SUDDIKSHANA KANNADA NEWS/ DAVANAGERE/ DATE:13-10-2024
ದಾವಣಗೆರೆ: ಭದ್ರಾ ಡ್ಯಾಂ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯವು ತುಂಬಿ ತುಳುಕುತ್ತಿದೆ. ಭದ್ರಾ ಡ್ಯಾಂ ನೀರಿನ ಮಟ್ಟ 185.11 ಅಡಿ ಇದ್ದು, ಭದ್ರಾ ಅಚ್ಚುಕಟ್ಟುದಾರರಲ್ಲಿ ಸಂತಸ ಮನೆ ಮಾಡಿದೆ.
ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 157. ಅಡಿ ಇತ್ತು. ಬರಗಾಲವು ತಲೆದೋರಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು, ಕೆರೆ ಕಟ್ಟೆಗಳು, ನದಿಗಳು ತುಂಬಿ ಹರಿದಿದ್ದವು. ಅಕ್ಟೋಬರ್ ವೇಳೆಗೆ ಜಲಾಶಯದಲ್ಲಿ 185.11 ಅಡಿ ನೀರು ಇರುವುದರಿಂದ ರೈತರು ಖುಷಿಯಾಗಿದ್ದಾರೆ. ಬೇಸಿಗೆ ಬೆಳೆಗೆ ನೀರು ಸಿಗಲಿದೆ. ಹಾಗಾಗಿ, ಉತ್ತಮ ಬೆಳೆ, ಲಾಭದ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಕಳೆದ ವರ್ಷ ಅಡಿಕೆ ಬೆಳೆಗಾರರು ಅಡಿಕೆ ಮರಗಳನ್ನು ಉಳಿಸಿಕೊಳ್ಳಲು ಪರದಾಡಿದರು. ಈ ಬಾರಿ ಅಡಿಕೆ ಬೆಳೆಗಾರರಿಗೆ ಮಳೆ ಉತ್ತಮ ಬಂದಿರುವುದರಿಂದ ಯಾವುದೇ ಆತಂಕ ಇಲ್ಲ.
ಒಳಹರಿವು 6809 ಕ್ಯೂಸೆಕ್ ಇದ್ದು, ಹೊರಹರಿವು 6209 ಕ್ಯೂಸೆಕ್ ಇದೆ. ಬಲದಂಡೆ ನಾಲೆಗೆ 1400 ಕ್ಯೂಸೆಕ್, ಭದ್ರಾ ಎಡದಂಡೆ ನಾಲೆ 180 ಕ್ಯೂಸೆಕ್ ಹೊರಹರಿವು ಇದೆ. ಕ್ರಸ್ಟ್ ಗೇಟ್ ಗಳ ಮೂಲಕ 1671 ಕ್ಯೂಸೆಕ್ ಇದ್ದು, ಅಪ್ಪರ್ ಭದ್ರಾಕ್ಕೆ 700 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ: 13-10-2024
ಇಂದಿನ ನೀರಿನ ಮಟ್ಟ: 185.11 ಅಡಿ
ಒಳಹರಿವು: 6809 ಕ್ಯೂಸೆಕ್
ಹೊರಹರಿವು: 6209 ಕ್ಯೂಸೆಕ್
ಅಪ್ಪರ್ ಭದ್ರಾ: 700 ಕ್ಯೂಸೆಕ್
ಸ್ಟೋರೇಜ್ ಕೆಪಾಟಿಸಿ: 71.430 ಟಿಎಂಸಿ
ಕ್ರಸ್ಟ್ ಗೇಟ್: 1671 ಕ್ಯೂಸೆಕ್
ಕಳೆದ ವರ್ಷದ ಇದೇ ದಿನ ನೀರಿನ ಮಟ್ಟ: 157.2 ಅಡಿ
ಕಳೆದ ವರ್ಷ ಇದೇ ದಿನ ಹೊರಹರಿವು: 2681 ಕ್ಯೂಸೆಕ್