SUDDIKSHANA KANNADA NEWS/ DAVANAGERE/ DATE:01-09-2024
ದಾವಣಗೆರೆ: ಚಿತ್ರದುರ್ಗದ ಸಿರಿಗೆರೆ ತರಳಬಾಳು ಬೃಹನ್ಮಠದ ನೂತನ ಪೀಠಾಧಿಪತಿ ಯಾರೆಂದು ಘೋಷಿಸಬೇಕು, ಮಠದ ಡೀಡ್ ರದ್ದುಪಡಿಸಬೇಕು. ನಮ್ಮ ಮೇಲೆ ಹಾಕಿರುವ ಕೇಸ್ ರದ್ದುಪಡಿಸಬೇಕು. ಹಾಳಾಗಿರುವ ಶಾಲಾ ಕಾಲೇಜುಗಳು ಸರಿಯಾಗಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟಿರುವ ಉದ್ಯಮಿ ಅಣಬೇರು ರಾಜಣ್ಣ ಅವರು ಸಿರಿಗೆರೆ ಮಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಅವರು ಇನ್ನು ಮುಂದಾದರೂ ಒಳ್ಳೆ ರೀತಿಯಲ್ಲಿ ಬೆಳೆಸಬೇಕು ಎಂದು ಒತ್ತಾಯಿಸಿದರು.
ನಗರದ ಅಪೂರ್ವ ರೆಸಾರ್ಟ್ ನಲ್ಲಿ ಕರೆಯಲಾಗಿದ್ದ ಭಕ್ತರು, ಹಿತೈಷಿಗಳು, ಆಪ್ತರು, ಮಾಜಿ ಶಾಸಕರ ಸಭೆಯ ಬಳಿಕ ಮಾಧ್ಯಮಗೋಷ್ಛಿಯಲ್ಲಿ ಮಾತನಾಡಿದ ಅವರು, ನಾವು ಐವತ್ತು ಜನರು ಸೇರಿ ಸಭೆ ನಡೆಸಿದ್ದೇವೆ. ಈ ವಿಚಾರಗಳನ್ನು ಗುರುಗಳಿಗೆ ತಲುಪಿಸಬೇಕೆಂಬ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದ್ದೇವೆ. ಭಾರೀ ಜನರನ್ನು ಸೇರಿಸುವಂಥ ಸಭೆ ಅಲ್ಲ. ಇಂಥ ಸಭೆ ನಡೆಸಿ ವಿಚಾರ ತಿಳಿಸಬೇಕಿದೆ. ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಬೇಕೆಂಬ ಬೇಡಿಕೆಗೆ ಮನ್ನಣೆ ನೀಡಿಲ್ಲ. ಹಾಗಾಗಿ, ಮಾಧ್ಯಮದ ಮುಂದೆ ಬಂದಿದ್ದೇವೆ ಎಂದು ಹೇಳಿದರು.
ಸಿರಿಗೆರೆ ಗುರುಗಳು ಸಮಾಜಕ್ಕೆ ದ್ರೋಹ ಮಾಡಿದ್ದಾರೆ. ದ್ರೋಹ ಮಾಡಬಾರದು. 2 ಸಾವಿರ ಕೋಟಿ ರೂಪಾಯಿ ಒಬ್ಬರ ಹೆಸರಿನಲ್ಲಿಟ್ಟುಕೊಂಡು ಬೇರೆ ವಿಚಾರಗಳನ್ನು ನಮ್ಮಂಥವರಿಗೆ ಹಾಗೂ ಹಳ್ಳಿ ಜನರಿಗೆ ಹೇಳಬಾರದು. ನಾವು ಇವತ್ತು
ಅಪಾರವಾದ ಭಕ್ತಿ, ಗೌರವ ಇದೆ. ಬೇಕಾದಷ್ಟು ಗೌರವ ಕೊಡುವವರು ಇದ್ದಾರೆ. ನೆಚ್ಚಿನ ಪೀಠಾಧಿಪತಿ ನೇಮಕ ಆಗಬೇಕು. ಸಾಯುವರೆಗೂ ಗುರುಗಳು ಮಾರ್ಗದರ್ಶನ ಮಾಡಲಿ. ಇದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಶಾಲಾ ಕಾಲೇಜುಗಳು ಚೆನ್ನಾಗಿ ನಡೆಯಬೇಕು. ಮಠದಿಂದ ಸಮಾಜದ ಬಾಂಧವರಿಗೆಲ್ಲರಿಗೂ ಉಪಯೋಗವಾಗಬೇಕು ಎಂದು ಒತ್ತಾಯಿಸಿದರು.
ನಾವು ಶಾಲಾ ಕಾಲೇಜುಗಳಿಗೆ ದಾನ ಧರ್ಮ ಯಾಕೆ ಕೊಡೋದು? ಸ್ವಂತ ಮಾಡಿಕೊಳ್ಳುವುದಕ್ಕಾ? ಸ್ವಂತಕ್ಕೆ ಇಟ್ಟುಕೊಳ್ಳಬೇಕಾ? ದಾನ, ಧರ್ಮ ನಾವು ಯಾಕೆ ಕೊಡಬೇಕು? ಸಮಾಜದ ಒಳಿತಿಗಾಗಿ ಕೊಡುವುದು. ಇದು ಸಮಾಜಕ್ಕೆ ಉಪಯೋಗ ಆಗಬೇಕು. ಜನರಿಗೆ ಕೆರೆ ನೀರು ಬಿಡಿಸುತ್ತೇವೆ ಎನ್ನುತ್ತಾರೆ. ಇದಕ್ಕೆ ಸರ್ಕಾರ ಇದೆ. ಅದು ಮಾಡುತ್ತದೆ. ಗುರುಗಳು ಶಾಸಕರು, ಸಚಿವರನ್ನು ಕರೆದು ಹೇಳಿದ್ದಾರೆ. ಹಾಗಾಗಿ, ಗುರುಗಳ ಮಾತಿಗೆ ಗೌರವ ನೀಡಿ ಶಾಸಕರು, ಸಚಿವರು ಮಾಡಿದ್ದಾರೆ ಎಂದು ತಿಳಿಸಿದರು.