು ಸ್ಕೆಚ್ ಹಾಕಿದ್ದ. ಗೂಗಲ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ, ಎಷ್ಟು ಪ್ರಮಾಣದ ಜಿಂಕ್ ಫಾಸ್ಫೈಡ್ ಸೇವಿಸಿದರೆ ಮನುಷ್ಯರು ತಕ್ಷಣ ಸಾಯುತ್ತಾರೆ ಎಂಬುದರ ಕುರಿತು ಈತ ವಿಸ್ತೃತ ಸಂಶೋಧನೆ ನಡೆಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೆರವಣಿಗೆಯಲ್ಲಿ ಪುಣ್ಯದ ಕೆಲಸವೆಂದು ನಂಬಿಸಿ ವಂಚನೆ:

ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ಶುಕ್ರವಾರ ನಡೆದ ಮುಹರಂ ಮೆರವಣಿಗೆಯಲ್ಲಿ ಈತ ತಾನೇ ಸ್ವತಃ ನಿಂತು ಹಾಗೂ ಇತರರನ್ನು ನಂಬಿಸಿ ಮಾತ್ರೆಗಳನ್ನು ಹಂಚುತ್ತಿದ್ದ. ಇದನ್ನು ಸೇವಿಸಿದ ಕೆಲವು ಭಕ್ತರು ತಕ್ಷಣವೇ ತೀವ್ರ ಅಸ್ವಸ್ಥರಾಗಿದ್ದಾರೆ. ಈತನ ಅನುಮಾನಾಸ್ಪದ ನಡವಳಿಕೆಯನ್ನು ಗಮನಿಸಿದ ಮಹಿಳಾ ಸ್ವಯಂಸೇವಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದರಿಂದ ಭಾರಿ ದುರಂತ ತಪ್ಪಿದೆ. ಬಂಧನದ ವೇಳೆ ಈತನ ಬಳಿ ಬರೋಬ್ಬರಿ 15,000 ವಿಷದ ಮಾತ್ರೆಗಳು ಪತ್ತೆಯಾಗಿದ್ದು, ಈಗಾಗಲೇ 30,000 ಖಾಲಿ ಕ್ಯಾಪ್ಸುಲ್ ಹಾಗೂ 50 ಕೆಜಿ ಇಲಿ ವಿಷವನ್ನು ಈತ ಖರೀದಿಸಿದ್ದ ಎನ್ನಲಾಗಿದೆ.

ಅಂತರರಾಷ್ಟ್ರೀಯ ಲಿಂಕ್ ಶಂಕೆ? ತನಿಖೆ ಚುರುಕು:

ಆರೋಪಿಯ ತಾಯಿ ಮತ್ತು ಸಹೋದರಿ ಇರಾನ್‌ನಲ್ಲಿ ವಾಸಿಸುತ್ತಿದ್ದು, ಈತ 2019 ರಿಂದ 2025 ರ ನಡುವೆ ಸುಮಾರು 19 ಬಾರಿ ಇರಾನ್ ಹಾಗೂ ಇರಾಕ್‌ಗೆ ಭೇಟಿ ನೀಡಿದ್ದಾನೆ. ಕೇವಲ 19 ದಿನಗಳ ಅಂತರದಲ್ಲಿ ಮೂರು ಬಾರಿ ಇರಾನ್‌ಗೆ ಪ್ರಯಾಣ ಬೆಳೆಸಿರುವುದು ಪೊಲೀಸರಲ್ಲಿ ತೀವ್ರ ಅನುಮಾನ ಮೂಡಿಸಿದೆ. ಹೆಂಡತಿ ಬಿಟ್ಟು ಹೋದ ಹಿನ್ನೆಲೆಯಲ್ಲಿ ಈತ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎಂದು ನೆರೆಹೊರೆಯವರು ಹೇಳುತ್ತಿದ್ದರೂ, ಪೊಲೀಸರು ಈತನ ಬ್ಯಾಂಕ್ ಖಾತೆ ಹಾಗೂ ಅಂತರರಾಷ್ಟ್ರೀಯ ನಂಟಿನ ಕುರಿತು ತೀವ್ರ ತನಿಖೆ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles