SUDDIKSHANA KANNADA NEWS/ DAVANAGERE/ DATE:25-12-2024
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 2024-25 ನೇ ಸಾಲಿನ ಮೊದಲಾರ್ಧದಲ್ಲಿ 5 ವರ್ಷದೊಳಗಿನ 535 ಶಿಶುಗಳು ಮೃತಪಟ್ಟಿರುವುದು ಆತಂಕಕಾರಿ ಸುದ್ದಿ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯದ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸದೇ ಇರುವುದು ರಾಜ್ಯದ ದೌರ್ಭಾಗ್ಯವಾಗಿದೆ. ಈ ಹೃದಯಹೀನ ಸರ್ಕಾರಕ್ಕೆ ಜೀವದ ಬೆಲೆಯ ಬಗ್ಗೆ ಅರಿವಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಕ್ರೂರ ಸರ್ಕಾರವೊಂದು ಅಸ್ತಿತ್ವದಲ್ಲಿದೆ ಎಂದು ಆರೋಪಿಸಿದೆ.
ಬಾಣಂತಿಯರ, ಶಿಶುಗಳ ಮರಣದ ಬಗ್ಗೆ ಸರ್ಕಾರ ಇನ್ನೂ ಗಂಭೀರವಾಗಿಲ್ಲ. ಆರೋಗ್ಯ ಸಚಿವರು ಅನಾರೋಗ್ಯ ಪೀಡಿತರಂತೆ ಆರೋಗ್ಯ ಇಲಾಖೆಯನ್ನು ಮುನ್ನಡೆಸುತ್ತಿದ್ದಾರೆ. ಸರಣಿ ಸಾವುಗಳಾಗುತ್ತಿದ್ದರೂ ಸರ್ಕಾರ ಮಾತ್ರ ಯಾವುದೋ ಮುಲಾಜಿಗೆ ಬಿದ್ದವರಂತೆ ದಿನೇಶ್ ಗುಂಡೂರಾವ್ ಅವರ ಕೈಯಲ್ಲೇ
ಇಲಾಖೆಯನ್ನಿರಿಸಿ ಸಾವಿನ ಆಟ ನೋಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.