SUDDIKSHANA KANNADA NEWS/ DAVANAGERE/ DATE:15-10-2024
ದಾವಣಗೆರೆ: ರಾಜ್ಯದಲ್ಲಿ ಭಾರೀ ಮಳೆ ಮುಂದುವರಿದಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿಯೂ ಮಳೆಯಾಗುತ್ತಿದ್ದು, ಜಲಾಶಯವು ಮತ್ತೆ ಭರ್ತಿಯಾಗಿದೆ. ಈ ವರ್ಷದಲ್ಲಿ ಮೂರ್ನಾಲ್ಕು ಬಾರಿ ಭರ್ತಿಯಾಗಿದ್ದ ಭದ್ರಾ ಜಲಾಶಯವು 186 ಅಡಿ ಗರಿಷ್ಠ ಮಟ್ಟ ತಲುಪಿದೆ. ಅಕ್ಟೋಬರ್ ತಿಂಗಳಿನಲ್ಲಿ ಭದ್ರಾ ಡ್ಯಾಂ ಭರ್ತಿಯಾಗಿದ್ದು ತುಂಬಾನೇ ಕಡಿಮೆ.
ಈ ವರ್ಷ ಅತ್ಯಧಿಕ ಮಳೆಯಾಗಿದ್ದು, ಜುಲೈ ತಿಂಗಳಿನಿಂದ ಆರಂಭವಾದ ಮಳೆಯು ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ನಲ್ಲಿಯೂ ಸುರಿಯುತ್ತಿದ್ದು, ಭದ್ರಾ ಜಲಾಶಯವು 186 ಅಡಿ ತಲುಪಿದ್ದು ರೈತರ ಸಂತೋಷಕ್ಕೆ ಪಾರವೇ ಇಲ್ಲ.
ಭದ್ರಾ ಡ್ಯಾಂ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಮುಂದುವರಿದಿದ್ದು, ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಕಳೆದ ಎರಡು ದಿನಗಳ ಹಿಂದೆ ನೀರಿನ ಮಟ್ಟ 185.11 ಅಡಿ ಇತ್ತು. ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಜಲಾಶಯ ಭರ್ತಿಯಾಗುವವರೆಗೂ ಅಧಿಕಾರಿಗಳು ಕಾದಿದ್ದು, ಈಗ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನಷ್ಟೇ ಹೊರ ಹರಿವು ಹರಿಸಲಾಗುತ್ತಿದೆ.
ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 156.8 ಅಡಿ ಇತ್ತು. ಬರಗಾಲವೂ ತಲೆದೋರಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು, ಕೆರೆ ಕಟ್ಟೆಗಳು, ನದಿಗಳು ತುಂಬಿ ಹರಿದಿದ್ದವು. ಅಕ್ಟೋಬರ್ ವೇಳೆಗೆ ಜಲಾಶಯ ಸಂಪೂರ್ಣವಾಗಿ
ಭರ್ತಿಯಾಗಿರುವುದು ಭದ್ರಾ ಅಚ್ಚುಕಟ್ಟುದಾರ ಪ್ರದೇಶದ ರೈತರ ಸಂತಸ ಇಮ್ಮುಡಿಯಾಗುವಂತೆ ಮಾಡಿದೆ. ಜಲಾಶಯಕ್ಕೆ 7689 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಷ್ಟೇ ಪ್ರಮಾಣದ ನೀರು ಹೊರ ಹರಿಸಲಾಗುತ್ತಿದೆ.
ಬಲದಂಡೆ ನಾಲೆಗೆ 1400 ಕ್ಯೂಸೆಕ್, ಭದ್ರಾ ಎಡದಂಡೆ ನಾಲೆ 180 ಕ್ಯೂಸೆಕ್ ಹೊರಹರಿವು ಇದೆ. ಕ್ರಸ್ಟ್ ಗೇಟ್ ಗಳ ಮೂಲಕ 3332 ಕ್ಯೂಸೆಕ್ ಹೊರಗಡೆ ನೀರು ಹರಿಸಲಾಗುತ್ತಿದ್ದು, ಅಪ್ಪರ್ ಭದ್ರಾಕ್ಕೆ 700 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ:
DATE: 15-10-2024
ಇಂದಿನ ನೀರಿನ ಮಟ್ಟ: 186 ಅಡಿ
ಒಳಹರಿವು: 7689 ಕ್ಯೂಸೆಕ್
ಹೊರಹರಿವು: 7689 ಕ್ಯೂಸೆಕ್
ಅಪ್ಪರ್ ಭದ್ರಾ: 700 ಕ್ಯೂಸೆಕ್
ಸ್ಟೋರೇಜ್ ಕೆಪಾಟಿಸಿ: 71.535 ಟಿಎಂಸಿ
ಕ್ರಸ್ಟ್ ಗೇಟ್: 3332 ಕ್ಯೂಸೆಕ್
ಕಳೆದ ವರ್ಷದ ಇದೇ ದಿನ ನೀರಿನ ಮಟ್ಟ: 156.8 ಅಡಿ
ಕಳೆದ ವರ್ಷ ಇದೇ ದಿನ ಹೊರಹರಿವು: 3240 ಕ್ಯೂಸೆಕ್