SUDDIKSHANA KANNADA NEWS/ DAVANAGERE/ DATE:14-03-2024
ದಾವಣಗೆರೆ: ಹರಿಹರ ತಾಲೂಕಿನ ಭಾನುವಳ್ಳಿಯಲ್ಲಿ ಪ್ರತಿಮೆ ತೆರವು ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರು, ಕಾನೂನು ಪಾಲನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಭಾನುವಳ್ಳಿಯಲ್ಲಿ ಶ್ರೀ ರಾಜವೀರ ಮದಕರಿ ನಾಯಕರ ಮಹಾದ್ವಾರ ತೆರವುಗೊಳಿಸಿರುವ ಕುರಿತಂತೆ ತಮ್ಮ ಸ್ಪಷ್ಟನೆ ಬೇಕೆಂದು ಮುಖಂಡರು ಒತ್ತಾಯಿಸಿದ ವೇಳೆ ಈ ಸ್ಪಷ್ಟನೆ ನೀಡಿದ್ದಾರೆ.
ಅಧಿಕಾರಿಗಳು ಸಮಸ್ಯೆಯನ್ನು ಇತ್ಯರ್ಥ ಮಾಡುವಾಗ ಸಂವೇದನಾಶೀಲತೆಯಿಂದ ಕೆಲಸ ಮಾಡಿದಾಗ ಮಾತ್ರ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ:
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ 25 ವರ್ಷದ ಹಳೆಯ ಶ್ರೀ ರಾಜವೀರ ಮದಕರಿ ನಾಯಕರ ಮಹಾದ್ವಾರ ತೆರವುಗೊಳಿಸಿರುವುದು ಹಾಗೂ ವಾಲ್ಮೀಕಿ ಸಮಾಜದವರ ಬಂಧನ ಖಂಡಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ವಾಲ್ಮೀಕಿ ಸಮಾಜದವರು ಪ್ರಯತ್ನಿಸಿದರು. ಈ ವೇಳೆ ವಾರದೊಳಗೆ ಮಹಾದ್ವಾರ ನಿರ್ಮಾಣ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದಲ್ಲಿ 25 ವರ್ಷದ ಹಳೇಯ ಶ್ರೀ ರಾಜವೀರ ಮದಕರಿನಾಯಕರ ಮಹಾದ್ವಾರ ದಾವಣಗೆರೆಯ ಜಿಲ್ಲಾಡಳಿತ ಏಕ ಏಕಿ ತೆರವುಗೊಳಿಸಿರುವುದು ಖಂಡನೀಯ ಎಂದು ಹೇಳಿದರು.
ಜಿಲ್ಲಾಡಳಿತದ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಡಿಸಿ ಬರಲಿಲ್ಲ. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು ಡಿಸಿ ಕಛೇರಿಯ ಗೇಟ್ ಮುಂಭಾಗ ತೆರಳಿ ನುಗ್ಗಲು ಪ್ರಯತ್ನಿಸಿದಾಗ ಪರಿಸ್ಥಿತಿ ನೋಡಿ ಜಿಲ್ಲಾಧಿಕಾರಿಗಳು ಬಂದು ಅಹವಾಲು ಸ್ವೀಕರಿಸಿದರು.
ಸಮಾಜದವರು ಕೇಳವ ಪ್ರಶ್ನೆಗೆ ಉತ್ತರಿಸದೇ ಮೌನವಾದ ನಿಂತ ಘಟನೆ ನಡೆಯಿತು. ನಂತರ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ. ವೀರಣ್ಣ ಅವರು ಮಾತನಾಡಿದ ಯಾವುದೇ ಸಮಿತಿಯ ತೀರ್ಮಾನವಿಲ್ಲದೆ, ಅದೇಶ ಇಲ್ಲದೇ ತೆರವುಗೊಳಿಸಿರುವದು ಖಂಡನೀಯ, ಒಂದು ವಾರದೋಳಗಾಗಿ ಶ್ರೀ ರಾಜವೀರ ಮದಕರಿನಾಯಕರ ಮಹದ್ವಾರವನ್ನ ಪುನರ್ ಸ್ಥಾಪಿಸದೇ ಹೊದರೆ ರಾಜ್ಯದದ್ಯಾಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಹದಡಿ ಹಾಲಪ್ಪ, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಬೆಂಗಳೂರಿನ ತುಳಸಿ ರಾಮ್, ವಕೀಲ ಮಲ್ಲಿಕಾರ್ಜುನಪ್ಪ ಗುಮ್ಮನೂರು, ಆಂಜನೇಯ ಗುರೂಜಿ, ಚನ್ನಬಸಪ್ಪ ಬಿಳಚೋಡ, ರೈತ ಸಂಘದ ಮಹೇಶ್ ಬೇವಿನಹಳ್ಳಿ, ದೇವರಾಜ ಮಲ್ಲಾಪುರ, ಶಾಮನೂರು ಪ್ರವೀಣ್, ಕರುರೂ ಹನುಮಂತಪ್ಪ, ಜಿಗಳಿ ಅನಂದಪ್ಪ, ಗುಮ್ಮನೂರು ಶಂಭಣ್ಣ, ಶ್ಯಾಗಲಿ ಮಂಜುನಾಥ, ಸತೀಶ್, ಗೋಶಾಲ ಸುರೇಶ, ದೇವರಬೆಳಕೆರೆ ಮಹೇಶ್ವರಪ್ಪ, ಚಂದ್ರಪ್ಪ, ಫಣಿಯಾಪುರ ಚಂದ್ರು, ಸುನೀಲ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜದ ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.