SUDDIKSHANA KANNADA NEWS/ DAVANAGERE/ DATE:15-07-2024
ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ಸರಳತೆ ಪ್ರಯಾಣಿಕರು ಫಿದಾ ಆದರು.
ಬೆಂಗಳೂರಿಗೆ ಹೋಗಬೇಕಾದರೆ ಸ್ವಂತ ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದ ಶಾಮನೂರು ಶಿವಶಂಕರಪ್ಪರು, ಸ್ವಂತ ಕಾರಿನಲ್ಲಿಯೂ ತೆರಳುತ್ತಿದ್ದರು. ಮಾತ್ರವಲ್ಲ, ಸಚಿವರಾಗಿದ್ದಾಗ ಸರ್ಕಾರಿ ವಾಹನದ ವಿಚಾರ ಬಂದಾಗ ಸ್ವಂತ ಕಾರಿನಲ್ಲಿಯೇ ಓಡಾಡುತ್ತೇನೆ. ಸರ್ಕಾರಿ ಕಾರು ಬೇಡ ಎಂದು ಖಡಕ್ ಆಗಿಯೇ ಹೇಳಿದ್ದರು. ಸ್ವಂತ ಕಾರುಗಳು, ಸ್ವಂತ ಹೆಲಿಕಾಪ್ಟರ್ ಇದ್ದರೂ 94 ವರ್ಷದ ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರು ರೈಲಿನಲ್ಲಿ ಪ್ರಯಾಣ ಬೆಳೆಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ವಯಸ್ಸಿನಲ್ಲಿಯೂ ಚಿರಯುವಕನಂತೆ ಖುಷಿ ಖುಷಿಯಾಗಿಯೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಮೂಲಕ ಇತರರಿಗೂ ಮಾದರಿಯಾದರು. ಸದಾ ತಮ್ಮ ಸ್ವಂತ ಹೆಲಿಕ್ಯಾಪ್ಟರ್ ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಶಾಮನೂರು ಶಿವಶಂಕರಪ್ಪರು ವಂದೇ ಮಾತರಂ ಎಕ್ಸ್ ಪ್ರೆಸ್ ರೈಲು ಹತ್ತುತ್ತಿದ್ದಂತೆ ಎಲ್ಲರೂ ನಮಸ್ಕರಿಸಿದರು. ಇದಕ್ಕೆ ಪ್ರತಿ ನಮಸ್ಕರಿಸಿದ ಶಾಮನೂರು ಶಿವಶಂಕರಪ್ಪರು, ಖುಷಿ ಖುಷಿಯಾಗಿಯೇ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿಯೂ ಶಾಮನೂರು ಶಿವಶಂಕರಪ್ಪರ ಜೊತೆ ಪ್ರಯಾಣ ಬೆಳೆಸಿದರು.