SUDDIKSHANA KANNADA NEWS/ DAVANAGERE/ DATE:11-05-2024
SUDDIKSHANA KANNADA NEWS/ DAVANAGERE/ DATE:11-05-2024
ದಾವಣಗೆರೆ: ಐ.ಎ.ಎಸ್. ಪರೀಕ್ಷೆಗೆ ಓದಲೇಬೇಕೆಂದು ಛಲತೊಟ್ಟಿದ್ದ ಸಿರಿಗೆರೆಯ ವಿದ್ಯಾರ್ಥಿನಿ ವೈ. ಸ್. ಕಾವ್ಯ ಇದೀಗ ರಾಷ್ಟ್ರಮಟ್ಟದ ಐ.ಎಫ್.ಎಸ್. ಪರೀಕ್ಷೆಯಲ್ಲಿ ಏಳನೇ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.
ಸಿರಿಗೆರೆಯಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯು ನಡೆಸುತ್ತಿರುವ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೈ.ಎಸ್. ಕಾವ್ಯ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಯರದಕರೆ ಗ್ರಾಮದವರು.
ತಂದೆ ಸೋಮಶೇಖರಪ್ಪ ತಾಯಿ ರತ್ನಮ್ಮ ಅವರ ಮಗಳು.
ಕಡೂರು ಪಟ್ಟಣದಲ್ಲಿ ತರಳಬಾಳು ಸಂಸ್ಥೆಯು ನಡೆಸುತ್ತಿರುವ ವೇದಾವತಿ ಬಾಲಿಕಾ ಪ್ರೌಢಶಾಲೆಯ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ ಕಾವ್ಯ ಸಿರಿಗೆರೆ ಬಿ. ಎಲ್. ಆರ್. ಪದವಿ ಪೂರ್ವ ಕಾಲೇಜಿನಲ್ಲಿ. ಪಿಯುಸಿ ವ್ಯಾ ಸಂಗ “ಮಾಡಿದರು ಕೆಲವೇ ಅಂಕಗಳ ವ್ಯತ್ಯಾಸದಿಂದ ಬಂಗಾರದ ಪದಕ ‘ವಂಚಿತೆಯಾಗಿದ್ದ ಕಾವ್ಯ ಅವರಲ್ಲಿ ಓದುವ ಛಲವಿತ್ತು.
ಬಡತನದ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಕಾವ್ಯ ನಂತರ ಇಂಜಿನಿಯರಿಂಗ್ ಪದವಿ ಮುಗಿಸಿ ಕೆಲವು ಕಂಪನಿಯಲ್ಲಿಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದರೂ ಅವರಲ್ಲಿ ಎಎಸ್ ಪರೀಕ್ಷೆ ಪಾಸು ಮಾಡುವ ತವಕ ಇದ್ದೇ ಇತ್ತು. ಹುದ್ದೆಯನ್ನು ತ್ಯ ಜಿಸಿ ದೆಹಲಿಯ ಖಾಸಗಿ ತರಚೇತಿ ಸಂಸ್ಥೆ ಸೇರಿಕೊಂಡರು. ಹಣಕಾಸಿನ ಮುಗ್ಗಟ್ಟಿನಿಂದ ವರ್ಷದೊಳಗೆ ಮತ್ತೆ ಬೆಂಗಳೂರಿಗೆ ಹಿಂದಿರುಗಿ ತನ್ನ ಅಪೇಕ್ಷೆಯನ್ನು ಈಡೇರಿಸುವ ಸಲುವಾಗಿ ಹಟಕ್ಕೆ ಬಿದ್ದವರಂತೆ ಓದಲು ಮುಂದಾದರು. ಇದೀಗ ಅವರು ಐ.ಎಫ್.ಎಸ್. ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿದ್ದಾರೆ.
ರ್ಯಾಂಕ್ ಸಂತೋಷ ತಂದಿದೆ. ಯುಪಿಎಸ್ಸಿ ಪರೀಕ್ಷೆಗಾಗಿ 2018ರಿಂದಲೂ ಪ್ರಯತ್ನಮಾಡಿದ್ವೆ. ಹಿಂದೆ ಸಂದರ್ಶನದ ಹಂತದವರೆಗೂ ತಲುಪಿದ್ದೆ ಅಂತಿಮ ಪಟ್ಟಿಯಲ್ಲಿ ಅರ್ಹತೆ ಸಿಗಲಿಲ್ಲ. ಛಲ ಬಿಡಲಿಲ್ಲ ಎಂದು ಕಾವ್ಯ ಹೇಳಿದರು.