SUDDIKSHANA KANNADA NEWS/ DAVANAGERE/ DATE:11-07-2024
ದಾವಣಗೆರೆ: ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವು ಕಡಿಮೆಯಾಗಿದ್ದು, ಜಲಾಶಯದ ನೀರಿನ ಮಟ್ಟ 136 ಅಡಿ ಏರಿಕೆಯಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 140.10 ಅಡಿ ಇತ್ತು. ನಾಲ್ಕು ಅಡಿ ನೀರು ಹೋದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯದ ನೀರಿನ ಮಟ್ಟ 136 ಅಡಿ ಆಗಿದೆ. ಜಲಾಶಯಕ್ಕೆ 6246 ಕ್ಯೂಸೆಕ್ ಒಳಹರಿವಿದ್ದು,
ನಿನ್ನೆಗೆ ಹೋಲಿಸಿದರೆ ಇಂದು ಸುಮಾರು ಒಂದು ಸಾವಿರ ಕ್ಯೂಸೆಕ್ ನಷ್ಟು ನೀರು ಕಡಿಮೆಯಾಗಿದೆ. ಹೊರ ಹರಿವು 158 ಕ್ಯೂಸೆಕ್ ಇದೆ.
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾನಯನ ಪ್ರದೇಶದಲ್ಲಿ ದಿನ ಕಳೆದಂತೆ ಮಳೆ ಕುಂಠಿತವಾಗುತ್ತಿದ್ದು, ಭದ್ರಾ ಜಲಾಶಯದ ಅಚ್ಚುಕಟ್ಟುದಾರರು, ರೈತರು, ಜನರ ಆತಂಕಕ್ಕೆ ಕಾರಣವಾಗಿದೆ. ಹೋದ ವರ್ಷ 140.1 ಅಡಿ ನೀರು
ಇದ್ದರೆ, ಇಂದು 136 ಅಡಿ ಮಾತ್ರ ಸಂಗ್ರಹವಿದ್ದು, ಜಲಾಶಯ ಭರ್ತಿಯಾಗಲು ಬೇಕು ಇನ್ನೂ 50 ಅಡಿ ನೀರು.
ಶಿವಮೊಗ್ಗ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದರೆ, ಭದ್ರಾ ಜಲಾಶಯಕ್ಕೆ ಬರುವ ನೀರು ಕಡಿಮೆಯಾಗಿದೆ. ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದರಷ್ಟೇ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರಲಿದೆ.
ಕಳೆದ ವರ್ಷ ಇದೇ ಜಲಾಶಯದ ನೀರಿನ ಮಟ್ಟ 140 ಅಡಿ ದಾಟಿತ್ತು. ಆದ್ರೆ, ಈ ವರ್ಷ ಇನ್ನೂ ಆರು ಅಡಿ ನೀರು ಹರಿದು ಬರಬೇಕಿದೆ. ಹಾಗಾಗಿ, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಜನರ ಆತಂಕಕ್ಕೆ ಕಾರಣವಾಗಿದೆ.
ಶನಿವಾರ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಆದ್ರೆ, ಭದ್ರಾ ಜಲಾನಯನ, ಮಲೆನಾಡು ಪ್ರದೇಶದಲ್ಲಿ ಮಳೆ ಮುಂದವರಿದಿದ್ದು, ಸಾಧಾರಣ ಮಳೆಯಾಗುತ್ತಿದೆ. ಮಳೆಯು ಅಬ್ಬರಿಸಿ ಬೊಬ್ಬಿರಿದರೆ ಡ್ಯಾಂಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲಿದೆ. ಸದ್ಯಕ್ಕೆ ಎಂಟು ಸಾವಿರದ ಏಳನೂರು ಎಪ್ಪತ್ತೇಳು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 133.1 ಅಡಿ ಸಂಗ್ರಹವಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಡ್ಯಾಂನ ನೀರಿನ ಮಟ್ಟ ಆರೂವರೆ ಅಡಿ ಕಡಿಮೆ ಸಂಗ್ರಹವಿದೆ.
ಮಲೆನಾಡಿಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಇದರಿಂದಾಗಿ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಂಠಿತಗೊಂಡಿದೆ. ಶುಕ್ರವಾರ ಈ ವರ್ಷ ಅತ್ಯಧಿಕ ಒಳಹರಿವು ಬಂದಿತ್ತು. 16171 ಕ್ಯೂಸೆಕ್ ಒಳ ಹರಿವಿತ್ತು. ಆದ್ರೆ. ಶನಿವಾರ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಜಲಾಶಯಕ್ಕೆ ಕೇವಲ 7736 ಕ್ಯೂಸೆಕ್ ಮಾತ್ರ ಹರಿದು ಬಂದಿತ್ತು. ಡ್ಯಾಂಗೆ ಕೇವಲ ಒಂದೂವರೆ ಅಡಿ ನೀರು ಮಾತ್ರ ಜಲಾಶಯಕ್ಕೆ ಹರಿದು ಬಂದಿತ್ತು. ಒಂದೇ ದಿನ ಮೂರು ಪಟ್ಟು ನೀರು ಹೆಚ್ಚು ಒಳಹರಿವು ಇತ್ತಾದರೂ ಒಂದೇ ದಿನಕ್ಕೆ ಒಳಹರಿವು ಭಾರೀ ಪ್ರಮಾಣದಲ್ಲಿ ಕುಂಠಿತಗೊಂಡಿತ್ತು.
ಜಲಾಶಯದ ನೀರಿನ ಮಟ್ಟ 186 ಅಡಿ ತಲುಪುವುದು ಕಷ್ಟ ಎಂದು ಹೇಳಲಾಗುತ್ತಿದೆ. ಹವಾಮಾನ ಇಲಾಖೆಯು ಇನ್ನೂ ಒಂದು ವಾರ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಮಳೆ ಮುಂದುವರಿದರೆ ಜಲಾಶಯಕ್ಕೆ ನೀರಿನ ಮಟ್ಟ ಹೆಚ್ಚು
ಹರಿದು ಬರಲಿದೆ. ಗುರುವಾರ ಸುರಿದ ಮಳೆಯಂತೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಗರಿಷ್ಟ ಮಟ್ಟ ತಲುಪುವ ಸಾಧ್ಯತೆ ಇದೆ. ಕೇವಲ ಒಂದು ವಾರ ಮಾತ್ರವಲ್ಲ, ಒಂದು ತಿಂಗಳು ಧಾರಾಕಾರ ಮಳೆಯಾದರೆ ಜಲಾಶಯ ಈ ಬಾರಿ
ಗರಿಷ್ಠ ಮಟ್ಟ ತಲುಪಲಿದೆ.
ಭದ್ರಾ ಅಚ್ಚುಕಟ್ಟುಪ್ರದೇಶ, ಶಿವಮೊಗ್ಗ ಹಾಗೂ ಚಿತ್ರದುರ್ಗದ ರೈತರು ಹಾಗೂ ಜನರಿಗೆ ಆತಂಕ ತಂದೊಡ್ಡಿತ್ತು. ಈಗ ಮಳೆಯಾಗುತ್ತಿರುವ ಕಾರಣ ರೈತರಲ್ಲಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರುಬಿಡುವಂತಾಗಿದೆ. ಮಳೆ ಬಾರದೇ
ಇದ್ದರೆ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ ಮುಟ್ಟುವುದು ಕಷ್ಟ ಎಂದು ಹೇಳಲಾಗುತ್ತಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ:11- 07-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 136 ಅಡಿ
-
ಕೆಪಾಸಿಟಿ: 24.245 ಟಿಎಂಸಿ
-
ಒಳಹರಿವು: 6246 ಕ್ಯೂಸೆಕ್
-
ಒಟ್ಟು ಹೊರಹರಿವು: 158 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ: 140.1 ಅಡಿ
-
ಕೆಪಾಸಿಟಿ: 27.461 ಟಿಎಂಸಿ